ಚೀನಾದಿಂದ ಲಡಾಖ್‌ ಜಾಗ ಕಬಳಿಕೆ: ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ರಾಹುಲ್‌ ಗಾಂಧಿ

ಲಡಾಖ್‌ನಲ್ಲಿರುವ ನಮ್ಮ ಜಾಗವನ್ನು ಚೀನಾ ಕಬಳಿಸಿದೆ ಎಂಬುದು ಪ್ರತಿಯೊಬ್ಬ ಲಡಾಖ್‌ ಪ್ರಜೆಗೂ ಗೊತ್ತು. ಒಂದಿಂಚೂ ಜಾಗವೂ ಚೀನಾ ಪಾಲಾಗಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಶುದ್ಧ ಸುಳ್ಳು ಎಂದು ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 

Rahul Gandhi Slams PM Narendra Modi grg

ಕಾರ್ಗಿಲ್‌(ಆ.25):  ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಬೈಕ್‌ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಚೀನಾ ಗಡಿ ವಿವಾದವನ್ನು ಮತ್ತೊಮ್ಮೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಲಡಾಖ್‌ನಲ್ಲಿರುವ ನಮ್ಮ ಜಾಗವನ್ನು ಚೀನಾ ಕಬಳಿಸಿದೆ ಎಂಬುದು ಪ್ರತಿಯೊಬ್ಬ ಲಡಾಖ್‌ ಪ್ರಜೆಗೂ ಗೊತ್ತು. ಒಂದಿಂಚೂ ಜಾಗವೂ ಚೀನಾ ಪಾಲಾಗಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಶುದ್ಧ ಸುಳ್ಳು ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅಶ್ವಮೇಧ ಯಾಗ ಕಟ್ಟಿಹಾಕುತ್ತಾ ‘INDIA’? ಈಗ ಲೋಕಸಭೆ ಚುನಾವಣೆ ನಡೆದ್ರೆ ಗೆಲ್ಲೋದು ಇವರೇ..!

ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ. ರಾಹುಲ್‌ ಅವರ ಹೇಳಿಕೆ ಆಧಾರರಹಿತ ಹಾಗೂ ಅಸಂಬದ್ಧ. ಬೀಜಿಂಗ್‌ ಜತೆ ವ್ಯವಹರಿಸುವ ಮೂಲಕ ಕಾಂಗ್ರೆಸ್‌ ಐತಿಹಾಸಿಕ ಹಾಗೂ ಕ್ಷಮಿಸಲಾರದ ಅಪರಾಧಗಳನ್ನು ಎಸಗಿದೆ ಎಂದು ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ ಹರಿಹಾಯ್ದಿದ್ದಾರೆ.

9 ದಿನಗಳ ಲಡಾಖ್‌ ಯಾತ್ರೆಯ ಕೊನೆಯ ದಿನವಾದ ಶುಕ್ರವಾರ ಕಾರ್ಗಿಲ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌, ಕಳೆದೊಂದು ವಾರದಿಂದ ಇಡೀ ಲಡಾಖ್‌ ಅನ್ನು ಮೋಟರ್‌ ಸೈಕಲ್‌ನಲ್ಲಿ ಸುತ್ತಿದ್ದೇನೆ. ಲಡಾಖ್‌ ಎಂಬುದು ವ್ಯೂಹಾತ್ಮಕ ಪ್ರದೇಶ. ನಾನು ಪ್ಯಾಂಗಾಂಗ್‌ ಸರೋವರಕ್ಕೆ ಭೇಟಿ ನೀಡಿದಾಗ, ಸಹಸ್ರಾರು ಕಿ.ಮೀ. ಭಾರತೀಯ ಭೂಭಾಗವನ್ನು ಚೀನಾ ಕಬಳಿಸಿರುವುದು ಸ್ಪಷ್ಟವಾಯಿತು. ಆದರೆ ಪ್ರಧಾನಿ ಮೋದಿ ಒಂದಿಂಚೂ ಜಾಗ ಚೀನಾಕ್ಕೆ ಹೋಗಿಲ್ಲ ಎಂದು ಸಂಪೂರ್ಣ ಸುಳ್ಳು ಹೇಳುತ್ತಾರೆ ಎಂದು ಹೇಳಿದರು. ಕಳೆದ ವಾರ ಕೂಡ ಗಡಿ ವಿವಾದವನ್ನು ರಾಹುಲ್‌ ಪ್ರಸ್ತಾಪಿಸಿದ್ದರು.

Latest Videos
Follow Us:
Download App:
  • android
  • ios