ನವದೆಹಲಿ(ಡಿ.02): ಭಾರತದ ಭೂಭಾಗಗಳನ್ನು ಕಬಳಿಸಲು ಎಂಟು ತಿಂಗಳ ಹಿಂದೆ ಅತ್ಯುತ್ಸಾಹದಿಂದ ಪೂರ್ವ ಲಡಾಖ್‌ನ ಗಡಿ ಪ್ರದೇಶಗಳಿಗೆ ನುಗ್ಗಿದ್ದ ಚೀನಾ ಸೇನೆಯೀಗ ಅಲ್ಲಿನ ಚಳಿಗಾಲ ನೋಡಿ ಕಂಗಾಲಾಗಿದೆ. ಚೀನಿ ಯೋಧರಿಗೆ ಲಡಾಖ್‌ನ ಚಳಿ ತಡೆದುಕೊಳ್ಳಲು ಸಾಧ್ಯವಾಗದ ಕಾರಣ ಚೀನಾದ ಸೇನೆ ನಿತ್ಯ ಅಲ್ಲಿ ನಿಯೋಜಿಸಿರುವ ತನ್ನ ಯೋಧರನ್ನು ಬದಲಾಯಿಸುತ್ತಿದೆ.

ಅಚ್ಚರಿಯ ಸಂಗತಿಯೆಂದರೆ, ಅಂತಹ ಚಳಿಯಲ್ಲಿ ಕಾರ್ಯನಿರ್ವಹಿಸಿ ಈಗಾಗಲೇ ಸಾಕಷ್ಟುಅನುಭವ ಹೊಂದಿರುವ ಭಾರತದ ಯೋಧರು ಮಾತ್ರ ಚಳಿಗೆ ಕೆಚ್ಚೆದೆ ಒಡ್ಡಿ ಬಹಳ ದಿನಗಳ ಕಾಲ ಅಲ್ಲೇ ಇರುತ್ತಾರೆ ಎಂದು ಭಾರತೀಯ ಸೇನಾಪಡೆಯ ಮೂಲಗಳು ತಿಳಿಸಿವೆ.

ಬ್ರಹ್ಮಪುತ್ರ ನದಿಗೆ ಟಿಬೆಟ್‌ನಲ್ಲಿ ಚೀನಾದಿಂದ ಬೃಹತ್‌ ಡ್ಯಾಮ್‌!

ಲಡಾಖ್‌ನಲ್ಲೀಗ ತೀವ್ರ ಚಳಿಗಾಲ ಆರಂಭವಾಗಿದೆ. ಪೂರ್ವ ಲಡಾಖ್‌ನ ಮುಂಚೂಣಿ ಪೋಸ್ಟ್‌ಗಳಲ್ಲಿ ನಿಯೋಜಿತರಾಗಿರುವ ಚೀನಾ ಸೈನಿಕರಿಗೆ ಅದನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಲ್ಲಿನ ಸೇನಾಪಡೆ ನಿತ್ಯ ತನ್ನ ಯೋಧರನ್ನು ಬದಲಾಯಿಸುತ್ತಿದೆ. ಆದರೆ, ಭಾರತದ ಯೋಧರು ಈಗಾಗಲೇ ಲಡಾಖ್‌, ಸಿಯಾಚಿನ್‌ ಮುಂತಾದ ಎತ್ತರದ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಬಹಳ ದಿನಗಳ ಕಾಲ ಇವರನ್ನು ಬದಲಾಯಿಸುವ ಅಗತ್ಯ ಬೀಳುವುದಿಲ್ಲ ಎಂದು ಮೂಲಗಳು ಹೇಳಿವೆ.

ಕೊರೋನಾ ಸೃಷ್ಟಿಸಿದ್ದು ಭಾರತ : ಚೀನಾದಿಂದ ಅಪಪ್ರಚಾರ

ಏಪ್ರಿಲ್‌-ಮೇ ತಿಂಗಳಲ್ಲಿ ಪೂರ್ವ ಲಡಾಖ್‌ನ ಗಡಿಯೊಳಗೆ ನುಗ್ಗಲು ಯತ್ನಿಸಿದ ಚೀನಾದ ಸೇನೆ ತನ್ನ 60,000ಕ್ಕೂ ಹೆಚ್ಚು ಯೋಧರನ್ನು ಅಲ್ಲಿ ನಿಯೋಜಿಸಿದೆ. ಜೊತೆಗೆ ಭಾರಿ ಟ್ಯಾಂಕ್‌ಗಳು ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಶಸ್ತಾ್ರಸ್ತ್ರಗಳನ್ನೂ ಯೋಧರಿಗೆ ನೀಡಿದೆ. ಭಾರತ ಕೂಡ ಅಷ್ಟೇ ಪ್ರಮಾಣದಲ್ಲಿ ಯೋಧರು ಹಾಗೂ ಶಸ್ತಾ್ರಸ್ತ್ರಗಳನ್ನು ನಿಯೋಜಿಸಿದೆ. ಸಾಮಾನ್ಯವಾಗಿ ಪ್ರತಿವರ್ಷ ಚಳಿಗಾಲ ತೀವ್ರಗೊಂಡ ಮೇಲೆ ಆ ಪ್ರದೇಶದಲ್ಲಿ ಯೋಧರು ಇರುತ್ತಿರಲಿಲ್ಲ. ಆದರೆ, ಈ ಬಾರಿ ಚೀನಾದ ದುಸ್ಸಾಹಸದಿಂದಾಗಿ ಎರಡೂ ದೇಶಗಳ ಯೋಧರು ಅಲ್ಲಿ ಗಡಿ ಕಾಯುವ ಸಂದರ್ಭ ಬಂದೊದಗಿದೆ.