ದೆಹಲಿಯಲ್ಲಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಪ್ರತಿಭಟನೆ ತೀವ್ರಗೊಂಡಿದ್ದು, ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಿದ ಕುಳ್ಳ ಹುಡುಗನೊಬ್ಬನ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೊತೆಗೆ ದ್ರುವ್ ರಾಠಿ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ.
ದೆಹಲಯಲ್ಲಿ ಜ್ಞಾನೇಶ್ ಕುಮಾರ್ ರಾಜೀನಾಮೆ ಸೇರಿ ವಿವಧ ಬೇಡಿಕೆ ಆಗ್ರಹಿಸಿ ಅ.10ರಿಂದ ಸಿಜೆಪಿ ಪ್ರತಿಭಟನೆಯನ್ನು ಜಾರಿಗೊಳಿಸಿದೆ. ಅಷ್ಟೇ ಅಲ್ಲ ನಿನ್ನೆಯಿಂದ ಹಲವಾರು ಜನರ ಬಂಧನವಾಗಿದೆ. ಪೊಲೀಸರು ಹಾಗೂ ವಿದ್ಯಾರ್ಥಿಗಳ ಮಧ್ಯ ಈಗಾಗಲೇ ಸಂಘರ್ಷ ಏರ್ಪಡುತ್ತಲೆ ಇವೆ. ಇಲ್ಲಿ ಇದೀಗ ಒಂದು ಹುಡುಗ ಓಡುವ ಒಂದು ದೃಷ್ಯ ಈಗ ಎಲ್ಲೆಡೆ ವೈರಲ್ ಆಗಿದೆ.
ಸಿಜೆಪಿ ಪ್ರತಿಭಟನೆ!
ಎಸ್‌ಐಆರ್‍ನಲ್ಲಿ ಹಲವು ದೋಷಗಳು ಹಾಗೂ ಅಲ್ಲಿ ಕೋಟಿ, ಕೋಟಿ ಮತದಾರರನ್ನು ಅಕ್ರಮ ಡಿಲೀಟೇಷನ್ ಮಾಡಿದ್ದಾರೆ ಎನ್ನುವ ಹಲವು ಗಂಭೀರ ಆರೋಪಗಳನ್ನು ದೇಶಾದ್ಯಂತ ಸಿಜೆಪಿ ಮಾರ್ಧನಿಸುತ್ತಿದೆ. ಈ ಮಧ್ಯ ಹಲವಾರು, ಅಲ್ಲಿನ ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ಈ ಹುಡುಗನ ವಿಡಿಯೋ ಒಂದು.
ವೈರಲ್ ಆದ ವಿಡಿಯೋದಲ್ಲಿ ಏನಿದೆ?
ಹುಡುಗ ವಿಡಿಯೋದಲ್ಲಿ ಬಾಗೋ, ಬಾಗೋ, ಎಂದು ಓಡುವ ಆ ಕುಳ್ಳ ಹುಡುಗನನ್ನು ಹಿಡಿಯಲು ಓಡಿದ ಪೊಲೀಸರ ವಿಡಿಯೋ ನಗೆಪಾಟಲಿಗೆ ಕಾರಣವಾಗಿದೆ. ಅಷ್ಟೆ ಅಲ್ಲ ಜಾಲತಾಣದಲ್ಲಿ ಪೊಲೀಸ್‌ರು ಇವನನ್ನು ತೆಗೆದುಕೊಂಡು ಹೋಗಿ ಏನ್ಮಾಡ್ತಾರೆ ಅನ್ನುವವರು ಒಂದು ವಲಯದಲ್ಲಿ ಇದ್ದರೆ, ಇನ್ನೊಂದು, ವಲಯ ಇವನನ್ನು ಬಂಧಿಸಬೇಡಿ ಎಂದು ವ್ಯಂಗ್ಯವಾಗಿ ನುಡಿಯುತ್ತಿದ್ದಾರೆ. ಕೊನೆಗೆ ಪೊಲೀಸರು ಇವನನ್ನು ಹಿಡಿದು ಮೇಲಕ್ಕೆ ಎತ್ತಿ, ಹೆಗಲ ಮೇಲೆ ಇಟ್ಟುಕೊಂಡು ನಡೆದಿದ್ದಾರೆ. ಇದು ಈಗ ಎಲ್ಲೆಡೆ ವೈರಲ್ ಆಗಿದೆ.
ಪೊಲೀಸ್ ಕಮೆಂಟ್‌ಗಳ ಸುರಿಮಳೆ!
ಅವನನ್ನು ಹಿಡಿದ ಸಿಆರ್‍ಪಿಎಫ್ ಪೊಲೀಸ್‌ರಿಗೂ ಸೋಶಿಯಲ್ ಮೀಡಿಯಾದಲ್ಲಿ ಸುರಿಮಳೆಗೈದಿದೆ. ಪ್ರತಿಭಟನೆಯಲ್ಲಿ ಪೊಲೀಸರ ಸಾಧನೆಗೆ ಇದೇ ಸಾಕ್ಷಿ. ನೋ, ನೋ ನನ್ನ ಹಂಬಲ್ ರಿಕ್ವೆಷ್ಟ್ ಅವನನ್ನು ಬಂದನ ಮಾಡಬೇಡಿ ಎಂದು ಹೇಳಿದ್ದಾರೆ. ಹೀಗೆ ಸಾಲು-ಸಾಲು ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಬರುತ್ತಿವೆ.
ನಿನ್ನೆ ಬಂಧನ, ಇಂದು ರಿಲೀಸ್!
ಈಗಾಗಲೇ ದೆಹಲಿಯಲ್ಲಿ ಪ್ರತಿಭಟನೆ ಕಾವು ಎಲ್ಲೆಡೆ ಹೆಚ್ಚಿದೆ. ದೀಪಕ್ ಅಶುತೋಶ, ದ್ರುವ್ ರಾಠಿಯನ್ನು ನಿನ್ನೆ ಏರ್ಪೋಟನಲ್ಲೇ ತಡೆದು ವಶಪಡಿಸಿಕೊಂಡಿದ್ದಾರೆ. ಅದರೊಂದಿಗೆ ಇಂದು ಈ ಮೂವರನ್ನು ರಿಲೀಸ್ ಮಾಡಿದ್ದಾರೆ. ಅಲ್ಲದೇ, ಹಲವಾರು, ರೈಲ್ವೆ ಸ್ಟೇಷನ್ ಹಾಗೂ ಮೆಟ್ರೋ ಸ್ಟೇಷನ್ ಅನ್ನು ಬಂದ್ ಮಾಡಿ, ಅಲ್ಲಲ್ಲಿ ಹೋರಾಟವನ್ನು ಕಟ್ಟಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಚೋಟು ವೈರಲ್ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಪ್ರತಿಭಟನಾಕಾರನನ್ನು ನಿಯಂತ್ರಿಸಲು ದೆಹಲಿ ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.


