Asianet Suvarna News Asianet Suvarna News

ಜಿ20 ಪೇಪರ್‌ಗಳಲ್ಲಿ 'ವಸುದೈವ ಕುಟುಂಬಕಂ' ಸಂಸ್ಕೃತ ಪದ, ಚೀನಾದ ತಗಾದೆ

ಈ ಬಾರಿಯ ಜಿ20 ಶೃಂಗಸಭೆಯನ್ನು ಭಾರತ ಆಯೋಜಿಸುತ್ತಿದೆ. ಈಗಾಗಲೇ ಸಾಕಷ್ಟು ಸಭೆಗಳನ್ನು ನಡೆಸಿರುವ ಭಾರತ ಇದರ ಅಧಿಕೃತ ಪೇಪರ್‌ಗಳಲ್ಲಿ ವಸುದೈವ ಕುಟುಂಬಕಂ ಎನ್ನುವ ಸಂಸ್ಕೃತ ಪದಗುಚ್ಛ ಬಳಸುತ್ತಿರುವುದಕ್ಕೆ ಚೀನಾ ತಗಾದೆ ತೆಗೆದಿದೆ.
 

China miffed at India usage of Vasudhaiva Kutumbkam Sanskrit phrase in G20 papers san
Author
First Published Aug 8, 2023, 1:28 PM IST

ನವದೆಹಲಿ (ಆ.8): ಈ ಬಾರಿಯ ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಭಾರತ, ತನ್ನ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಸಭೆಗಳನ್ನು ಆಯೋಜಿಸಿದ್ದು, ಅಂತಿಮ ಶೃಂಗಸಭೆ ಮುಂದಿನ ಸೆಪ್ಟೆಂಬರ್‌ ಅಂತ್ಯದಲ್ಲಿ ನಡೆಯಲಿದೆ. ಈ ನಡುವೆ ಜಿ20ಯ ಅಧಿಕೃತ ಪೇಪರ್‌ಗಳಲ್ಲಿ ಭಾರತ ತನ್ನ ಥೀಮ್‌ ಲೈನ್‌ ಆಗಿರುವ ಸಂಸ್ಕೃತ ಪದಗುಚ್ಛ 'ವಸುಧೈವ ಕುಟುಂಬಕಂ' (ಜಗತ್ತೇ ಒಂದು ಕುಟುಂಬ) ಸೇರಿಸಿರುವುದಕ್ಕೆ ಚೀನಾ ತಗಾದೆ ತೆಗೆದಿದೆ. ಕಳೆದ ತಿಂಗಳ ಜಿ20 ಎನರ್ಜಿ ಮಿನಿಸ್ಟ್ರಿಯಲ್ ಮೀಟಿಂಗ್‌ನಲ್ಲಿ ಅಧಿಕೃತ ದಾಖಲೆಗಳಲ್ಲಿ ಮತ್ತು ಇದೇ ರೀತಿಯ ಹಲವಾರು ಜಿ20 ದಾಖಲೆಗಳಲ್ಲಿ ಚೀನಾ, ಭಾರತವು ಸಂಸ್ಕೃತ ಪದಗುಚ್ಛ ಬಳಕೆ ಮಾಡುತ್ತಿರುವುದಕ್ಕೆ ವಿರೋಧಿಸಿದೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. ವಿಶ್ವಸಂಸ್ಥೆಯಿಂದ ಗುರುತಿಸಲ್ಪಟ್ಟ ಆರು ಅಧಿಕೃತ ಭಾಷೆಗಳಲ್ಲಿ ಸಂಸ್ಕೃತ ಸ್ಥಾನ ಪಡೆದಿಲ್ಲ. ಆ ಕಾರಣಕ್ಕಾಗಿ ಭಾರತ ಸಂಸ್ಕೃತದ ಪದಗುಚ್ಛವನ್ನು ಜಿ20 ಪೇಪರ್‌ಗಳಲ್ಲಿ ಬಳಸುವುದನ್ನು ಕೈಬಿಡಬೇಕು ಎಂದು ಹೇಳಿದೆ.

"ಜಿ 20 ದಾಖಲೆಗಳು ಅಧಿಕೃತ ಪಠ್ಯದಲ್ಲಿ 'ವಸುಧೈವ ಕುಟುಂಬಕಂ' ಪದವನ್ನು ಸಂಸ್ಕೃತದಲ್ಲಿ ಬಳಸಬಾರದು ಎಂದು ಚೀನಾ ವಾದ ಮಾಡಿದೆ. ಇದು ವಿಶ್ವಸಂಸ್ಥೆಯಿಂದ ಗುರುತಿಸಲ್ಪಟ್ಟ ಆರು ಅಧಿಕೃತ ಭಾಷೆಗಳಲ್ಲಿ ಒಂದಲ್ಲ ಎಂದು ಚೀನಾ ತಿಳಿಸಿದೆ. ಇನ್ನೊಂದೆಡೆ ಸಂಸ್ಕೃತ ಪದವನ್ನು ಚೀನಾ ವಿರೋಧಿಸಿದ್ದರೂ, ಶೃಂಗಸಭೆಯ ಭಾಗವಾಗಿರುವ ಇತರ ಎಲ್ಲಾ ರಾಷ್ಟ್ರಗಳು ಭಾರತದ ಪರವಾಗಿ ನಿಂತಿವೆ. ಜಿ20ಯ ಇವೆಂಟ್‌ಗಳ ವಿಷಯವನ್ನು ನಿರ್ಧಾರ ಮಾಡುವುದು, ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಆತಿಥೇಯ ರಾಷ್ಟ್ರದ ಕೆಲಸವಾಗಿರುತ್ತದೆ ಎಂದಿದೆ. ಹಾಗಿದ್ದರೂ ಅಂತಿಮ G20 ಡಾಕ್ಯುಮೆಂಟ್, ಅಂದರೆ, ಇಡೀ ಶೃಂಗದ ಫಲಿತಾಂಶದ ದಾಖಲೆ ಮತ್ತು ಶಕ್ತಿ ಪರಿವರ್ತನೆಯ ಚೇರ್‌ನ ಸಾರಾಂಶ, ವಸುಧೈವ ಕುಟುಂಬಕಂ ಪರಿಕಲ್ಪನೆಯ ಇಂಗ್ಲಿಷ್ ಅನುವಾದವನ್ನು ಮಾತ್ರ ಹೊಂದಿರುತ್ತದೆ. ಆದರೆ, ಪ್ರತಿ ದಾಖಲೆಯ ಲೋಗೋ/ಲೆಟರ್‌ಹೆಡ್‌ನಲ್ಲಿ ಭಾರತ ಸಂಸ್ಕೃತ ಪದಗುಚ್ಛದ ಸಾಲನ್ನು ಉಳಿಸಿಕೊಂಡಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇನ್ನೂ ಈ ವಿಷಯದ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಚೀನಾ ಮಾತ್ರ ತನ್ನ ಅಧಿಕೃತ ಪ್ರತಿಭಟನೆಯನ್ನು ದಾಖಲಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಭಾರತ ಜಿ20 ಥೀಮ್‌:  ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು ಪಡೆದ ನಂತರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಾಗತಿಕ ವೇದಿಕೆಗಳಲ್ಲಿ ತೆಗೆದುಕೊಂಡಿರುವ ಬಹುಮಟ್ಟಿಗೆ ಒಳಗೊಳ್ಳುವ ವಿಧಾನಕ್ಕೆ ಅನುಗುಣವಾಗಿ ಕಂಡುಬರುವ ಥೀಮ್ ಅನ್ನು ಘೋಷಣೆ ಮಾಡಿದ್ದರು. ಭಾರತದ ಜಿ20 ಪ್ರೆಸಿಡೆನ್ಸಿಯು ಈ ಸಾರ್ವತ್ರಿಕ ಏಕತ್ವದ ಅರ್ಥವನ್ನು ಉತ್ತೇಜಿಸಲು ಕೆಲಸ ಮಾಡುತ್ತದೆ. ಆದ್ದರಿಂದ ನಮ್ಮ ಥೀಮ್ - 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ'" ಎಂದು ಪ್ರಧಾನಿ ಹೇಳಿದ್ದರು. ಮಹಾ ಉಪನಿಷತ್‌ನಿಂದ ಹುಟ್ಟಿಕೊಂಡ ನುಡಿಗಟ್ಟು ಆಗಿರುವ ವಸುದೈವ ಕುಟುಂಬಕಂ,, ಎಲ್ಲಾ ಜೀವಗಳ ಮೌಲ್ಯ - ಮಾನವ, ಪ್ರಾಣಿ, ಸಸ್ಯ ಮತ್ತು ಸೂಕ್ಷ್ಮಜೀವಿಗಳು - ಮತ್ತು ಭೂಮಿಯ ಮೇಲೆ ಮತ್ತು ವಿಶಾಲ ವಿಶ್ವದಲ್ಲಿ ಅವುಗಳ ಪರಸ್ಪರ ಸಂಬಂಧವನ್ನು ಗುರುತಿಸುತ್ತದೆ ಎಂದಿದ್ದರು.

 

 

9 ವರ್ಷದಲ್ಲಿ 190 ಮಿಲಿಯನ್ LPG, ಎಲ್ಲಾ ಗ್ರಾಮಕ್ಕೆ ವಿದ್ಯುತ್ ಸಂಪರ್ಕ; ಜಿ20 ಸಭೆಯಲ್ಲಿ ಮೋದಿ ಭಾಷಣ!

ಗೋವಾದಲ್ಲಿ ನಡೆದ ಜಿ20 ಸಭೆಯಲ್ಲಿ ಇಂಧನ ಸಚಿವರು ಭಾಗವಹಿಸಿದ್ದರು. ಈ ವೇಳೆ ನವೀಕರಿಸಬಹುದಾದ ಇಂಧನ ನಿಯೋಜನೆಯ ದ್ವಿಗುಣಗೊಳಿಸುವಿಕೆ, ಪಳೆಯುಳಿಕೆ ಇಂಧನಗಳ ಹಂತಹಂತವಾಗಿ ಮತ್ತು ಪರಿವರ್ತನೆಗೆ ಹಣಕಾಸು ಒದಗಿಸುವ ಯೋಜನೆಗಳ ಕುರಿತು ಒಮ್ಮತವನ್ನು ತಲುಪಲು ವಿಫಲವಾಗಿದೆ. ಕೇಂದ್ರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್‌ಕೆ ಸಿಂಗ್, ಸಭೆಯ ನಂತರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಯಾವುದೇ ದೇಶಗಳನ್ನು ಹೆಸರಿಸದೆ, ಕೆಲವು ರಾಷ್ಟ್ರಗಳು ಪಳೆಯುಳಿಕೆ ಇಂಧನಗಳ ಹಂತ-ಹಂತದ ಬದಲಿಗೆ ಕಾರ್ಬನ್ ಕ್ಯಾಪ್ಚರ್ ಅನ್ನು ಬಳಸಲು ಬಯಸುತ್ತವೆ ಎಂದು ಹೇಳಿದರು.

No Trust Debate: ವಿಪಿ ಸಿಂಗ್‌, ಎಚ್‌ಡಿ ದೇವೇಗೌಡ, ವಾಜಪೇಯಿ 'ಅವಿಶ್ವಾಸ'ಕ್ಕೆ ಅಧಿಕಾರ ಕಳೆದುಕೊಂಡ ನಾಯಕರು!

ಚೀನಾ, ಸೌದಿ ಅರೇಬಿಯಾ, ರಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಇಂಡೋನೇಷ್ಯಾ ಈ ದಶಕದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯನ್ನು ವಿರೋಧಿಸಿದೆ.

Follow Us:
Download App:
  • android
  • ios