ಅಪ್ರಾಪ್ತರ ವರಿಸಿದ ಸಾವಿರಾರು ಪತಿಯರು ಶೀಘ್ರವೇ ಜೈಲಿಗೆ!
ಅಪ್ರಾಪ್ತರನ್ನು ಲೈಂಗಿಕ ಅಪರಾಧಗಳಿಂದ ತಪ್ಪಿಸಲು ಹಾಗೂ ಬಾಲ್ಯ ವಿವಾಹವನ್ನು ಕಡಿಮೆ ಮಾಡುವ ಉದ್ದೇಶದಿಂದ ಅಪ್ರಾಪ್ತರನ್ನು ಮದುವೆಯಾಗಿರುವ ಸಾವಿರಾರು ಗಂಡಂದಿರನ್ನು ಮುಂದಿ ಐದಾರು ತಿಂಗಳಲ್ಲಿ ಬಂಧಿಸಲಾಗುವುದು ಎಂದು ಬಿಹಾರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಗುವಾಹಟಿ: ಅಪ್ರಾಪ್ತರನ್ನು ಲೈಂಗಿಕ ಅಪರಾಧಗಳಿಂದ ತಪ್ಪಿಸಲು ಹಾಗೂ ಬಾಲ್ಯ ವಿವಾಹವನ್ನು ಕಡಿಮೆ ಮಾಡುವ ಉದ್ದೇಶದಿಂದ ಅಪ್ರಾಪ್ತರನ್ನು ಮದುವೆಯಾಗಿರುವ ಸಾವಿರಾರು ಗಂಡಂದಿರನ್ನು ಮುಂದಿ ಐದಾರು ತಿಂಗಳಲ್ಲಿ ಬಂಧಿಸಲಾಗುವುದು ಎಂದು ಬಿಹಾರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಬಾಲ್ಯವಿವಾಹ ತಡೆಯುವ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಯ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಶರ್ಮಾ ಮುಂದಾಗಿದ್ದಾರೆ. ಹಾಗಾಗಿ 14 ವರ್ಷದ ಒಳಗಿನ ಬಾಲಕಿಯರೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಮದುವೆಯಾಗಲು ಕಾನೂನು ನಿಗದಿ ಪಡಿಸಿರುವ ವಯಸ್ಸು 18 ವರ್ಷವಾಗಿದೆ. ಅದಕ್ಕಿಂತ ಕೆಳಗಿನ ವಯಸ್ಸಿನ ವಯಸ್ಸಿನವರನ್ನು ಮದುವೆಯಾದರೆ ಅಂತಹವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ತಾಯಿಯಾಗಲು ಬಹಳ ಸಮಯ ಕಾಯಬಾರದು. 22ರಿಂದ 30ವರ್ಷದೊಳಗೆ ತಾಯಿಯಾಗುವುದು ಉತ್ತಮ. ಅದು ಗರ್ಭಧಾರಣೆಗೆ ಸೂಕ್ತ ಸಮಯ ಎಂದೂ ಅವರು ಹೇಳಿದ್ದಾರೆ.
Mysuru : ಎಚ್.ಡಿ. ಕೋಟೆಯಲ್ಲಿ ಹೆಚ್ಚುತ್ತಿರುವ ಬಾಲ್ಯವಿವಾಹ
Pune: 28 ವರ್ಷದ ಬಾಯ್‌ಫ್ರೆಂಡ್‌ನನ್ನು 15 ವರ್ಷದ ಮಗಳಿಗೆ ಮದುವೆ ಮಾಡಿಸಿದ ಮಹಿಳೆ ಅಂದರ್..!