Asianet Suvarna News Asianet Suvarna News

ಈಗಲ್ಲ ಅಂದ್ರೆ ಎಂದೂ ಇಲ್ಲ: ರಜನಿ ಪಾಲಿಟಿಕ್ಸ್ ಎಂಟ್ರಿಗಾಗಿ ಹೆಚ್ಚಿದ ಒತ್ತಾಯ

ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಕೇವಲ 8 ತಿಂಗಳಷ್ಟೇ ಬಾಕಿ ಉಳಿದಿದ್ದು, ನಟ ರಜನೀಕಾಂತ್‌ ಪಾಲಿಟಿಕ್ಸ್ ಎಂಟ್ರಿಗಾಗಿ ಒತ್ತಡ ಹೆಚ್ಚಾಗಿದೆ. ಪಾಲಿಟಿಕ್ಸ್‌ಗೆ ಎಂಟ್ರಿ ಕೊಡ್ತಾರಾ ತಲೈವಾ..?

Clamour for Rajinikanth to join politics grows, posters with 'now or never' surface in Vellore
Author
Bangalore, First Published Sep 8, 2020, 11:56 AM IST

ಚೆನ್ನೈ(ಸೆ.08): ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಕೇವಲ 8 ತಿಂಗಳಷ್ಟೇ ಬಾಕಿ ಉಳಿದಿದ್ದು, ನಟ ರಜನೀಕಾಂತ್‌ ಪಾಲಿಟಿಕ್ಸ್ ಎಂಟ್ರಿಗಾಗಿ ಒತ್ತಡ ಹೆಚ್ಚಾಗಿದೆ. ತಮ್ಮ ರಾಜಕೀಯ ಪಕ್ಷ ಸ್ಥಾಪನೆಯ ಕುರಿತಂತೆ ಸ್ಪಷ್ಟವಾಗಿ ಏನೂ ಹೇಳದ ನಟ ಗುಟ್ಟು ಉಳಿಸಿಕೊಂಡಿದ್ದಾರೆ.

ಇದರ ಬೆನ್ನಲ್ಲೇ, ರಜನೀಕಾಂತ್‌ ಅವರು ಆದಷ್ಟು ಶೀಘ್ರ ತಮ್ಮ ರಾಜಕೀಯ ನಡೆಯನ್ನು ಘೋಷಿಸಬೇಕು. ತಮಿಳುನಾಡು ರಾಜಕೀಯ ಮತ್ತು ಸರ್ಕಾರದಲ್ಲಿ ಬದಲಾವಣೆ ತರಬೇಕು ಎಂದು ಆಗ್ರಹಿಸಿದ ಪೋಸ್ಟರ್‌ಗಳು ವೆಲ್ಲೂರು ಜಿಲ್ಲೆಯಲ್ಲಿ ಕಾಣಿಸಿಕೊಂಡಿವೆ.

1 ಸಿನಿಮಾಗೆ 60 ಕೋಟಿ, 170ಕ್ಕೂ ಹೆಚ್ಚು ಫಿಲ್ಮ್: ರಜನಿ ಬಗ್ಗೆ ನೀವರಿಯದ ಸಂಗತಿಗಳಿವು

‘ಈಗ ಅಲ್ಲದಿದ್ದರೆ ಯಾವತ್ತೂ ಇಲ್ಲ’ ಎಂದು ಬರೆದಿರುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಅಲ್ಲದೇ ಈ ಪೋಸ್ಟರ್‌ನಲ್ಲಿ ರಜನೀಕಾಂತ್‌ ಅವರ ಕೆಲವೊಂದು ಜನಪ್ರಿಯ ಘೋಷಣೆಗಳನ್ನು ಕೂಡ ಬರೆಯಲಾಗಿದೆ.

Clamour for Rajinikanth to join politics grows, posters with 'now or never' surface in Vellore

ಮಾರ್ಚ್ 12ರಂದು ರಜನಿಕಾಂತ್ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜಕೀಯ ಪಕ್ಷಸ್ಥಾಪನೆಯ ಘೋಷಣೆ ಮಾಡಿದ್ದರು. ಆದರೆ, ಪಕ್ಷದ ಹೆಸರು ಮತ್ತು ಚಿನ್ಹೆಯನ್ನು ಬಿಡುಗಡೆ ಮಾಡಿರಲಿಲ್ಲ.

ನಟ ರಜನೀಕಾಂತ್‌ಗೆ 15 ವರ್ಷದ ಬಾಲಕನ ಹುಸಿಬಾಂಬ್‌ ಬೆದರಿಕೆ!

ರಜನಿ ಮಕ್ಕಳ ಮಂಡ್ರಂನಲ್ಲಿ ನಟನ ರಾಜಕೀಯ ಪ್ರವೇಶಕ್ಕೆ ಭಾರೀ ಒತ್ತಾಯ ಕಂಡು ಬಂದಿದೆ. ಕೊರೋನಾದಿಂದಾಗಿ ರಜನೀಕಾಂತ್ ರಜನಿ ರಾಜಕೀಯ ಚಟುವಟಿಗಳು ಸ್ಥಗಿತವಾಗಿತ್ತು.

ವಿಧಾನಸಭಾ ಚುನಾವಣೆ ಸಮೀಪಿಸುವಾಗ ಸುನಾಮಿ ಬರುತ್ತದೆ ಎಂದು ರಜನೀಕಾಂತ್ ಹೇಳಿ ದೊಡ್ಡ ರಾಜಕೀಯ ಬದಲಾವಣೆಯ ಹಿಂಟ್ ಕೊಟ್ಟಿದ್ರು. ಆದರೆ ದುರಾದೃಷ್ಟವಶಾತ್ ಕೊರೋನಾ ವಕ್ಕರಿಸಿದೆ. ಇತ್ತೀಚೆಗೆ ನಟ ತಮಿಳುನಾಡು ವಿಧಾನಸಭೆಯಲ್ಲಿ ಸ್ಪರ್ಧಿಸುವ ಇಚ್ಛೆ ಇಲ್ಲ. ತಮಿಳುನಾಡು ಮುಖ್ಯಮಂತ್ರಿ ಆಗುವ ಕನಸನ್ನು ಎಂದೂ ಕಂಡವನಲ್ಲ ಎಂದು ಹೇಳಿದ್ದರು.

Follow Us:
Download App:
  • android
  • ios