Asianet Suvarna News Asianet Suvarna News

China Bridge On Pangong : ಅಕ್ರಮ ಸ್ಥಳದಲ್ಲಿ ಚೀನಾದಿಂದ ಸೇತುವೆ ನಿರ್ಮಾಣ ಎಂದ ಸರ್ಕಾರ!

ಅಕ್ರಮವಾಗಿ ವಶಪಡಿಸಿಕೊಂಡ ಪ್ರದೇಶದಲ್ಲಿ ಸೇತುವೆ ನಿರ್ಮಾಣ
ವಿಶ್ವದ ಇತರ ರಾಷ್ಟ್ರಗಳು ಭಾರತದ ಸಾರ್ವಭೌಮತ್ವಕ್ಕೆ ಬೆಲೆ ನೀಡುವ ವಿಶ್ವಾಸವಿದೆ
1962ರಿಂದಲೂ ಚೀನಾ ಈ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿದೆ ಎಂದ ಕೇಂದ್ರ ಸರ್ಕಾರ
 

Chinese Bridge across the Pangong Lake in Eastern Ladakh is being built in an illegally held area says Government san
Author
Bengaluru, First Published Feb 4, 2022, 9:33 PM IST

ನವದೆಹಲಿ (ಫೆ. 4): ಪೂರ್ವ ಲಡಾಖ್‌ನ (Eastern Ladakh) ಪಾಂಗಾಂಗ್ ಸರೋವರದ  (Pangong Lake) ಅಡ್ಡಲಾಗಿ ಚೀನಾ (China) ಸೇತುವೆಯನ್ನು ಅಕ್ರಮವಾಗಿ ವಶಕ್ಕೆ ಪಡೆದಿರುವ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ (Central Government ) ಶುಕ್ರವಾರ ಸಂಸತ್ತಿಗೆ ತಿಳಿಸಿದೆ. ಭಾರತದ ಸಾರ್ವಭೌಮತೆ (sovereignty) ಮತ್ತು ಪ್ರಾದೇಶಿಕ ಸಮಗ್ರತೆಯನ್ನು (territorial integrity) ಇತರ ದೇಶಗಳು ಗೌರವಿಸಬೇಕೆಂದು ಈ ಹಂತದಲ್ಲಿ ನಿರೀಕ್ಷಿಸುತ್ತದೆ ಎಂದು ಹೇಳಿದೆ. 8 ಮೀಟರ್ ಅಗಲವಿರುವ ಈ ಸೇತುವೆಯು ನಾರ್ತ್ ಬ್ಯಾಂಕ್ ಆಫ್ ಪ್ಯಾಂಗೊಂಗ್‌ನಲ್ಲಿರುವ ಚೀನಾದ ಸೈನ್ಯದ ಫೀಲ್ಡ್ ಬೇಸ್‌ನ ದಕ್ಷಿಣಕ್ಕೆ ಇದೆ, ಅಲ್ಲಿ 2020 ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಗಲ್ವಾನ್ (Galwan) ಘರ್ಷಣೆಯ ಸಮಯದಲ್ಲಿ ಈ ಪ್ರದೇಶದಲ್ಲಿ ಆಸ್ಪತ್ರೆಗಳು ಹಾಗೂ ಸೈನಿಕ ವಸತಿಗಳನ್ನು ಭಾರತ ಗಮನಿಸಿತ್ತು.

"ಪಂಗಾಂಗ್ ಸರೋವರದ ಮೇಲೆ ಚೀನಾ ನಿರ್ಮಿಸುತ್ತಿರುವ ಸೇತುವೆಯನ್ನು ಸರ್ಕಾರ ಗಮನಿಸಿದೆ. ಈ ಸೇತುವೆಯನ್ನು 1962 ರಿಂದ ಚೀನಾದ ಅಕ್ರಮ ವಶದಲ್ಲಿರುವ ಭಾರತೀಯ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತಿದೆ" ಎಂದು ಸರ್ಕಾರ ಲಿಖಿತ ಪ್ರತಿಕ್ರಿಯೆಯಲ್ಲಿ ಸಂಸತ್ತಿಗೆ ತಿಳಿಸಿದೆ. "ಭಾರತ ಸರ್ಕಾರವು ಅಕ್ರಮವಾಗಿ ತನ್ನ ಪ್ರದೇಶವನ್ನು ಅತಿಕ್ರಮಿಸಿಕೊಂಡಿರುವುದನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಜಮ್ಮು ಮತ್ತು ಕಾಶ್ಮೀರ (Jammu & Kashmir) ಮತ್ತು ಲಡಾಖ್ (Ladakh ) ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಇತರ ದೇಶಗಳು ಗೌರವಿಸುತ್ತವೆ ಎಂದು ನಾವು ಹಲವಾರು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದ್ದೇವೆ," ಎಂದು ಹೇಳಿದೆ.

2020ರಿಂದ ಅದರಲ್ಲೂ ಗಲ್ವಾನ್ ಕಣಿವೆಯಲ್ಲಿ ಆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತ 20 ಸೈನಿಕರು ಹುತಾತ್ಮರಾದ ಬಳಿಕ, ಪೂರ್ವ ಲಡಾಖ್ ಭಾಗದಲ್ಲಿ ಎರಡೂ ದೇಶಗಳಿಂದ ಅಂದಾಜು 50 ಸಾವಿರಕ್ಕೂ ಅಧಿಕ ಸೈನಿಕರನ್ನು ನಿಯೋಜನೆ ಮಾಡಲಾಗಿದೆ. ಡೆಪ್ಸಾಂಗ್ ಬಯಲು ಪ್ರದೇಶದಿಂದ ಉತ್ತರ ಭಾಗದಲ್ಲಿರುವ ಡೆಮ್ಚೋಕ್ ಪ್ರದೇಶದವರೆಗೂ ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಎರಡೂ ದೇಶಗಳು ತಮ್ಮ ಸೇನೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಡಿಸ್ ಎಂಗೇಜ್ ಮೆಂಟ್ ಪ್ರಕ್ರಿಯೆಯಲ್ಲಿ ತೊಡಗಿದೆ.
"ಈ ಮಾತುಕತೆಗಳಲ್ಲಿನ ನಮ್ಮ ವಿಧಾನವು ಮೂರು ಪ್ರಮುಖ ತತ್ವಗಳಿಂದ ಗುರುತಿಸಲ್ಪಟ್ಟಿದ್ದು ಮತ್ತು ಅದರೊಂದಿಗೆ ಮುಂದುವರಿಯುತ್ತದೆ. ಅದೇನೆಂದರೆ, ಎರಡೂ ಕಡೆಯವರು ಎಲ್ ಎಸಿ ನಿಯಮವನ್ನು ಕಟ್ಟುನಿಟ್ಟಾಗಿ ಗೌರವಿಸಬೇಕು ಮತ್ತು ಗಮನಿಸಬೇಕು,  ಎರಡೂ ಕಡೆಯವರು ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಯಾವುದೇ ಕಾರಣಕ್ಕೂ ಪ್ರಯತ್ನಿಸಬಾರದು ಮತ್ತು  ಉಭಯ ಪಕ್ಷಗಳ ನಡುವಿನ ಎಲ್ಲಾ ಒಪ್ಪಂದಗಳಿಗೆ ಸಂಪೂರ್ಣವಾಗಿ  ಬದ್ಧವಾಗಿರಬೇಕು" ಎಂದು ಸರ್ಕಾರ ಹೇಳಿದೆ.

ಚೀನಾ ಸೇತುವೆ ಮೋದಿಯಿಂದ ಉದ್ಘಾಟನೆ: Rahul Gandhi ವ್ಯಂಗ್ಯ
ಭಾರತ ಮತ್ತು ಚೀನಾದ ಹಿರಿಯ ಕಮಾಂಡರ್‌ಗಳ ನಡುವಿನ ಕೊನೆಯ ಸುತ್ತಿನ ಮಾತುಕತೆಯು ಜನವರಿ 12 ರಂದು ನಡೆಯಿತು. ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಶಾಂತಿಯನ್ನು ಮರುಸ್ಥಾಪಿಸಲು, ಉಳಿದ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಎರಡೂ ಕಡೆಯವರು ಕೆಲಸ ಮಾಡಲಿದ್ದೇವೆ ಎಂದು ಈ ಹಂತದಲ್ಲಿ ಒಪ್ಪಿಕೊಳ್ಳಲಾಗಿದೆ.

Ladakh: ಚೀನಾದಿಂದ ಪ್ಯಾಂಗ್ಯಾಂಗ್‌ ಸೇತುವೆ ನಿರ್ಮಾಣಕ್ಕೆ ವೇಗ
ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿರುವ ವರದಿಗಳ ಬಗ್ಗೆ ಮಾತನಾಡಿದ ಸರ್ಕಾರ, ಈಶಾನ್ಯ ರಾಜ್ಯವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಪುನರುಚ್ಚರಿಸಿದೆ. "ಭಾರತದ ಅರುಣಾಚಲ ಪ್ರದೇಶದಲ್ಲಿ ಚೀನಾ ಕೆಲವು ಸ್ಥಳಗಳ ಮರುನಾಮಕರಣದ ವರದಿಗಳನ್ನು ಸರ್ಕಾರ ಗಮನಿಸಿದೆ. ಇದು ನಿರರ್ಥಕ ಕಸರತ್ತು, ಇದು ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ. ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಸರ್ಕಾರ ಹೇಳಿದೆ.

Follow Us:
Download App:
  • android
  • ios