ಚೀನಾದಿಂದ ಮತ್ತೆ ಕಿರಿಕ್, ಅರುಣಾಚಲ ಪ್ರದೇಶ ತನ್ನ ತೆಕ್ಕೆಗೆ ಸೇರಿಸಿ ಹೊಸ ಮ್ಯಾಪ್ ಬಿಡುಗಡೆ!

ಲಡಾಖ್ ಸಮಸ್ಯೆಯನ್ನು ಬಗೆಹರಿಸಲು ಭಾರತ ಸತತ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಚೀನಾ ಮತ್ತೆ ಕಿರಿಕ್ ಆರಂಭಿಸಿದೆ. ಇದೀಗ ಅರುಣಾಚಲ ಪ್ರದೇಶವನ್ನು ಅಕ್ಸಯ್ ಚಿನ್ ಎಂದು ತನ್ನ ದೇಶದ ಭೂಪಟದಲ್ಲಿ ಚಿತ್ರಿಸಿದೆ. ಇಷ್ಟೇ ಅಲ್ಲ ಹೊಸ ಮ್ಯಾಪ್ ಚೀನಾ ಬಿಡುಗಡೆ ಮಾಡಿದೆ.

China publish new standard map include Arunachal Pradesh as Aksai chin ckm

ನವದೆಹಲಿ(ಆ.29) ಚೀನಾಗೆ ಇತರ ದೇಶಗಳ ಭೂಮಿ ಕಬ್ಜಾ ಮಾಡಿಕೊಳ್ಳುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಫಲವತ್ತಾದ ಭೂಮಿ, ಪ್ರವಾಸೋದ್ಯಮ ಕೇಂದ್ರಗಳ ಮೇಲೆ ಚೀನಾ ಕಣ್ಣಿಟ್ಟು ಕುತಂತ್ರ ಬುದ್ದಿ ತೋರಿಸುತ್ತಲೇ ಇರುತ್ತದೆ. ಭಾರತದ ಜೊತೆ ಲಡಾಖ್‌ನಲ್ಲಿ ದೊಡ್ಡ ಯುದ್ಧವೇ ನಡೆದು ಹೋಗಿದೆ. ಸತತ ಮಾತುಕತೆ ನಡೆದರೂ ಚೀನಾ ಮಾತ್ರ ಪ್ಯಾಂಗಾಂಗ್ ಲೇಕ್ ಸೇರಿದಂತೆ ಹಲವು ಪ್ರದೇಶದಿಂದ ಹಿಂದೆ ಸರಿಯುತ್ತಿಲ್ಲ. ಇದೀಗ ಚೀನಾ ಅರುಣಾಚಲ ಪ್ರದೇಶದಲ್ಲಿ ಕಿರಿಕ್ ಮತ್ತೆ ಆರಂಭಿಸಿದೆ. ಚೀನಾ ತನ್ನ ದೇಶದ ಹೊಸ ಮ್ಯಾಪ್ ಬಿಡುಗಡೆ ಮಾಡಿದೆ. ಈ ಮ್ಯಾಪ್‌ನಲ್ಲಿ ಭಾರತದ ಅರುಣಾಚಲ ಪ್ರದಶವನ್ನು ಅಕ್ಸಯ್ ಚಿನ್ ಎಂದು ತನ್ನ ದೇಶ ಎಂದು ಚಿತ್ರಿಸಿದೆ. ಇಷ್ಟೇ ಅಲ್ಲ ಅತ್ತ ತೈವಾನ್ ದೇಶದ ಭೂಮಿಯನ್ನು ಸೌತ್ ಚೀನಾ ಸೀ ಎಂದು ಚಿತ್ರಿಸಿದೆ.

2023ರಲ್ಲಿ ಚೀನಾ ಹೊಸ ಮ್ಯಾಪ್ ಬಿಡುಗಡೆ ಮಾಡಿ ಭಾರತವನ್ನು ಕೆಣಕಿದೆ. ಮಿನಿಸ್ಟ್ರಿ ಆಫ್ ನ್ಯಾಚುರಲ್ ರಿಸೋರ್ಸ್ ಈ ಮ್ಯಾಪ್ ಬಿಡುಗಡೆ ಮಾಡಿದೆ. ಚೀನಾ ಸರ್ಕಾಕರದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಮ್ಯಾಪ್ ಪ್ರಕಟಿಸಿದೆ. ಇಷ್ಟೇ ಅಲ್ಲ ಚೀನಾ ಸರ್ಕಾರದ ಅಧೀನದಲ್ಲಿರುವ ಗ್ಲೋಬಲ್ ಟೈಮ್ಸ್ ಮಾಧ್ಯಮದಲ್ಲೂ ಈ ಭೂಪಟವನ್ನು ಪ್ರಕಟಿಸಲಾಗಿದೆ.

ಚೀನಾದಿಂದ ಲಡಾಖ್‌ ಜಾಗ ಕಬಳಿಕೆ: ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ರಾಹುಲ್‌ ಗಾಂಧಿ

ಹೊಸ ಮ್ಯಾಪ್‌ನಲ್ಲಿ ಭಾರತದ ಅರುಣಾಚಲ ಪ್ರದೇಶದ ಬಹುಭಾಗವನ್ನು ಚೀನಾ ತನ್ನದು ಎಂದು ಚಿತ್ರಿಸಿದೆ. ಕಳೆದ ಹಲವು ದಶಕಗಳಿಂದ ಚೀನಾ ಅಕ್ಸಯ್ ಚಿನ್ ಎಂದು ಅರುಣಾಚಲ ಪ್ರದೇಶವನ್ನು ಕರೆದು ತನ್ನದು ಎಂಬ ವಾದವನ್ನು ಮುಂದಿಡುತ್ತಾ ಬಂದಿದೆ. ಪ್ರತಿ ಬಾರಿ ಕಿರಿಕ್ ಆದಾಗ ಭಾರತ ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು  ಹೇಳುತ್ತಲೇ ಬಂದಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಈ ಮಾತನ್ನು ಪುನರುಚ್ಚರಿಸಿದೆ. ಆದರೆ ಇದೀಗ ಚೀನಾ ಸದ್ದಿಲ್ಲದೆ ಅರುಣಾಚಲ ಪ್ರದೇಶವನ್ನು ತನ್ನ ಭೂ ಪ್ರೇದಶದ ಎಂದು ಚಿತ್ರಿಸಿ ಮ್ಯಾಪ್ ಪ್ರಕಟಿಸಿದೆ.

 

 

ಜಿ20 ಪೇಪರ್‌ಗಳಲ್ಲಿ 'ವಸುದೈವ ಕುಟುಂಬಕಂ' ಸಂಸ್ಕೃತ ಪದ, ಚೀನಾದ ತಗಾದೆ

ಇತ್ತೀಚೆಗೆ ಚೀನಾ ಅರುಣಾಚಲ ಪ್ರದೇಶದ 11 ಗ್ರಾಮಗಳಿಗೆ ಮರುನಾಮಕರಣ ಮಾಡಿ ಚೀನಾದ ಭಾಗ ಎಂದು ಹೇಳಿಕೊಂಡಿತ್ತು.  ಈ ಸ್ಥಳಗಳನ್ನು ‘ದಕ್ಷಿಣ ಭಾರತದ ಟಿಬೆಟ್‌’ ಎಂದು ಕರೆದಿದೆ. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇವು ಚೀನಾದ ಕಪೋಲಕಲ್ಪಿತ ಹೆಸರುಗಳಿಂದ ಗಡಿಯಲ್ಲಿ ವಸ್ತುಸ್ಥಿತಿಯೇನೂ ಬದಲಾಗಲ್ಲ ಎಂದು ತಿರುಗೇಟು ನೀಡಿತ್ತು. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ 11 ಸ್ಥಳಗಳ ಪಟ್ಟಿಬಿಡುಗಡೆ ಮಾಡಿದ್ದು, ಇವುಗಳಲ್ಲಿ 2 ಭೂ ಪ್ರದೇಶಗಳು, 2 ಊರುಗಳು, 5 ಪರ್ವತಗಳು ಹಾಗೂ 2 ನದಿಗಳಿವೆ. ಇವುಗಳಿಗೆ ಚೀನಾ ಹೆಸರುಗಳನ್ನು ಇರಿಸಿ ಮರುನಾಮಕರಣ ಮಾಡಲಾಗಿದೆ. 2017ರಲ್ಲಿ ಮೊದಲು 6 ಸ್ಥಳಗಳಿಗೆ ಚೀನಾ ಹೊಸ ಹೆಸರು ಇರಿಸಿತ್ತು. 2021ರಲ್ಲಿ 15 ಸ್ಥಳಗಳ 2ನೇ ಮರುನಾಮಕರಣ ಪಟ್ಟಿಬಿಡುಗಡೆ ಮಾಡಿತ್ತು. ಈಗ 3ನೇ ಕಂತಿನ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಚೀನಾ ಸರ್ಕಾರದ ‘ಗ್ಲೋಬಲ್‌ ಟೈಮ್ಸ್‌’ ವರದಿ ಮಾಡಿದೆ.

Latest Videos
Follow Us:
Download App:
  • android
  • ios