Asianet Suvarna News Asianet Suvarna News

ಗಡಿಯಲ್ಲಿ ಮತ್ತೆ ಚೀನಾ ತಗಾದೆ: ಭಾರತಕ್ಕೆ ಸೇರಿದ ಭಾಗದಲ್ಲಿ 200 ಟೆಂಟ್‌ಗಳ ನಿರ್ಮಾಣ

ಪೂರ್ವ ಲಡಾಖ್‌ ಭಾಗದ ದೆಪ್ಸಾಂಗ್‌ನಲ್ಲಿ ಭಾರತಕ್ಕೆ ಸೇರಿದ ಜಾಗವನ್ನು ತೆರವುಗೊಳಿಸಲು ಹಿಂದೇಟು ಹಾಕುತ್ತಿರುವ ಚೀನಾ, ಇದೀಗ ಅದೇ ಸ್ಥಳದಲ್ಲಿ ಕಳೆದೊಂದು ತಿಂಗಳಿನಿಂದ ಸದ್ದಿಲ್ಲದೆ 200 ಟೆಂಟ್‌ಗಳನ್ನು ನಿರ್ಮಾಣ ಮಾಡಿರುವುದು ಕಳವಳಕ್ಕೆ ಕಾರಣವಾಗಿದೆ.

China strikes again on the border: Constructed 200 of tents on the part belonging to India akb
Author
First Published Dec 4, 2022, 6:44 AM IST

ನವದೆಹಲಿ: ಪೂರ್ವ ಲಡಾಖ್‌ ಭಾಗದ ದೆಪ್ಸಾಂಗ್‌ನಲ್ಲಿ ಭಾರತಕ್ಕೆ ಸೇರಿದ ಜಾಗವನ್ನು ತೆರವುಗೊಳಿಸಲು ಹಿಂದೇಟು ಹಾಕುತ್ತಿರುವ ಚೀನಾ, ಇದೀಗ ಅದೇ ಸ್ಥಳದಲ್ಲಿ ಕಳೆದೊಂದು ತಿಂಗಳಿನಿಂದ ಸದ್ದಿಲ್ಲದೆ 200 ಟೆಂಟ್‌ಗಳನ್ನು ನಿರ್ಮಾಣ ಮಾಡಿರುವುದು ಕಳವಳಕ್ಕೆ ಕಾರಣವಾಗಿದೆ. ಟೆಂಟ್‌ಗಳ ಜತೆಗೆ ಹೆಚ್ಚುವರಿ ಬಂಕರ್‌ ಹಾಗೂ ಸೇನಾ ಶಿಬಿರಗಳನ್ನೂ ನಿರ್ಮಾಣ ಮಾಡಿದೆ ಎಂದು ಭದ್ರತಾ ಸಂಸ್ಥೆಗಳ ಮೂಲಗಳು ಮಾಹಿತಿ ನೀಡಿವೆ.

ಚೀನಾ ಟೆಂಟ್‌ ನಿರ್ಮಾಣ ಮಾಡುತ್ತಿರುವ ಭಾಗ ಭಾರತ-ಚೀನಾ ಗಡಿಯಿಂದ (India-China border) ಭಾರತದೊಳಕ್ಕೆ 18 ಕಿ.ಮೀ.ದೂರದಲ್ಲಿದೆ. ಈ ಕುರಿತು ಇಂಡೋ-ಟಿಬೆಟನ್‌ ಗಡಿ ಪೊಲೀಸ್‌ (ಐಟಿಬಿಪಿ) ಪಡೆಯ ಗುಪ್ತಚರ ವಿಭಾಗದ ಅಧಿಕಾರಿಯೊಬ್ಬರು (intelligence officer) ನಮಗೆ ಮಾಹಿತಿ ನೀಡಿದ್ದಾರೆ ಎಂದು ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ. ಟೆಂಟ್‌ಗಳನ್ನು ನಿರ್ಮಿಸಿ ಅದು ತನ್ನದೇ ಜಾಗ ಎಂದು ಬಿಂಬಿಸಿ, ಅದನ್ನೇ ಗಡಿ ಎಂದು ಮುಂದುವರಿಸಲು ಚೀನಾ (china) ಯತ್ನಿಸುತ್ತಿರುವಂತಿದೆ ಎಂದು ಭದ್ರತಾ ತಜ್ಞರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಚಾಟಿ ಬೀಸಿದ್ದು, ‘ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮೌನವಾಗಿರುವುದು ಏಕೆ?’ ಎಂದು ಪ್ರಶ್ನಿಸಿದೆ.

ಚೀನಾಗೆ ಕರಾಟೆ ಪಂಚ್‌ ನೀಡಲು ಸಿದ್ಧತೆ: ITBP ಯೋಧರಿಗೆ ತರಬೇತಿ..!

2020ರಲ್ಲಿ ಪೂರ್ವ ಲಡಾಖ್‌ನ ವಿವಿಧ ಭಾಗಗಳನ್ನು ಚೀನಾ ಆಕ್ರಮಿಸಿಕೊಂಡಿತ್ತು. ಹಲವಾರು ಸುತ್ತಿನ ಮಾತುಕತೆ ಬಳಿಕ ವಿವಿಧೆಡೆಯಿಂದ ಜಾಗ ಖಾಲಿ ಮಾಡಿತ್ತು. ಆದರೆ ದೆಪ್ಸಾಂಗ್‌(Depsang) ಅನ್ನು ಮಾತ್ರ ತೆರವುಗೊಳಿಸಿರಲಿಲ್ಲ. ದೆಪ್ಸಾಂಗ್‌ ಎಂಬುದು ಭಾರತಕ್ಕೆ ವ್ಯೂಹಾತ್ಮಕವಾಗಿ ಮಹತ್ವದ ಸ್ಥಳ. ಚೀನಾ ವಶದಲ್ಲೇ ಇರುವ ಭಾರತದ ಅಕ್ಸಾಯ್‌ ಚಿನ್‌ (Aksai Chin) ಇದೀಗ ಟೆಂಟ್‌ ನಿರ್ಮಾಣಗೊಂಡಿರುವ ದೆಪ್ಸಾಂಗ್‌ನ ಪೂರ್ವಕ್ಕಿದೆ. ಅದೇ ರೀತಿ ಭಾರತ-ಪಾಕಿಸ್ತಾನಗಳು ಕಾದಾಡುತ್ತಿರುವ ಸಿಯಾಚಿನ್‌ ಭಾಗವು ದೆಪ್ಸಾಂಗ್‌ನ ವಾಯವ್ಯ ದಿಕ್ಕಿಗಿದೆ.

ಪಿಒಕೆ, ಅಕ್ಸಾಯ್‌ಚಿನ್‌ ಭಾರತದ್ದೆಂದು ಚಿತ್ರಿಸಿದ ರಷ್ಯಾ, ಭೂಪಟ ಬಿಡುಗಡೆ

2020ರ ಮೇನಲ್ಲಿ ಭುಗಿಲೆದ್ದ ಪೂರ್ವ ಲಡಾಖ್‌ ಸಂಘರ್ಷದ (Ladakh conflict) ಸಂದರ್ಭದಲ್ಲಿ ದೆಪ್ಸಾಂಗ್‌ ಪ್ರಾಂತ್ಯದಲ್ಲಿ ಭಾರತ ನಡೆಸುತ್ತಿದ್ದ ಐದು ಪರಂಪರಾಗತ ಕಾವಲು ಸ್ಥಳಗಳನ್ನು ಚೀನಾ ಕಡಿತಗೊಳಿಸಿದೆ. ಅವು ಇನ್ನೂ ಭಾರತ ವಶವಾಗಿಲ್ಲ. ಇದೀಗ ದೆಪ್ಸಾಂಗ್‌ನಲ್ಲಿ ಚೀನಾ ಟೆಂಟ್‌ಗಳನ್ನು ನಿರ್ಮಿಸಿ, ಮಿಲಿಟರಿ ಮೂಲಸೌಕರ್ಯ ಹೆಚ್ಚಿಸುತ್ತಿರುವುದು ಭಾರತದ ಭೌಗೋಳಿಕ ಸಾರ್ವಭೌಮತೆಗೆ ದೊಡ್ಡ ಬೆದರಿಕೆಯಾಗಿದೆ. ದೆಪ್ಸಾಂಗ್‌ನಿಂದ ಚೀನಾ ಹಿಂದೆ ಸರಿಯುವಂತೆ ಕಾಣುತ್ತಿಲ್ಲ ಎಂದು ಭಾರತದ ನಿವೃತ್ತ ಸೇನಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಆದರೂ ರಾಜಕೀಯ ನಾಯಕತ್ವದ ಮೌನದಿಂದ ಇರುವುದು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.

Indo-China Talk: ಚೀನಾಕ್ಕೆ ಭಾರತದ ಎಚ್ಚರಿಕೆ, ಲಡಾಖ್‌ನಲ್ಲಿ ವಾಯು ಗಡಿ ಉಲ್ಲಂಘನೆ ಮಾಡಬೇಡಿ!

Follow Us:
Download App:
  • android
  • ios