Asianet Suvarna News Asianet Suvarna News

ಕಬಡ್ಡಿ ಆಟಗಾರನ ಬರ್ಬರ ಹತ್ಯೆ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆ ಮುಂದೆ ಬೀಸಾಡಿದ ದುಷ್ಕರ್ಮಿಗಳು..!

ಸ್ಥಳೀಯ ವರದಿಗಳ ಪ್ರಕಾರ ಯುವ ಕಬಡ್ಡಿ ಆಟಗಾರನನ್ನು ಬರ್ಬರವಾಗಿ ಹತ್ಯೆ ಮಾಡಿದ ಸಂಬಂಧ, ಇದುವರೆಗೂ ಯಾವುದೇ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿಲ್ಲ ಎಂದು ವರದಿಯಾಗಿದೆ. ಸೆಪ್ಟೆಂಬರ್ 19ರ ರಾತ್ರಿ ಕಬಡ್ಡಿ ಆಟಗಾರನ ಹತ್ಯೆ ನಡೆದಿದೆ ಎಂದು ವರದಿಯಾಗಿದೆ.

Kabaddi player shot dead in Punjab SAD chief calls jungle raj dig at Bhagwant Mann kvn
Author
First Published Sep 23, 2023, 11:15 AM IST

ಚಂಢೀಗಢ(ಸೆ.23): ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಕಬಡ್ಡಿ ಆಟಗಾರನ ಬರ್ಬರ ಹತ್ಯೆಯಾಗಿರುವುದು ವರದಿಯಾಗಿದೆ. ಕೆಲವು ದಿನಗಳ ಹಿಂದಷ್ಟೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅದರಲ್ಲೂ ಆ ಕಬಡ್ಡಿ ಆಟಗಾರನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಅವರ ಮನೆಯ ಮುಂದೆಯೇ ಬೀಸಾಡಿ ಹೋಗಿದ್ದರಿಂದ ಇದೀಗ ಈ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಇನ್ನು ಈ ಘಟನೆಯನ್ನು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಕಠಿಣವಾದ ಪದಗಳಿಂದ ಖಂಡಿಸಿದ್ದಾರೆ. ಪಂಜಾಬ್‌ನಲ್ಲಿ ಈಗ ಜಂಗಲ್‌ ರಾಜ್ಯದ ಆಡಳಿತ ಜಾರಿಯಲ್ಲಿದೆ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವತ್ ಮನ್ ವಿರುದ್ದ ವಾಕ್‌ಪ್ರಹಾರ ನಡೆಸಿದ್ದಾರೆ. ಈ ಘಟನೆಯ ಸಂಬಂಧ, ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾದ ಮುಖ್ಯಮಂತ್ರಿ ಭಗವತ್ ಮನ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

2024ರ ಟಿ20 ವಿಶ್ವಕಪ್‌ಗೆ ಕೆರಿಬಿಯನ್‌ನ 7 ನಗರಗಳ ಆತಿಥ್ಯ..!

ಕಪುರ್ತಲಾ ಜಿಲ್ಲೆಯ ಯುವ ಕಬಡ್ಡಿ ಆಟಗಾರ ಹರ್ದೀಪ್ ಸಿಂಗ್ ಅವರ ಬರ್ಬರ ಹತ್ಯೆಯ ವಿಚಾರ ತಿಳಿದು ನಿಜಕ್ಕೂ ಆಘಾತ ಮೂಡಿಸಿತು. ಈ ರೀತಿ ಕೊಲೆ ಮಾಡಲು ಜನರು ಎಷ್ಟು ನಿರ್ಭಯವಾಗಿದ್ದಾರೆ ಎನ್ನುವುದನ್ನು ಈ ಘಟನೆ ತೋರಿಸುತ್ತದೆ. ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದು ಮಾತ್ರವಲ್ಲದೇ ಮನೆಯ ಬಾಗಿಲು ಬಡಿದು ಎಚ್ಚರಿಕೆ ನೀಡಿದ್ದಾರೆ. ಪಂಜಾಬ್ ಈಗ ಸಂಪೂರ್ಣ ಜಂಗಲ್ ರಾಜ್ ಆಗಿ ಬದಲಾಗಿದೆ. ಪ್ರತಿನಿತ್ಯ ಕೊಲೆ, ಸುಲಿಗೆ, ಸರಗಳ್ಳತನ  ಹಾಗೂ ಕಳ್ಳತನ ಇಲ್ಲಿ ಸರ್ವೇಸಾಮಾನ್ಯವಾಗಿದೆ ಎಂದು ಶಿರೋಮಣಿ ಅಕಾಲಿದಳದ ಮುಖ್ಯಸ್ಥ 'ಎಕ್ಸ್‌' ಮಾಡಿದ್ದಾರೆ.

ಇನ್ನು ಮುಂದುವರೆದು, ಈ ಪರಿಸ್ಥಿತಿಯನ್ನು ನಿಭಾಯಿಸಲು ಭಗವತ್ ಮನ್ ಸಂಪೂರ್ಣ ವಿಫಲವಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಹೀಗಾಗಿ ಯಾವುದೇ ತಡ ಮಾಡದೇ ಮನ್ ನೈತಿಕ ಹೊಣೆಹೊತ್ತು ತಮ್ಮ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಸುಖ್ಬೀರ್ ಸಿಂಗ್ ಆಗ್ರಹಿಸಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲೂ ರಾಜಕೀಯ; ಭಾರತದ ವುಶು ಪಟುಗಳಿಗೆ ವೀಸಾ ನಿರಾಕರಿಸಿದ ಚೀನಾ!

ಇನ್ನು ಸ್ಥಳೀಯ ವರದಿಗಳ ಪ್ರಕಾರ ಯುವ ಕಬಡ್ಡಿ ಆಟಗಾರನನ್ನು ಬರ್ಬರವಾಗಿ ಹತ್ಯೆ ಮಾಡಿದ ಸಂಬಂಧ, ಇದುವರೆಗೂ ಯಾವುದೇ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿಲ್ಲ ಎಂದು ವರದಿಯಾಗಿದೆ. ಸೆಪ್ಟೆಂಬರ್ 19ರ ರಾತ್ರಿ ಕಬಡ್ಡಿ ಆಟಗಾರನ ಹತ್ಯೆ ನಡೆದಿದೆ ಎಂದು ವರದಿಯಾಗಿದೆ.

ಕೆಲವು ವರದಿಗಳ ಪ್ರಕಾರ, ಕಬಡ್ಡಿ ಆಟಗಾರ ಹರ್ದೀಪ್ ಸಿಂಗ್ ಹಾಗೂ ಅದೇ ಏರಿಯಾದಲ್ಲಿ ವಾಸವಾಗಿದ್ದ ಹರ್ಪ್ರೀತ್ ಸಿಂಗ್ ನಡುವೆ ಸಾಕಷ್ಟು ಸಮಯದಿಂದ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಹೀಗಾಗಿ ಈ ಹಿಂದೆಯೇ ಹರ್ದೀಪ್ ಹಾಗೂ ಹರ್ಪ್ರೀತ್ ಅವರ ಮೇಲೆ ದಿಲ್ವಾನ್ ಪೊಲೀಸ್ ಠಾಣೆಯಲ್ಲಿ ಕೇಸ್‌ಗಳು ದಾಖಲಾಗಿದ್ದವು.
 

Follow Us:
Download App:
  • android
  • ios