Asianet Suvarna News Asianet Suvarna News

ಮಸೂದೆಗೆ ಸಹಿ ವಿಳಂಬ: ರಾಜ್ಯಪಾಲ ಆರಿಫ್ ವಿರುದ್ಧ ಸುಪ್ರೀಂಗೆ ಕೇರಳ ಸರ್ಕಾರ

ವಿಧಾನಸಭೆ ಅಂಗೀಕರಿಸಿದ 8 ಮಸೂದೆಗಳಿಗೆ ತಮ್ಮ ಅಂಗೀಕಾರ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕೇರಳ ಸರ್ಕಾರವು ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

The Kerala government has filed an application against Governor Arif Mohammad Khan in Supreme Court, saying that he is delay policy by not giving his assent to 8 bills akb
Author
First Published Nov 3, 2023, 7:23 AM IST

ನವದೆಹಲಿ: ವಿಧಾನಸಭೆ ಅಂಗೀಕರಿಸಿದ 8 ಮಸೂದೆಗಳಿಗೆ ತಮ್ಮ ಅಂಗೀಕಾರ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕೇರಳ ಸರ್ಕಾರವು ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ರಾಜ್ಯಪಾಲರ ಮಸೂದೆ ಅಂಗೀಕಾರ ವಿಳಂಬ ಧೋರಣೆ ವಿರುದ್ಧ ತಮಿಳುನಾಡು ಹಾಗೂ ಪಂಜಾಬ್‌ ಸರ್ಕಾರಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಕೆಲವು ತಿಂಗಳಲ್ಲಿ ಕೇರಳದಲ್ಲೂ ಇದೇ ರೀತಿಯ ಸಂಘರ್ಷ ನಡೆದಿದೆ.

ಖಾನ್‌ ಅವರು (Governor Arif Mohammad Khan) ಶಾಸನಸಭೆಯಲ್ಲಿ ಅಂಗೀಕೃತಗೊಂಡಿರುವ ಮಸೂದೆಗಳಿಗೆ ತಮ್ಮ ಒಪ್ಪಿಗೆ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇಲ್ಲಿಯವರೆಗೆ ಇಂತಹ 8 ಜನಕಲ್ಯಾಣ ಮಸೂದೆಗಳಿಗೆ ಅಂಗೀಕಾರ ಕೊಡದೆ ಜನತೆಗೆ ತೊಂದರೆಯುಂಟು ಮಾಡಿದ್ದಾರೆ. ಅವುಗಳಲ್ಲಿ 3 ಮಸೂದೆಗಳಿಗೆ 2 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ತಮ್ಮ ಸಮ್ಮತಿ ಸೂಚಿಸದಿರುವುದು ಅವರ ವಿಳಂಬ ಧೋರಣೆಗೆ ಸಾಕ್ಷಿಯಾಗಿದೆ. ರಾಜ್ಯಪಾಲರು ಸಂವಿಧಾನದ ಪರಿಚ್ಛೇದ 14, 21 ಹಾಗೂ 200ನ್ನು ಉಲ್ಲಂಘನೆ ಮಾಡಿದ್ದಾರೆ’ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.

ಕೋಮುದ್ವೇಷ ಪೋಸ್ಟ್‌: ಕೇಂದ್ರ ಸಚಿವ ಆರ್‌ಸಿ ಮೇಲೆ ಮತ್ತೊಂದು ಕೇಸು

ಕೊಚ್ಚಿ: ಕೇರಳದಲ್ಲಿ ಸಂಭವಿಸಿದ್ದ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ (Rajeev Chandrasekhar) ಅವರು ಸಾಮಾಜಿಕ ಜಾಲತಾಣದಲ್ಲಿ ದ್ವೇಷಕಾರಿ ಪೋಸ್ಟ್‌ (Communal hatred post) ಹಾಕಿದ್ದಾರೆ ಎಂಬ 2ನೇ ದೂರು ದಾಖಲಾಗಿದ್ದು, ಈ ಸಂಬಂಧ ಕೇರಳ ಪೊಲೀಸರು ಎರಡನೇ ಬಾರಿ ಪ್ರಕರಣ ದಾಖಲಿಸಿದ್ದಾರೆ.

ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಸಂಚಾಲಕ (Congress Social Media Coordinator) ಪಿ. ಸರೀನ್‌ ಅವರು ನೀಡಿ ದೂರಿನ ಅನ್ವಯ ಎರ್ನಾಕುಲಂ ಪೊಲೀಸರು ರಾಜೀವ್‌ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ವಕ್ತಾರ ಅನಿಲ್‌ ಆ್ಯಂಟನಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಸರೀನ್‌ ಅವರು ನೀಡಿದ ದೂರಿನ ಅನ್ವಯ ದ್ವೇಷಕಾರಿ ಪೋಸ್ಟ್‌ ಹಾಕಿ ಎರಡು ಕೋಮುಗಳ ನಡುವೆ ಸಾಮರಸ್ಯ ಹಾಳು ಮಾಡುವ ಯತ್ನದ ಮೇಲೆ ರಾಜೀವ್‌ ಹಾಗೂ ಅನಿಲ್ ಅವರ ಮೇಲೆ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್‌ 120 (ಒ) ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 153 ಹಾಗೂ 153ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನೀಲಿ ಕಣ್ಣು ತೆಳ್ಳಗೆ ಬೆಳ್ಳಗೆ... ಆಟಗಾರರ ತಾಳಕ್ಕೆ ಕುಣಿದ ಯುನೈಟೆಡ್ ಏರ್‌ಲೈನ್ಸ್‌ : ಕೇಸ್ ಜಡಿದ ಗಗನಸಖಿಯರು..!

ಈ ಕುರಿತು ,ಮೊದಲ ಪ್ರಕರಣ ದಾಖಲಾದಾಗ ರಾಜೀವ್‌ ಚಂದ್ರಶೇಖರ್‌ ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್‌ ವತಿಯಿಂದ ಹಮಾಸ್‌ ಬಂಡುಕೋರರನ್ನು ಸಮಾಧಾನಪಡಿಸುವ ತಂತ್ರ ಎಂದು ಹರಿಹಾಯ್ದಿದ್ದರು.

ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಜೀವ ಬೆದರಿಕೆ ಕರೆ

ಕೊಚ್ಚಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ದೂರವಾಣಿ ಕರೆ ಮೂಲಕ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಬುಧವಾರ ಸಂಜೆ ಪೊಲೀಸ್‌ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಅನಾಮಧೇಯ ವ್ಯಕ್ತಿಯೊಬ್ಬ ಪಿಣರಾಯಿ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ. ಕರೆ ಬಂದ ದೂರವಾಣಿ ಸಂಖ್ಯೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಬಗ್ಗೆ ಎಲ್ಲಾ ರೀತಿಯ ತನಿಖೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios