Asianet Suvarna News Asianet Suvarna News

Pune: 28 ವರ್ಷದ ಬಾಯ್‌ಫ್ರೆಂಡ್‌ನನ್ನು 15 ವರ್ಷದ ಮಗಳಿಗೆ ಮದುವೆ ಮಾಡಿಸಿದ ಮಹಿಳೆ ಅಂದರ್..!

ಬಾಲ್ಯ ವಿವಾಹ ಅಪರಾಧವಾಗಿದೆ. ಆದರೆ ಇಲ್ಲಿ, ತಾಯಿ ತನ್ನ ಬಾಯ್‌ಫ್ರೆಂಡ್‌ ಅನ್ನೇ ಮಗಳಿಗೆ ಮದುವೆ ಮಾಡಿಸಿ ಆತನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆಯೂ ಒತ್ತಾಯ ಮಾಡಿದ್ದಾರೆ ಎಂದು ವರದಿಯಾಗಿದೆ. 

woman gets her 28 year old boyfriend married to her 15 year old daughter in pune arrested ash
Author
First Published Nov 12, 2022, 10:51 AM IST

28 ವರ್ಷದ ಬಾಯ್‌ಫ್ರೆಂಡ್‌ (Boy Friend) ಅನ್ನು ತನ್ನ ಅಪ್ರಾಪ್ತ ಮಗಳಿಗೆ (Teenage Daughter) ಒತ್ತಾಯಪೂರ್ವಕವಾಗಿ ಬಾಲ್ಯ ಮದುವೆ (Child Marriage) ಮಾಡಿಸಿದ ಹಾಗೂ ಆತನೊಂದಿಗೆ ಲೈಂಗಿಕ ಸಂಬಂಧ (Sexual Relationship) ಹೊಂದುವಂತೆ ತಾಯಿಯೇ (Mother) ಒತ್ತಾಯ ಮಾಡಿರುವ ಘಟನೆ ಅಪರೂಪದ ಘಟನೆ ಮಹಾರಾಷ್ಟ್ರದ (Maharashtra) ಪುಣೆಯಲ್ಲಿ (Pune) ನಡೆದಿದೆ. ಈ ಬಗ್ಗೆ ಪೊಲೀಸ್‌ ಅಧಿಕಾರಿಯೊಬ್ಬರು (Police Official) ಶುಕ್ರವಾರ ಮಾಹಿತಿ ನೀಡಿದ್ದಾರೆ. ಅಲ್ಲದೆ, ಪೋಕ್ಸೋ (POCSO) ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ (Prohibition of Child Marriage Act) ಮಹಿಳೆ ಹಾಗೂ ಆತನ ಬಾಯ್‌ಫ್ರೆಂಡ್‌ ಅನ್ನು ಬಂಧಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. 

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ 36 ವರ್ಷದ ಮಹಿಳೆ ಹಾಗೂ 28 ವರ್ಷದ ಆಕೆಯ ಲವರ್‌ ಅನ್ನು ಬಂಧಿಸಲಾಗಿದೆ. 

ಇದನ್ನು ಓದಿ: ಚಿಕ್ಕಬಳ್ಳಾಪುರ: 6 ತಿಂಗಳಲ್ಲಿ 56 ಬಾಲ್ಯ ವಿವಾಹ, ದೂರು ದಾಖಲು

15 ವರ್ಷದ ಅಪ್ರಾಪ್ತ ಬಾಲಕಿ ಈ ಘಟನೆ ಬಗ್ಗೆ ತನ್ನ ಸ್ನೇಹಿತೆಗೆ ಹೇಳಿಕೊಂಡಿದ್ದಾಳೆ. ನಂತರ ಮಹಿಳಾ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಈ ವಿಚಾರ ಮುಟ್ಟಿದ ಬಳಿಕ ಅವರು ಪೊಲೀಸರಿಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಇನ್ನು, ಅಪ್ರಾಪ್ತ ಬಾಲಕಿಯನ್ನು ಒತ್ತಾಯ ಮಾಡಿ ಮದುವೆ ಮಾಡಿಕೊಂಡ ಆರೋಪಿ ಮಹಿಳೆಯ ದೂರದ ಸಂಬಂಧಿ ಹಾಗೂ ಆತ ಆರೋಪಿ ಮಹಿಳೆ ಜತೆಗೆ ವಾಸ ಮಾಡುತ್ತಿರುವುದಾಗಿಯೂ ಚಂದನ್‌ ನಗರ ಪೊಲೀಸ್‌ ಸ್ಟೇಷನ್‌ ಅಧಿಕಾರಿ ಹೇಳಿದ್ದಾರೆ. 
     
ನೀನು ಮದುವೆಗೆ ಒಪ್ಪಿಕೊಳ್ಳದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆರೋಪಿ ಮಹಿಳೆ ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆಂದು ವರದಿಯಾಗಿದೆ. ಬಳಿಕ, ನವೆಂಬರ್ 6 ರಂದು ಅಪ್ರಾಪ್ತ ಮಹಿಳೆ ಮಹಾರಾಷ್ಟ್ರದ ಅಹ್ಮದ್‌ನಗರದ ದೇವಸ್ಥಾನವೊಂದರಲ್ಲಿ ತನ್ನ ತಾಯಿಯ ಬಾಯ್‌ಫ್ರೆಂಡ್‌ನನ್ನೇ ಮದುವೆಯಾದಳು. ಬಳಿಕ, ಬಾಲಕಿಯೊಂದಿಗೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಬಂಧವನ್ನೂ ಹೊಂದಿದ್ದಾರೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ ಎಂದೂ ಪುಣೆಯ ಪೊಲೀಸ್‌ ಅಧಿಕಾರಿ ಈ ಘಟನೆ ಬಗ್ಗೆ ವಿವರಿಸಿದ್ದಾರೆ.        

ಇದನ್ನೂ ಓದಿ: Tumakuru : ಬಾಲ್ಯ ವಿವಾಹ ನಡೆಯದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ 
       
ಬಾಲ್ಯ ವಿವಾಹ ಅಪರಾಧವಾಗಿದೆ. ಆದರೆ ಇಲ್ಲಿ, ತಾಯಿ ತನ್ನ ಬಾಯ್‌ಫ್ರೆಂಡ್‌ ಅನ್ನೇ ಮಗಳಿಗೆ ಮದುವೆ ಮಾಡಿಸಿ ಆತನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆಯೂ ಒತ್ತಾಯ ಮಾಡಿರುವ ಘಟನೆ ನಿಜಕ್ಕೂ ಮನಕಲುಕುವ ಘಟನೆಯಾಗಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಾಕಷ್ಟು ಬಾಲ್ಯ ವಿವಾಹಗಳು ಈಗಲೂ ಸಹ ದೇಶದ ಹಲವೆಡೆ ನಡೆಯುತ್ತಲೇ ಇದೆ. ಕೆಲವು ಘಟನೆಗಳು ವರದಿಯಾಗುವುದೇ ಇಲ್ಲ ಹಾಗೂ ಪೊಲೀಸರ ಗಮನಕ್ಕೂ ಬರುವುದೇ ಇಲ್ಲ. ಈ ಹಿನ್ನೆಲೆ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಸರ್ಕಾರ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ ಹಾಗೂ ಮತ್ತಷ್ಟು ಕಠಿಣ ಶಿಕ್ಷೆಯನ್ನೂ ನೀಡಬೇಕಿದೆ. 

ಇದನ್ನೂ ಓದಿ: 16ರ ಅಪ್ರಾಪ್ತೆಗೆ ತಾಳಿ ಕಟ್ಟಿದ 17ರ ಬಾಲಕ, ಮದುವೆಯಾದ ಬೆನ್ನಲ್ಲೇ ಅರೆಸ್ಟ್!

ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಸಹ ಸಾಕಷ್ಟು ಬಾಲ್ಯ ವಿವಾಹ ನಡೆದಿರುವ ಆರೋಪ ದಾಖಲಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ಪೀಕೃತವಾಗಿರುವ ಒಟ್ಟು 56 ಬಾಲ್ಯ ವಿವಾಹದ ದೂರುಗಳ ಪೈಕಿ ಸಕಾಲದಲ್ಲಿ ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ಪರಿಣಾಮ 53 ಬಾಲ್ಯ ವಿವಾಹಗಳನ್ನು ತಡೆಯಲಾಗಿದ್ದ ಬಗ್ಗೆ ಸರ್ಕಾರ ಮಾಹಿತಿ ನೀಡಿತ್ತು. 

Follow Us:
Download App:
  • android
  • ios