59 ಆ್ಯಪ್ ಬ್ಯಾನ್ ಮಾಡಿದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಚೀನಾ ವಿದೇಶಾಂಗ ಇಲಾಖೆ!
ಗಡಿ ಸಂಘರ್ಷ ಹೆಚ್ಚಾಗುತ್ತಿರುವ ಬೆನ್ನಲೇ ಭಾರತ ಸರ್ಕಾರ ಚೀನಾಗೆ ಆರ್ಥಿಕ ಹೊಡೆತ ನೀಡಿದೆ. ಚೀನಾದ 59 ಆ್ಯಪ್ ಬ್ಯಾನ್ ಮಾಡಿದೆ. ಚೀನಾ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ತಿರುಗೇಟು ನೀಡಿದೆ. ಇದರ ಬೆನ್ನಲ್ಲೇ ಚೀನಾ ವಿದೇಶಾಂಗ ಇಲಾಖೆ ಭಾರತದ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿದೆ.
ಬೀಜಿಂಗ್(ಜೂ.30): ಲಡಾಖ್ ಗಡಿಯಲ್ಲಿ ಚೀನಾದ ಅತಿಕ್ರಮಣ, ಭಾರತೀಯ ಯೋಧರ ಮೇಲೆ ದಾಳಿ, ಹೆಚ್ಚುವರಿ ಸೇನೆ ನಿಯೋಜಿಸಿ ಶಕ್ತಿ ಪ್ರದರ್ಶನ ಸೇರಿದಂತೆ ಹಲವು ಕುತಂತ್ರಗಳನ್ನು ಮಾಡಿದೆ. ಶಾಂತಿ ಮಾತುಕತೆಯ ನಾಟಕವಾಡಿ ಗಡಿಯಲ್ಲಿ ಮತ್ತೆ ಖ್ಯಾತೆ ತೆಗೆಯುತ್ತಿದೆ. ಚೀನಾಗೆ ತಿರುಗೇಟು ನೀಡಿಲು ಭಾರತ ಕೂಡ ಗಡಿಯಲ್ಲಿ ಹೆಚ್ಚುವರಿ ಸೇನೆ ನಿಯೋಜಿಸುತ್ತಿದೆ. ಇಷ್ಟೇ ಅಲ್ಲ ಶಸ್ತಾಸ್ತ್ರ ಪೂರೈಕೆ ಮಾಡುತ್ತಿದೆ. ಇದರ ಜೊತೆ ಜೊತೆಗೆ ಭಾರತ ಸರ್ಕಾರ ಚೀನಾದ 59 ಆ್ಯಪ್ ಬ್ಯಾನ್ ಮಾಡಿ ಆರ್ಥಿಕ ಹೊಡೆತ ನೀಡಿದೆ. ಭಾರತದ ಈ ನಿರ್ಧಾರ ಚೀನಾವನ್ನು ಕಂಗೆಡಿಸಿದೆ.
ಚೀನಿ ಆ್ಯಪ್ ಬ್ಯಾನ್: ಪ್ಲೇ ಸ್ಟೋರ್‌ನಿಂದ ಟಿಕ್ ಟಾಕ್ ಡಿಲೀಟ್..!.
ಭಾರತ ಸರ್ಕಾರ 59 ಚೀನಾ ಮೂಲದದ ಆ್ಯಪ್ ಬ್ಯಾನ್ ಮಾಡಿದ ಬೆನ್ನಲ್ಲೇ ಚೀನಾ ವಿದೇಶಾಂಗ ಇಲಾಖೆ ತುರ್ತು ಸಭೆ ನಡಿಸಿದೆ. ಬಳಿಕ ಪ್ರತಿಕ್ರಿಯೆ ನೀಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾಹೋ ಲಿಜಾನ್ ಕಳವಳ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಲಿಜಾನ್ ಹೇಳಿದ್ದಾರೆ.
59 ಆ್ಯಪ್ ನಿಷೇಧದ ನಂತರ ಚೀನಾಕ್ಕೆ ಕೇಂದ್ರದ ಮತ್ತೊಂದು ಶಾಕ್!.
ಇತರ ದೇಶಗಳಲ್ಲಿರುವ ಚೀನಾದ ಎಲ್ಲಾ ವ್ಯವಹಾರಗಳು ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಕಾನೂನು ನಿಬಂಧನೆಗಳಿಗೆ ಬದ್ಧವಾಗಿರುವಂತೆ ನೋಡಿಕೊಳ್ಳುತ್ತದೆ. ನಿಯಮ ಪಾಲನೆಗೆ ಪ್ರಮುಖ ಆದ್ಯತೆ ನೀಡುತ್ತದೆ. ಇದೇ ವೇಳೆ ಭಾರತ ಸರ್ಕಾರಕ್ಕೆ ಚೀನಾ ಸೇರಿದಂತೆ ಅಂತಾರಾಷ್ಟ್ರೀಯ ಹೂಡಿಕೆದಾರರ ಹಕ್ಕುಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಇದೆ ಎಂದು ಜಾಹೋ ಲಿಜಾನ್ ಹೇಳಿದ್ದಾರೆ.
ಚೀನಾದ 59 ಆ್ಯಪ್ ಬ್ಯಾನ್: ಭಾರತದ ನಿರ್ಧಾರ ಡ್ರ್ಯಾಗನ್ ಮೇಲೆಷ್ಟು ಪ್ರಭಾವ ಬೀರುತ್ತೆ?
ಭಾರತದ ನಿರ್ಧಾರ ಆರಾಮವಾಗಿ ನಿದ್ರಿಸುತ್ತಿದ್ದ ಚೀನಾಗೆ ಶಾಕ್ ನೀಡಿದೆ. ಇದೀಗ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ. ಟಿಕ್ ಟಾಕ್ , ಹೆಲೊ, ಶೇರ್ ಇಟ್, ಯುಸಿ ಬ್ರೌಸರ್ ಸೇರಿದಂತೆ 59 ಆ್ಯಪ್‌ಗಳು ಬ್ಯಾನ್ ಆಗಿವೆ.