ದುರ್ಗಾ ಪೂಜೆ ಮಾಡುತ್ತಿದ್ದ ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ, ಸ್ಥಳದಲ್ಲೇ ಮೃತ!
ಚುನಾವಣೆ ಸಮೀಪಿಸುತ್ತಿದೆ. ಇದರ ಬೆನ್ನಲ್ಲೇ ರಾಜಕೀಯ ವಾಕ್ಸಮರ, ಮಾತಿನ ಚಕಮಕಿಯೂ ಜೋರಾಗಿದೆ. ಇದರ ನಡುವೆ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಮನೆ ಮಾಡಿದೆ. ದುರ್ಗಾ ಮಾತೆಗೆ ಪೂಜೆ ಸಲ್ಲಿಸುತ್ತಿದ್ದ ವೇಳೆ ಚತ್ತೀಸಘಡ ಬಿಜೆಪಿ ನಾಯಕ ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದಾರೆ.

ರಾಯ್‌ಪುರ್(ಅ.21) ಪಂಚ ರಾಜ್ಯಗಳ ಚುನಾವಣೆಗೆ ಕೆಲ ದಿನಗಳು ಮಾತ್ರ ಬಾಕಿ. ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡುತ್ತಿದೆ. ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ಚತ್ತೀಸಘಡದಲ್ಲಿ ಎರಡು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆ ಎದರಿಸಲು ಬಿಜೆಪಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಇದರ ನಡುವೆ ಬಿಜೆಪಿಗೆ ಆತಂಕ ಎದುರಾಗಿದೆ ಮೊಹ್ಲ ಮಾನ್ಪುರ್ ಅಂಬಘಡ ಜಿಲ್ಲೆಯ ಬಿಜೆಪಿ ಬುಡಕಟ್ಟು ನಾಯಕನ ಬಿರ್ಜು ತಾರಮ್ ಮೇಲೆ ದುರ್ಷರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ದುರ್ಗಾ ಪೂಜೆ ಮಾಡುತ್ತಿದ್ದ ವೇಳೆ ದುರ್ಷರ್ಮಿಗಳು ದಾಳಿ ನಡೆಸಿ ನಾಯಕನ ಹತ್ಯೆಗೈದಿದ್ದಾರೆ.
53 ವರ್ಷದ ಬ್ರಿಜು ತಾರಮ್, ಬುಡಕಟ್ಟು ನಾಯಕನಾಗಿ ಬೆಳೆದಿದ್ದರು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವಿಗೆ ಶ್ರಮಿಸುತ್ತಿದ್ದ ತಾರಮ್, ರೈತರ ಪರವಾಗಿ ಹೋರಾಟ ಮಾಡಿದ ಪ್ರಮುಖ ನಾಯಕನಾಗಿದ್ದರು. ರಾತ್ರಿ 8 ಗಂಟೆ ಹೊತ್ತಿಗೆ ಬೈಕ್‌ನಲ್ಲಿ ಆಗಮಿಸಿದ ದುರ್ಷರ್ಮಿಗಳು ತಾರಮ್ ಮೇಲೆ ಗುಂಡಿನ ಸುರಿಮಳಗೈದಿದ್ದಾರೆ. ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ರಾಮನ್ ಸಿಂಗ್ ಅವರ ರ್ಯಾಲಿಯಲ್ಲಿ ಪಾಲ್ಗೊಂಡು ಬಿಜೆಪಿ ಪರ ಪ್ರಚಾರ ನಡೆಸಿದ್ದ ತಾರಮ್ ಮನೆಗೆ ಹಿಂದಿರುಗುತ್ತಿದ್ದ ವೇಳೆ ದುರ್ಷರ್ಮಿಗಳು ದಾಳಿ ನಡೆಸಿದ್ದಾರೆ.
ಪಾಕ್ ನೆಲದಲ್ಲೇ ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವುದ್ ಮಲಿಕ್ ಹತ್ಯೆ, ಇದು 17ನೇ ಬಲಿ!
ಪ್ರಚಾರ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದುರ್ಗಾ ಪೆಂಡಾಲ್‌ಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸುತ್ತಿದ್ದಂತೆ ಅಪರಿಚಿತರು ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡ ತಾರಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದಾಳಿ ಹಿಂದೆ ಮಾವೋವಾದಿಗಳ ಕೈವಾಡದ ಅನುಮಾನ ವ್ಯಕ್ತವಾಗಿದೆ. ಚತ್ತೀಸಘಡ ನಕ್ಸಲ್ ಪೀಡಿತ ರಾಜ್ಯವಾಗಿದೆ. ಇದೇ ಕಾರಣಕ್ಕೆ ಚತ್ತೀಸಘಡದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ. ಇದೀಗ ಮಾವೋವಾದಿ ಹಾಗೂ ನಕ್ಸಲರ್ ಅಬ್ಬರ ಆರಂಭಿಸಿದ್ದು, ಆತಂಕ ಹೆಚ್ಚಿಸಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಗ್ರಾಮದ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕಬಡ್ಡಿ ಆಟಗಾರನ ಬರ್ಬರ ಹತ್ಯೆ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆ ಮುಂದೆ ಬೀಸಾಡಿದ ದುಷ್ಕರ್ಮಿಗಳು..!
ಚುನಾವಣೆ ಸನಿಹದಲ್ಲಿ ಮಾವೋವಾದಿಗಳ ದಾಳಿ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ಹೆಚ್ಚುವರಿ ಪೊಲೀಸ್ ಭದ್ರತೆಗೆ ಸರ್ಕಾರ ಮುಂದಾಗಿದೆ. ಮೇಲ್ನೋಟಕ್ಕೆ ಮಾವೋವಾದಿಗಳ ದಾಳಿ ಸ್ಪಷ್ಟವಾಗಿದೆ. ಈ ದಾಳಿ ಹಿಂದೆ ಇತರರ ಕೈವಾಡವಿದೆಯಾ ಅನ್ನೋದರ ಕುರಿತು ತನಿಖೆ ನಡೆಯುತ್ತಿದೆ.