ರಾಷ್ಟ್ರೀಯ ಸೂಪರ್‌ಕ್ರಾಸ್ ಬೈಕ್ ರೇಸಿಂಗ್ 2022 ರಾಯ್‌ಪುರದ ಬುಧಪಾರಾ ಪ್ರದೇಶದಲ್ಲಿ ನಡೆಯಲಿರುವ ರೇಸ್‌ ರೇಸ್‌ ಪ್ರಮೋಷನ್‌ಗೆ ಮುಂದಾದ ಸಿಎಂ ಭೂಪೇಶ್‌ ಬಘೇಲ್‌

ರಾಯ್‌ಪುರ: ರಾಜಧಾನಿ ರಾಯ್‌ಪುರದಲ್ಲಿ(Raipur) ಭಾನುವಾರ ನಡೆಯಲಿರುವ ಬೈಕ್‌ ರೇಸಿಂಗ್‌ (bike race) ಕಾರ್ಯಕ್ರಮದ ಪ್ರಚಾರಕ್ಕಾಗಿ ಛತ್ತೀಸ್‌ಗಢ ಮುಖ್ಯಮಂತ್ರಿ(Chief Minister) ಭೂಪೇಶ್‌ ಬಘೇಲ್‌ ( Bhupesh Baghel) ಅವರು ಬೈಕ್‌ ಏರಿ ನಗರದಲ್ಲಿ ಸವಾರಿ ಮಾಡಿದ್ದು, ಅವರು ಬೈಕ್‌ ರೈಡ್ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಭಾನುವಾರ ರಾಯ್‌ಪುರದ ಬುಧಪಾರಾ ಪ್ರದೇಶದ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸೂಪರ್‌ಕ್ರಾಸ್ ಬೈಕ್ ರೇಸಿಂಗ್ 2022' (National Supercross Bike Racing 202​2) ರ ಪ್ರಚಾರಕ್ಕಾಗಿ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರು ಬೈಕ್‌ನಲ್ಲಿ ಸವಾರಿ ಮಾಡಿದರು. ಈ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಸಾಹಸ ಕ್ರೀಡೆಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. 

ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ. ಈ ವಿಡಿಯೋದಲ್ಲಿ ಸಿಎಂ ಭೂಪೇಶ್ ಬಘೇಲ್ ಕಿತ್ತಳೆ ಬಣ್ಣದ ಟೀ ಶರ್ಟ್ ಮತ್ತು ಸನ್ ಗ್ಲಾಸ್ ಧರಿಸಿ ಮೇಲೆ ಲೆದರ್‌ ಜಾಕೆಟ್ ಧರಿಸಿ ಬೈಕ್‌ ಸವಾರಿ ಮಾಡುತ್ತಿರುವ ದೃಶ್ಯವಿದೆ. ವಿಡಿಯೋದ ಹಿನ್ನೆಲೆಯಲ್ಲಿ ಪಂಜಾಬಿ ಹಾಡು ಕೇಳಿ ಬರುತ್ತಿದ್ದು ಜೊತೆಗೆ ಸಿಎಂ ಬೈಕ್ ಓಡಿಸುತ್ತಿರುವುದು ಕಂಡು ಬಂದಿದೆ.

Scroll to load tweet…

ಛತ್ತೀಸ್‌ಗಢ ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್ ​​(CGMSA) ರಾಜ್ಯದಲ್ಲಿ ಸಾಹಸ ಕ್ರೀಡೆಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಯ್‌ಪುರದ ಬುಧಪಾರಾ (Budhapara) ಪ್ರದೇಶದ ಹೊರಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಸೂಪರ್‌ಕ್ರಾಸ್ ಬೈಕ್ ರೇಸಿಂಗ್ 2022 ಅನ್ನು ಆಯೋಜಿಸಿದೆ. ಈ ವಾರಾಂತ್ಯವನ್ನು ಛತ್ತೀಸ್‌ಗಢ ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್ ​​(CGMSA) ನೊಂದಿಗೆ ಸ್ಮರಣೀಯವಾಗಿಸೋಣ. ಯುವ ಸಮೂಹವನ್ನು ಆಧರಿಸಿ ಸಿಎಂ ಭೂಪೇಶ್‌ ಬಘೇಲ್‌ (@bhupeshbaghel) ಅವರ ಆಕರ್ಷಕವಾದ ನಾಯಕತ್ವದ ಅಡಿಯಲ್ಲಿ ಒಂದು ಅದ್ಭುತ ಕಾರ್ಯಕ್ರಮಕ್ಕೆ ಮಾರ್ಚ್ 5-6 ರಂದು ನಿಮಗೆ ಸ್ವಾಗತ. ರಾಷ್ಟ್ರೀಯ ಸೂಪರ್‌ಕ್ರಾಸ್ ಬೈಕ್ ರೇಸಿಂಗ್ ಮತ್ತು ರೈಡ್ ವಿತ್ ಪ್ರೈಡ್‌ಗೆ ಸೇರಿ ಎಂದು CMO ಟ್ವೀಟ್ ಮಾಡಿದೆ. ಬೈಕ್ ಅವತಾರದಲ್ಲಿ ಸಿಎಂ ಬಘೇಲ್ ಅವರನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. 

Traffic Violation ಎರಡು ಕೈಯಲ್ಲಿ ಎರಡು ಫೋನ್, ಬೈಕ್‌ನಲ್ಲಿ ಸಾಹಸಕ್ಕೆ ಬಿತ್ತು ದುಬಾರಿ ಫೈನ್!

ಮಾರ್ಚ್ 5ರಂದು ಮಧ್ಯಾಹ್ನ 1.30ಕ್ಕೆ ಅಭ್ಯಾಸ ಪಂದ್ಯ ನಡೆಯಲಿದೆ. ಮಾರ್ಚ್ 6 ರಂದು ಸಂಜೆ 4 ಗಂಟೆಗೆ ಈ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ದೇಶದ ಎಲ್ಲೆಡೆಯಿಂದ ರೈಡರ್‌ಗಳು ರಾಯ್‌ಪುರಕ್ಕೆ ಬರಲಿದ್ದಾರೆ. ಈ ಬೈಕಿಂಗ್ ರೇಸ್‌ನಲ್ಲಿ 11 ವರ್ಷದ ಬೈಕರ್ ಅಲೀನಾ ಮನ್ಸೂರ್ ಶೇಖ್(Alina Mansoor Shaikh), 12 ವರ್ಷದ ಬೈಕ್ ರೈಡರ್ ಅನಸ್ತಯಾ (Anastaya) ಮತ್ತು 9 ವರ್ಷದ ಯಶ್ ಶಿಂಧೆ (Yash Shinde) ಭಾಗವಹಿಸಲಿದ್ದಾರೆ. ವೀಕ್ಷಕರು ಯಾವುದೇ ಪಾಸ್ ಇಲ್ಲದೆ ಅಭ್ಯಾಸ ಪಂದ್ಯವನ್ನು ಆನಂದಿಸಬಹುದಾಗಿದೆ. ಮಾರ್ಚ್ 6 ರಂದು ನಡೆಯುವ ಮುಖ್ಯ ರೇಸ್‌ ವೀಕ್ಷಿಸಲು ಆಹ್ವಾನಿತ ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಹ್ಯಾಂಡಲ್‌ ಹಿಡಿಯದೇ ಸೈಕಲ್‌ನಲ್ಲಿ ನಿಂತುಕೊಂಡು ರಸ್ತೆ ಮಧ್ಯೆ ಸಾಹಸ... ವಿಡಿಯೋ ವೈರಲ್‌