ದೆಹಲಿಯಲ್ಲಿ ಸಿಜೆಪಿ ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪುಟ್ಟ ಬಾಲಕನೊಬ್ಬನ ವಿಡಿಯೋ ವೈರಲ್ ಆಗಿದೆ. ಹಪ್ಪಳ ಮಾರುವ ದೀಪಾಂಶು ಎಂಬ ಬಾಲಕ ಇಲ್ಲಿ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತಾ?
ದೆಹಲಿಯಲ್ಲಿ ಸಿಜೆಪಿ ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ಅ.10 ರಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಅದರ ಕಾವು ನಿನ್ನೆಯಿಂದಲೇ ಮೀಮ್ಸ್‌ಗಳು, ಬಂಧನವಾಗುವುದು, ರಿಲೀಸ್ ಆಗುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಅಷ್ಟೇ ಅಲ್ಲದೇ ಕೆಲ ಹೃದಯ ತಟ್ಟುವಂತ ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲಿ ಇದು ಅಷ್ಟಕ್ಕೂ ಆ ಪುಟ್ಟ ಬಾಲಕ ಹೇಳಿದ್ದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.
ಎಲ್ಲಾರೂ ಬದುಕುವುದು ಹೊಟ್ಟೆಗಾಗಿ!
ಈ ಹೀಗೆ ಪ್ರತಿಭಟನಾನಿರತರ ಬಳಿ ಒಂದು ಹುಡುಗ ಹಪ್ಪಳ ಹೊತ್ತು ನಡೆಯುತ್ತಾನೆ. ಅವನ ಹೆಸರೇ ದೀಪಾಂಶು. ಅಷ್ಟೇ ಅಲ್ಲ ಹಪ್ಪಳ ಬೇಕಾ ಎಂದು ಕೇಳುತ್ತಾ ಹೋರಟಾಗ ಒಬ್ಬ ವಿದ್ಯಾರ್ಥಿ ಅವನನ್ನು ತಡೆಯುತ್ತಾನೆ. ಅಷ್ಟೇ ಒಂದು ಬಾರಿ, ತಡೆದು ನಿಲ್ಲಿಸಿದಾಗ, ಮೌನವಾಗಿ ಅವನನ್ನು ದಿಕ್ಕರಿಸಿ ಮುಂದಕ್ಕೆ ಹೊರಡುತ್ತಾನೆ. ಎರಡನೇ ಬಾರಿಗೆ ತಡೆದಾಗ ನಿಲ್ಲುತ್ತಾನೆ. ಆಗ ಆ ವಿದ್ಯಾರ್ಥಿ ಹೇಳಿದ್ದೇನು? ಅದಕ್ಕೆ ಆ ಪುಟ್ಟ ವ್ಯಾಪಾರಿ ಹೇಳಿದ್ದೇನು? ನೋಡೋಣ ಬನ್ನಿ.
ವಿದ್ಯಾರ್ಥಿ ಹೇಳಿದ್ದೇನು?
ಹಪ್ಪಳ ಹೊತ್ತ ದೀಪಾಂಶು ಬಳಿ ಹೋಗಿ, ಹಪ್ಪಳದ ಬುಟ್ಟಿ ಇಳಿಸಿ, ಅವನಿಗೆ ವಿದ್ಯಾರ್ಥಿ, ನೋಡು ನಿನ್ನ ಹೆಸರು ಏನು ಪುಟ್ಟ ಅಂತ ಕೇಳುತ್ತಾನೆ. ಆಗ ಪುಟ್ಟ ಬಾಲಕ ದೀಪಾಂಶು ಎಂದು ಹೇಳುತ್ತಾನೆ. ಆಗ ವಿದ್ಯಾರ್ಥಿ ನೋಡು ಇಲ್ಲಿ ಸೇರಿದ್ದಾರಲ್ಲ, ಅವರೆಲ್ಲ ನಿನ್ನಂತ ಅದೆಷ್ಟೋ ಮಕ್ಕಳಿಗೆ ಭವಿಷ್ಯಕ್ಕಾಗಿ ಇವತ್ತು ಬೀದಿಗೆ ಇಳಿದಿದ್ದಾರೆ. ಇವರ ಬಳಿ ದುಡ್ಡು ತೆಗೆದುಕೊಳ್ಳುತ್ತಿಯಾ ಅಂತಾ ಕೇಳುತ್ತಾನೆ. ಆಗ ಆ ಹುಡುಗ ಹೇಳಿದ್ದೇನು ಗೊತ್ತಾ? ಎಲ್ಲರೂ ಬದುಕುವುದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ, ಆದರೆ ಇವತ್ತು ನಿಮ್ಮ ಮಾತು ನನ್ನ ಹೃದಯ ತಟ್ಟಿದೆ. ಆಯ್ತು ನನಗೆ ದುಡ್ಡು ಬೇಡ, ಪ್ರಿಯಲ್ಲೇ ಹಂಚೋಣ ಎಂದು ಹಂಚುತ್ತಾನೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್!
ಜಾಲತಾಣದಲ್ಲಿ ಇದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಹಲವಾರು ಜನ ಈ ವಿಡಿಯೋವನ್ನು ಶೇರ್ ಹಾಗೂ ಕಾಮೆಂಟ್ ಮೂಲಕ ಪ್ರತಿಕ್ರಿಸಿದ್ದಾರೆ. ಅವನು ದುಡಿದು ತಿನ್ನುವವನು, ಅವನಿಗೆ ಹೀಗೆ ಮಾಡಬೇಡಿ, ದಯವಿಟ್ಟು ಅವನಿಗೆ ಹಣ ಕೊಡಿ ಎಂದು ಒಬ್ಬುರು ಹೇಳಿದರೆ, ಇನ್ನೊಬ್ಬರು, ಬಾಲಕನ ವಯಸ್ಸು ಚಿಕ್ಕದಿರಬಹುದು, ಆದರೆ ಮನಸ್ಸು ದೊಡ್ಡದು. ಅದರಲ್ಲಿ ಯಾವುದೇ ಕಲ್ಮಶ ಇಲ್ಲಾ ಎನ್ನುವ ಕಾಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಸುರಿಮಳೆಗೈಯುತ್ತಿವೆ.
ಇಂದು ಜಾರಿಯಲ್ಲಿರೂವ ಪ್ರತಿಭಟನೆ!
ಈಗಾಗಲೇ ಸಾವಿರಾರೂ ಜನ ಈಗಾಗಲೇ ಡಿಟೈನ್ ಆಗಿದ್ದಾರೆ. ಇನ್ನು ಕೆಲವರು ಪೊಲೀಸರ ಲಾಟಿ ಏಟಿಗೆ ಗುರಿಯಾಗಿದ್ದಾರೆ. ಅಲ್ಲದೇ, ದೀಪ್ಕೆ ಅಶುತೋಶ, ರಾಠಿ ಸೇರಿ ಹಲವರ ರಿಲೀಸ್ ಸಹ ಆಗಿವೆ. ಈ ನಿಟ್ಟಿನಲ್ಲಿ ಹಲವು ರೀತಿಯ ಅಡೆತಡೆಗಳಿದ್ದರು, ಪ್ರತಿಭಟನೆ ಜಾರಿಯಲ್ಲಿದೆ. ಆದ್ದರಿಂದ ಮುಂದಿನ ಹಂತದಲ್ಲಿ ಇದು ಯಾವ ರೀತಿ ಮುಂದುವರೆಯುತ್ತದೆ ಎನ್ನುವುದನ್ನು ನೋಡಬೇಕಿದೆ.


