ನಟ ರಜನೀಕಾಂತ್‌ಗೆ 15 ವರ್ಷದ ಬಾಲಕನ ಹುಸಿಬಾಂಬ್‌ ಬೆದರಿಕೆ| 108 ಆ್ಯಂಬುಲೆನ್ಸ್‌ ಕಂಟ್ರೋಲ್‌ ರೂಮ್‌ಗೆ ಹುಸಿ ಕರೆ

ಚೆನ್ನೈ(ಜೂ.20): ನಟ ರಜನಿಕಾಂತ್‌ ಅವರ ನಿವಾಸದಲ್ಲಿ ಬಾಂಬ್‌ ಇಡಲಾಗಿದೆ ಎಂದು 15 ವರ್ಷದ ಬಾಲಕನೋರ್ವ 108 ಆ್ಯಂಬುಲೆನ್ಸ್‌ ಕಂಟ್ರೋಲ್‌ ರೂಮ್‌ಗೆ ಹುಸಿ ಕರೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.

ರಜನಿಕಾಂತ್‌ಗೆ ಕೊರೋನಾ ಪಾಸಿಟಿವ್‌; ಸುಳ್ಳು ಸುದ್ದಿ ಹಬ್ಬಿಸಿದ ನಟನ ವಿರುದ್ಧ ಫ್ಯಾನ್ಸ್ ಗರಂ!

ಬಾಂಬ್‌ ಸ್ಫೋಟದ ಬಗ್ಗೆ ಹೀಗೊಂದು ಕರೆ ಬಂದಾಕ್ಷಣ ಪೊಲೀಸರು ಬಾಂಬ್ ‌ನಿಷ್ಕ್ರಿಯ ದಳದೊಂದಿಗೆ ರಜನಿಕಾಂತ್‌ ನಿವಾಸಕ್ಕೆ ತೆರಳಿದ್ದಾರೆ. ಆದರೆ ಅಲ್ಲಿ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಬಳಿಕ ಪೊಲೀಸರು ಕರೆ ದಾಖಲೆ ಜಾಡು ಹಿಡಿದು ತನಿಖೆ ನಡೆಸಿದಾಗ 15 ವರ್ಷದ ಬಾಲಕ ಹುಸಿ ಕರೆ ಮಾಡಿದ್ದು ಬಯಲಾಗಿದೆ.

ಸದ್ಯ ಪೊಲೀಸರು ಬಾಲಕನಿಗೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ.