Asianet Suvarna News Asianet Suvarna News

ಆಟವಾಡುತ್ತಿದ್ದ ಮಕ್ಕಳಿಗೆ ಕಚ್ಚಿದ ಪ್ರಾಂಶುಪಾಲರ ಪ್ರೀತಿಯ ಶ್ವಾನ: ಪೋಷಕರ ಆಕ್ರೋಶ

ಶಾಲೆಯ ಪ್ರಾಂಶುಪಾಲರೊಬ್ಬರು ತಮ್ಮ ಪ್ರೀತಿಯ ಶ್ವಾನವನ್ನು ಶಾಲೆಗೆ ಕರೆತಂದಿದ್ದು, ಇದು ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ದಾಳಿ ಮಾಡಿದ್ದು, ಓರ್ವ ಬಾಲಕನಿಗೆ ಗಾಯವಾಗಿದೆ.

Children were attacked by a pet dog brought by the principal to the school In Hyerabad akb
Author
First Published Jun 23, 2023, 5:13 PM IST

ಹೈದರಾಬಾದ್‌: ಶಾಲೆಯ ಪ್ರಾಂಶುಪಾಲರೊಬ್ಬರು ತಮ್ಮ ಪ್ರೀತಿಯ ಶ್ವಾನವನ್ನು ಶಾಲೆಗೆ ಕರೆತಂದಿದ್ದು, ಇದು ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ದಾಳಿ ಮಾಡಿದ್ದು, ಓರ್ವ ಬಾಲಕನಿಗೆ ಗಾಯವಾಗಿದೆ. ಹೈದರಾಬಾದ್‌ನ ಸನತ್‌ನಗರದಲ್ಲಿರುವ ಸೇಂಟ್ ಥೆರೆಸಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಚಿಕಿತ್ಸೆ ನೀಡಲಾಗಿದೆ.  ಇತ್ತ ಶಾಲೆಗೆ ಶ್ವಾನವನ್ನು ಕರೆತಂದ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪೋಷಕರು ಶಾಲೆಗೆ ನಾಯಿಯನ್ನು ಕರೆತಂದ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಈ ವರ್ಷದ ಫೆಬ್ರವರಿಯಿಂದಲೂ ಹೈದರಾಬಾದ್‌ ನಗರದಲ್ಲಿ ಬೀದಿ ನಾಯಿಯ ಹಾವಳಿ ಹೆಚ್ಚಾಗಿದೆ. ಅಂಬರ್‌ಪೇಟೆಯಲ್ಲಿ 5 ವರ್ಷದ ಬಾಲಕನನ್ನು ಬೀದಿ ನಾಯಿಗಳು ಅಟ್ಟಾಡಿಸಿ ದಾಳಿ ನಡೆಸಿ ಕೊಂದು ಹಾಕಿದ್ದವು. ಬೀದಿ ನಾಯಿಗಳ ಹಾವಳಿ ತಡೆಗೆ ಗ್ರೇಟರ್ ಹೈದರಾಬಾದ್​ ಮಹಾನಗರ ಪಾಲಿಕೆ ಹಲವು  ಕ್ರಮ ಕೈಗೊಂಡಿದ್ದರೂ ಬೀದಿನಾಯಿಗಳ ದಾಳಿ ಆಗಾಗ ನಡೆಯುತ್ತಲೇ ಇವೆ.  ನಿನ್ನೆ ನಡೆದ ವಾರ್ಡ್ ಕಚೇರಿಗಳ ಉದ್ಘಾಟನಾ ಸಮಾರಂಭದಲ್ಲಿ ಕೂಡ ತೆಲಂಗಾಣ ಸಚಿವ ಕೆಟಿ ರಾಮರಾವ್​ ಕೂಡ ನಗರದಲ್ಲಿ ನಾಯಿಗಳ ದಾಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅಷ್ಟರಲ್ಲಿ ಮತ್ತೊಂದು ಘಟನೆ ನಡೆದಿದೆ.

ಮನೆಯಲ್ಲಿದ್ದ ಚಪ್ಪಲಿ ಕಚ್ಚಿದ 4 ಬೀದಿ ನಾಯಿಗೆ ಸಂತಾನಹರಣ ಶಿಕ್ಷೆ ನೀಡಿದ ಮಾಜಿ ಮೇಯರ್!

ಇನ್ನೊಂದೆಡೆ ಮಹಾರಾಷ್ಟ್ರದ ಔರಂಗಬಾದ್‌ನಲ್ಲಿ ಮಾಜಿ ಮೇಯರ್ ತನ್ನ ಎಲ್ಲಾ ಎಲ್ಲಾ ಅಧಿಕಾರ ಬಳಿಸಿ ಬೀದಿ ನಾಯಿಗಳ ಮೇಲೆ ಸೇಡು ತೀರಿಸಿಕೊಂಡ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಮನೆಯಲ್ಲಿಟ್ಟಿದ್ದ ಚಪ್ಪಲಿಯನ್ನು ಕಚ್ಚಿ ಎಳೆದೊಯ್ದ ಕಾರಣಕ್ಕೆ ಮೇಯರ್ ಸುತ್ತ ಮುತ್ತಲಿನ ಬೀದಿ ನಾಯಿಗಳನ್ನು ಹಿಡಿದು ಸಂತಾಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.   ಪಾಲಿಕೆಯ ಮಾಜಿ ಮೇಯರ್ ನಂದಕುಮಾರ್ ಗೊಡೆಲೆ ಈ ಕ್ರಮಕ್ಕೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. 

ನಕ್ಷತ್ರವಾಡಿ ಏರಿಯಾದಲ್ಲಿರುವ ಮಾಜಿ ಮೇಯರ್ ನಂದಕುಮಾರ್ ಮನೆಯ ಗೇಟ್ ತೆರೆದಿತ್ತು. ರಾತ್ರಿ ವೇಳೆ ಬೀದಿ ನಾಯಿಗಳು ಮನೆಯ ವರಾಂಡ ಪ್ರವೇಶಿಸಿದೆ. ಮನೆಯ ಹೊರಗಡೆ ಇದ್ದ ನಂದಕುಮಾರ್ ಹಾಗೂ ಕುಟುಂಬಸ್ಥರ ಚಪ್ಪಲಿಯನ್ನು ಕಚ್ಚಿದೆ. ಇಷ್ಟೇ ಅಲ್ಲ ಕೆಲ ಚಪ್ಪಲಿಯನ್ನು ಎತ್ತಿಕೊಂಡು ಎಳೆದೊಯ್ದಿದೆ. ಬೆಳಗ್ಗೆ ಎದ್ದು ನೋಡಿದಾಗ ಒಂದೊಂದು ಚಪ್ಪಲಿ ಕಾಣೆಯಾಗಿದೆ. 

ಬೀದಿನಾಯಿಗಳ ಭೀಕರ ದಾಳಿಗೆ ವೃದ್ಧ ಬಲಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಚಪ್ಪಲಿ ಕಾಣೆಯಾದ ಕಾರಣ ನಂದಕುಮಾರ್ ಆಕ್ರೋಶಗೊಂಡಿದ್ದಾರೆ. ಹತ್ತಿರದ ಸಿಸಿಟಿವಿ ಪರಿಶೀಲಿಸಲು ಸೂಚಿಸಿದ್ದಾರೆ. ಇದರಂತೆ ಸಿಸಿಟಿವಿ ಪರೀಶೀಲನೆ ವೇಳೆ ಬೀದಿ ನಾಯಿಗಳು ಮನೆಯತ್ತ ನುಗ್ಗಿ ಚಪ್ಪಲಿ ಕಚ್ಚಿ ಎಳೆದೊಯ್ದಿರುವುದು ಪತ್ತೆಯಾಗಿದೆ. ಇದು ಮಾಜಿ ಮೇಯರ್ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ತಮ್ಮ ಎಲ್ಲಾ ಅಧಿಕಾರ ಬಳಸಿ ಪಾಲಿಕೆಗೆ ಕರೆ ಮಾಡಿದ್ದಾರೆ. ನಂದಕುಮಾರ್ ಕರೆ ಬೆನ್ನಲ್ಲೇ ಮರುದಿನ ಬೆಳಗ್ಗೆ ನಾಯಿ ಹಿಡಿಯುವ ತಂಡ ನಕ್ಷತ್ರವಾಡಿ ಏರಿಯಾಗೆ ಹಾಜರಾಗಿದೆ.

ನಾಯಿ ಹಿಡಿಯುವ ತಂಡ ಮಾಜಿ ಮೇಯ್ ನಂದಕುಮಾರ್ ಮನೆಯ ಸುತ್ತಮುತ್ತಲಿನ ಬೀದಿ ನಾಯಿಗಳನ್ನು ಹಿಡಿದಿದೆ. ಇದರಲ್ಲಿ ಚಪ್ಪಲಿ ಕಚ್ಚಿದ ನಾಲ್ಕು ನಾಯಿಗಳನ್ನು ಪತ್ತೆ ಹಚ್ಚಿ ಸಂತಾಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಮಾಹಿತಿ ಹೊರಬರುತ್ತಿದ್ದಂತೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಪಾಲಿಕೆ ಅದಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸ ನೀಡಲಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ. ಇತ್ತ ಮಾಜಿ ಮೇಯರ್ ನಂದಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 

ನಮ್ಮ ಏರಿಯಾದಲ್ಲಿ ನಾವೇ ಸಿಂಹ: ಕಾಡಿನ ರಾಜನನ್ನು ಓಡಿಸಿದ ಬೀದಿನಾಯಿಗಳು: ವಿಡಿಯೋ

Follow Us:
Download App:
  • android
  • ios