Asianet Suvarna News Asianet Suvarna News

ಪಾಕ್ ನೆಲದಲ್ಲೇ ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವುದ್ ಮಲಿಕ್ ಹತ್ಯೆ, ಇದು 17ನೇ ಬಲಿ!

ಭಾರತಕ್ಕೆ ಬೇಕಾದ ಮೋಸ್ಟ್ ವಾಂಟಡ್ ಉಗ್ರರನ್ನು ಅವರ ನೆಲದಲ್ಲೇ ಹೊಡೆದುರಳಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೂ ಗ್ರಾಸವಾಗಿದೆ. ಇದೀಗ ಜೈಶ್ ಮೊಹಮ್ಮದ್ ಮುಖ್ಯಸ್ಥ, ಮುಂಬೈ ದಾಳಿ ರೂವಾರಿ ಮಸೂದ್ ಅಜರ್ ಆಪ್ತ ಹಾಗೂ ಉಗ್ರ ದಾವುದ್ ಮಲಿಕ್ ಹೊಡೆದುರಿಳಸಲಾಗಿದೆ. ಪಾಕ್ ನೆಲದಲ್ಲೇ ಉಗ್ರನ ಹತ್ಯೆ ಮಾಡಲಾಗಿದೆ.
 

India most wanted Jaish e terror chief Masood Azhar aide killed in Pakistan by Unknown Assailants ckm
Author
First Published Oct 21, 2023, 4:51 PM IST

ನವದೆಹಲಿ(ಅ.21)  ಭಾರತಕ್ಕ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರನ್ನು ಅವರ ನೆಲದಲ್ಲೇ ಹೊಡೆದುರುಳಿಸುವ ಕಾರ್ಯ ಮುಂದುವರಿದಿದೆ. ಇದೀಗ ಅಪರಿಚಿತ ದುಷ್ಕರ್ಮಿಗಳಿಂದ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಆಪ್ತ, ಉಗ್ರ ದಾವುದ್ ಮಲಿಕ್ ಅಪರಿಚಿತ ವ್ಯಕ್ತಿಯ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. ಪಾಕಿಸ್ತಾನದ ವಾಜರಿಸ್ತಾನದಲ್ಲಿ ಈ ಹತ್ಯೆ ನಡೆದಿದೆ. ಕಳೆದ 19 ತಿಂಗಳಲ್ಲಿ ಇದೇ ರೀತಿ ಅಪರಿಚತ ವ್ಯಕ್ತಿಗಳು, ಗುಂಪಿಗೆ ಬಲಿಯಾದ ಮೋಸ್ಟ್ ವಾಂಟೆಡೆ ಉಗ್ರರ ಸಂಖ್ಯೆ 17ಕ್ಕ ಏರಿಕೆಯಾಗಿದೆ.

ಮಿರಾಲಿ ವಲಯದಲ್ಲಿ ಮಾಸ್ಕ್ ಧರಿಸಿದ ವ್ಯಕ್ತಿ ಹಾರಿಸಿದ ಗುಂಡಿಗೆ ಉಗ್ರ ದಾವುದ್ ಮಲಿಕ್ ಬಲಿಯಾಗಿದ್ದಾನೆ. ಪ್ರತಿ ದಿನವೂ ಭದ್ರತೆಯಲ್ಲಿರುತ್ತಿದ್ದ ದಾವುದ್ ಮಲಿಕ್‌ನನ್ನು ಆತನ ಭದ್ರಕೋಟೆ ಎಂದು ಗುರತಿಸಿಕೊಂಡಿರುವ ಪಾಕಿಸ್ತಾನ ಬುಡುಕಟ್ಟ ಸಮುದಾಯದ ಜಿಲ್ಲೆಯಾಗಿರುವ ವಾಜರಿಸ್ತಾನದಲ್ಲೇ ಹತ್ಯೆ ಮಾಡಲಾಗಿದೆ. ದಾವುಡ್ ಮಲಿಕ್ ಖಾಸಗಿ ಕ್ಲಿನಿಕ್‌ನಲ್ಲಿರುವಾಗ ದಾಳಿ ಮಾಡಲಾಗಿದೆ. ಗುಂಡಿನ ದಾಳಿ ನಡೆಸಿದ ಅಪರಿಚತ ಪರಾರಿಯಾಗಿದ್ದಾನೆ. ಈ ಹತ್ಯೆ ಬೆನ್ನಲ್ಲೇ ಪಾಕಿಸ್ತಾನದ ಗುಪ್ತಚರ ಇಲಾಖೆ ಹಾಗೂ ಪಾಕಿಸ್ತಾನ ಭದ್ರತೆ ಕುರಿತು ಸಾಕಷ್ಟು ಪ್ರಶ್ನೆ ಎದ್ದಿದೆ. ಇದರ ಜೊತೆಗೆ ಭಾರತ ರಾ ಈ  ಹತ್ಯೆ ಮಾಡಿದೆ ಅನ್ನೋ ಆರೋಪವೂ ಕೇಳಿಬಂದಿದೆ.

Unknown Gunmen: ಪಠಾಣ್‌ಕೋಟ್‌ ದಾಳಿಯ ಮಾಸ್ಟರ್‌ಮೈಂಡ್‌ ಶಾಹಿದ್‌ ಲತೀಫ್‌ ಪಾಕಿಸ್ತಾನದಲ್ಲಿ ಹತ್ಯೆ!

ಭಾರತಕ್ಕೇ ಬೇಕಾದ ಉಗ್ರರು ಅವರು ಅಡಗಿರುವ ನೆಲದಲ್ಲೇ ಅಪರಿಚಿತ ದುರ್ಷರ್ಮಿಗಳಿಂದ ಹತ್ಯೆಯಾಗುತ್ತಿದ್ದಾರೆ. ಕಳೆದ 19 ತಿಂಗಳಲ್ಲಿ 17 ಮಂದಿ ಉಗ್ರರನ್ನು ಪಾಕಿಸ್ತಾನ, ಕೆನಡಾ ಸೇರಿದಂತೆ ಕೆಲ ದೇಶಗಳಲ್ಲಿ ಹತ್ಯೆಯಾಗಿದ್ದಾರೆ. ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಕೂಡ ಇದೇ ರೀತಿ ಅಪರಿಚಿತ ವ್ಯಕ್ತಿಗಳ ಗುಂಡಿನ ದಾಳಿಯಲ್ಲಿ ಹತ್ಯೆಯಾಗಿದ್ದ. ಆದರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಸಂಸತ್ತಿನಲ್ಲಿ ಈ ದಾಳಿ ಹಿಂದೆ ಭಾರತದ ಕೈವಾಡವಿದೆ ಅನ್ನೋ ಹೇಳಿಕೆ ನೀಡಿ ಕೋಲಾಹಲ ಎಬ್ಬಿಸಿದ್ದರು.

ಇತ್ತೀಚಗೆಷ್ಟೇ ಭಾರತದ ಪಠಾಣ್‌ಕೋಟ್ ಏರ್‌ಬೇಸ್ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ಇ ತೈಬಾ ಉಗ್ರ ಸಂಘಟನೆಯ ಸಂಯೋಜಕ ಶಾಹೀದ್ ಲತೀಫ್ ಕೂಡ ಹತ್ಯೆಯಾಗಿದ್ದ.ಅಪರಿಚಿತ ದುಷ್ಕರ್ಮಿಗಳ ಗುಂಡಿನ ದಾಳಿಯಲ್ಲಿ ಭಾರತದ ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಹತ್ಯೆ ಮಾಡಲಾಗಿತ್ತು. ಇದೀಗ ದಾವುದ್ ಮಲಿಕ್ ಹತ್ಯೆಯಾಗಿದೆ. ಪಾಕಿಸ್ತಾನದಲ್ಲಿ ಬೀಡುಬಿಟ್ಟಿರುವ ಭಾರತದ ಬೇಕಾಗಿರುವ ಉಗ್ರರ ಒಬ್ಬರ ಹಿಂದೆ ಒಬ್ಬರು ಅಪರಿಚತ ವ್ಯಕ್ತಿಗಳ ಗುಂಡಿನ ದಾಳಿಗೆ ಹತರಾಗುತ್ತಿದ್ದಾರೆ.  

 

ಉಗ್ರ ನಿಜ್ಜರ್‌ ಕೊಲೆ ಕೇಸ್‌ನಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಮೇಲೆ ಗೂಢಚಾರಿಕೆ ನಡೆಸಿತ್ತು ಕೆನಡಾ!

Follow Us:
Download App:
  • android
  • ios