Asianet Suvarna News Asianet Suvarna News

Nand Kumar Baghel : ದಯಾಮರಣ ನೀಡಿ ಎಂದು ರಾಷ್ಟ್ರಪತಿಗೆ ಪತ್ರ ಬರೆದ ಮುಖ್ಯಮಂತ್ರಿಯ ತಂದೆ!

ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ತಂದೆ ನಂದಕುಮಾರ್ ಬಾಗೆಲ್
ಚುನಾವಣೆಯಲ್ಲಿ ಬ್ಯಾಲಟ್ ಪೇಪರ್ ಗೆ ಒತ್ತಾಯಿಸಿ ರಾಷ್ಟ್ರಪತಿಗೆ ಪತ್ರ
ನಮ್ಮ ಬೇಡಿಕೆ ಈಡೇರಿಸಿ, ಇಲ್ಲವೇ ದಯಾಮರಣ ನೀಡಿ ಎಂದು ಒತ್ತಾಯ

Chhattisgarh CM Bhupesh Baghels father urges President Ram Nath Kovind for euthanasia Know Why san
Author
Bengaluru, First Published Jan 11, 2022, 4:35 PM IST

ರಾಯ್ಪುರ (ಜ. 11): ಈ ಹಿಂದೆ ಬ್ರಾಹ್ಮಣರ (Brahmins) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಜೈಲು ಪಾಲಾಗಿದ್ದ ಛತ್ತೀಸ್ ಗಢ ಮುಖ್ಯಮಂತ್ರಿ (Chhattisgarh CM Bhupesh Baghel) ಭೂಪೇಶ್ ಬಾಗೆಲ್ ಅವರ ತಂದೆ 86 ವರ್ಷದ ನಂದ ಕುಮಾರ್ ಬಾಗೆಲ್ (Nand Kumar Baghel) ಈಗ ಮತ್ತೊಮ್ಮ ಸುದ್ದಿಯಲ್ಲಿದ್ದಾರೆ. ಈ ಬಾರಿ ನೇರವಾಗಿ ರಾಷ್ಟ್ರಪತಿಗೆ (President) ಪತ್ರ ಬರೆದಿರುವ ಅವರು ದಯಾಮರಣಕ್ಕೆ ಒತ್ತಾಯ ಮಾಡಿದ್ದಾರೆ. ಆದರೆ, ದಯಾಮರಣದ ಕಾರಣ ಕೂಡ ರಾಜಕೀಯ ಉದ್ದೇಶದ ಕುರಿತಾಗಿಯೇ ಇದೆ. ಮುಂಬರುವ ಚುನಾವಣೆಗಳಲ್ಲಿ ಬ್ಯಾಲಟ್ ಪೇಪರ್ (ballot papers) ಅಥವಾ ಮತಮತ್ರಗಳನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯ ಮಾಡಿದ್ದು, ಹಾಗೇನಾದರೂ ಇದು ಈಡೇರದ ಇದ್ದ ಪಕ್ಷದಲ್ಲಿ ತಮಗೆ ದಯಾಮರಣವನ್ನು (euthanasia) ನೀಡಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind ) ಅವರಿಗೆ ಪತ್ರ ಬರೆದಿದ್ದಾರೆ.

ಇವಿಎಂ (EVM) ಮೂಲಕ ನಡೆಸುವ ಮತದಾನದ ಮೇಲೆ ನಮಗೆ ಸಾಕಷ್ಟು ಅನುಮಾನಗಳಿವೆ. ಹಾಗಾಗಿ ಮತಪತ್ರಗಳ ಮೂಲಕ ಚುನಾವಣೆ ನಡೆಸಬೇಕು. ಇಲ್ಲದೇ ಇದ್ದಲ್ಲಿ ದಯಾಮರಣವನ್ನು ನೀಡಬೇಕು ಎಂದು ಹೇಳಿದ್ದಾರೆ. ''ದೇಶದ ನಾಗರಿಕರ ಎಲ್ಲಾ ಸಾಂವಿಧಾನಿಕ ಹಕ್ಕುಗಳು ದೊಡ್ಡ ಮಟ್ಟದಲ್ಲಿ ಉಲ್ಲಂಘನೆಯಾಗುತ್ತಿವೆ. ಪ್ರಜಾಪ್ರಭುತ್ವದ ಮೂರು ಆಧಾರ ಸ್ತಂಭಗಳಾದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ನಾಶವಾಗುತ್ತಿದೆ.ಮಾಧ್ಯಮಗಳೂ ಪ್ರಜಾಪ್ರಭುತ್ವದ ಮೂರು ಸ್ತಂಭಗಳ ಆಶಯದಂತೆ ಕೆಲಸ ಮಾಡುತ್ತಿವೆ. ದೇಶದ ನಾಗರಿಕರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ, ನಾಗರಿಕರಲ್ಲಿ ಭಯದ ಭಾವನೆ ಇದೆ, ”ಎಂದುರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ರಾಷ್ಟ್ರೀಯ ಮತದಾತ ಜಾಗೃತಿ ಮಂಚ್‌ಗೆ (Rashtriya Matdata Jagriti Manch) ನಂದ್ ಕುಮಾರ್ ಬಾಗೆಲ್ ಮುಖ್ಯಸ್ಥರಾಗಿದ್ದಾರೆ.

"ಮತದಾನದ ಹಕ್ಕು ಇವಿಎಂಗಳ ಮೂಲಕ ಕಾರ್ಯಗತಗೊಳ್ಳುತ್ತಿರುವ ಪ್ರಜಾಪ್ರಭುತ್ವದ ಪರಮೋಚ್ಚ ಹಕ್ಕಾಗಿದೆ. ಯಾವುದೇ ರಾಷ್ಟ್ರೀಯ ಅಥವಾ ಆಂತರಿಕವಾಗಿ ಮಾನ್ಯತೆ ಪಡೆದ ಸಂಸ್ಥೆಗಳು ಅಥವಾ ಸರ್ಕಾರಗಳು ಇವಿಎಂಗಳನ್ನು ಶೇಕಡಾವಾರು ನಿಖರವೆಂದು ಪ್ರಮಾಣೀಕರಿಸಿಲ್ಲ. ಈ ವಾಸ್ತವದ ಹೊರತಾಗಿಯೂ, ಭಾರತದಲ್ಲಿ ಯಂತ್ರಗಳನ್ನು ಬಳಸಿಕೊಂಡು ಮತದಾನವನ್ನು ನಡೆಸುವ ಮೂಲಕ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನನ್ನ ಮತದ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ.ಇವಿಎಂ ಯಂತ್ರದ ಮೂಲಕ ನಾನು ಯಾರ ಪರವಾಗಿ ನನ್ನ ಮತವನ್ನು ಒತ್ತಿದ್ದೇನೋ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಅವರು ಬರೆದಿದ್ದಾರೆ. ಸಾರ್ವಜನಿಕರು, ಮತದಾರರು ಸ್ವತಃ ಮೌಲ್ಯಮಾಪನ ಮಾಡಬಹುದಾದ ಇಂತಹ ಪಾರದರ್ಶಕ ಮತದಾನ ಮತ್ತು ಎಣಿಕೆಯ ವ್ಯವಸ್ಥೆಯನ್ನು ಚುನಾವಣೆಯಲ್ಲಿ ಪರಿಚಯಿಸುವುದು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ಸಾಂವಿಧಾನಿಕ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಏರ್‌ಲಿಫ್ಟ್‌ ವೇಳೆ ಬೇರ್ಪಟ್ಟ ಹಾಲುಗಲ್ಲದ ಕಂದ ಮತ್ತೆ ಪೋಷಕರ ಮಡಿಲಿಗೆ
ಆರೋಗ್ಯಕರ ಪ್ರಜಾಪ್ರಭುತ್ವದ ಹಿತಾಸಕ್ತಿಯಿಂದ ಇವಿಎಂಗಳ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಲು ಆದೇಶ ನೀಡುವಂತೆ ರಾಷ್ಟ್ರಪತಿಗಳನ್ನು ಒತ್ತಾಯಿಸಿದ ಅವರು, "ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಲು ಸಾಧ್ಯವಾಗದಿದ್ದರೆ, ರಾಷ್ಟ್ರಪತಿಗಳು ರಾಷ್ಟ್ರೀಯ ಮತದಾರರ ದಿನವಾದ (National Voters' Day ) ಜನವರಿ 25 ರಂದು ನನಗೆ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಬರೆದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ನಂದ್ ಕುಮಾರ್ ಬಾಗೆಲ್ ವಿವಾದಕ್ಕೆ ಸಿಲುಕಿದ್ದರು. ಬ್ರಾಹ್ಮಣರನ್ನು ವಿದೇಶಿಗರೆಂದು ಟೀಕೆ ಮಾಡಿದ್ದ ನಂದ ಕುಮಾರ್ ಬಾಗೆಲ್, ಹಳ್ಳಿಗಳಿಗೆ ಅವರು ಪ್ರವೇಶಿಸದತೆ ತಡೆಯಬೇಕು ಎಂದಿದ್ದರು.

Follow Us:
Download App:
  • android
  • ios