Asianet Suvarna News Asianet Suvarna News

Traffic Violation ಎರಡು ಕೈಯಲ್ಲಿ ಎರಡು ಫೋನ್, ಬೈಕ್‌ನಲ್ಲಿ ಸಾಹಸಕ್ಕೆ ಬಿತ್ತು ದುಬಾರಿ ಫೈನ್!

  • ಒಂದು ಫೋನ್‌ನಲ್ಲಿ ಕಾಲ್, ಮತ್ತೊಂದು ಕೈನಲ್ಲಿ ಫೋನ್ ಆಪರೇಟ್
  • ಬೈಕ್ ರೈಡಿಂಗ್ ವೇಳೆ ಎರಡು ಕೈಬಿಟ್ಟು ಸಲೀಸಾಗಿ ಪ್ರಯಾಣ
  • ಸಿಟಿವಿಯಲ್ಲಿ ದಾಖಲಾಯ್ತು ವಿಡಿಯೋ, ದುಬಾರಿ ಫೈನ್
     
man hold two mobile phones while riding vadodara police issues challan for Traffic Violation ckm
Author
Bengaluru, First Published Feb 21, 2022, 4:06 PM IST

ವಡೋದರ(ಫೆ.21): ವಾಹನ ಚಲಾಯಿಸುವಾಗ ಫೋನ್ ಬಳಕೆ ನಿಯಮ ಉಲ್ಲಂಘನೆಯಾಗಿದೆ. ಆದರೂ ಬೈಕ್ ರೈಡ್ ವೇಳೆ ಒಂದು ಕೈಯಲ್ಲಿ ಫೋನ್ ಹಿಡಿದು ಮತ್ತೊಂದು ಕೈಯಲ್ಲಿ ಬೈಕ್ ಹ್ಯಾಂಡಲ್ ಹಿಡಿದು ಪ್ರಯಾಣ ಮಾಡುವ ದೃಶ್ಯಗಳನ್ನು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಅಸಾಮಿ ನಗರದೊಳಗೆ ಚಲಿಸುವಾಗಿ ಎರಡು ಕೈಗಳನ್ನು ಬೈಕ್ ಹ್ಯಾಂಡಲ್‌ನಿಂದ ತೆಗೆದು ಸಲೀಲಾಗಿ ಈ ಘಪ್ರಯಾಣಿಸುತ್ತಿದ್ದ ವಿಡಿಯೋ ಭಾರಿ ವೈರಲ್ ಆಗಿದೆ. 

ಈ ಘಟನೆ ನಡೆದಿರುವುದು ವಡೋದರಲ್ಲಿ. ವಡೋದರ ನಗರದಲ್ಲಿ ಟ್ರಾಫಿಕ್ ಪೊಲೀಸರು ಅಳವಡಿಸಿದ ಸಿಟಿವಿಯಲ್ಲಿಈ ದೃಶ್ಯ ಸೆರೆಯಾಗಿದೆ. ನಗರದಲ್ಲಿ ಈತ ಬೈಕ್ ರೈಡಿಂಗ್ ಮಾಡುತ್ತಾ ಒಂದು ಕೈನಲ್ಲಿ ಫೋನ್‌ ಹಿಡಿದು ಮಾತನಾಡುತ್ತಿದ್ದರೆ, ಮತ್ತೊಂದು ಕೈನಲ್ಲಿ ಬೇರೊಂದು ಫೋನ್ ತೆಗೆದು ಏನನ್ನೋ ನೋಡುತ್ತಿದ್ದಾರೆ. ಇತ್ತ ಬೈಕ್ ತನ್ನ ಪಾಡಿಗೆ ಚಲಿಸುತ್ತಿದೆ. ಈತನನ್ನೇ ಗಮನಿಸಿದೆ ಕಾರಿನಲ್ಲಿ ಹಿಂಬದಿ ಪ್ರಯಾಣಿಕರು ಚಾಲನೆ ಟೆನ್ಶನ್‌ ಇಲ್ಲದೆ ಫೋನ್ ಬಳಕೆ ಮಾಡುವ ರೀತಿ ಇದೆ. 

Porn Video in Traffic ಟ್ರಾಫಿಕ್ ನಡುವೆ ಚಾಲಕನಿಂದ ಪೋರ್ನ್ ವೀಕ್ಷಣೆ, ಹಿಂಬದಿ ಬೈಕ್ ಸವಾರ ಹರಿಬಿಟ್ಟ ವಿಡಿಯೋ ವೈರಲ್!

ಎರಡು ಕೈಗಳನ್ನು ಬಿಟ್ಟು ಬೈಕ್ ರೈಡಿಂಗ್ ಮಾಡುತ್ತಿರುವುದು ಮಾತ್ರವಲ್ಲ, ಫೋನ್ ಬಳಕೆ ಕೂಡ ಮಾಡುತ್ತಿದ್ದಾನೆ. ಈ ರೀತಿಯ ದೃಶ್ಯಗಳು ಸ್ಟಂಟ್ ಮ್ಯಾನ್‌ಗಳ ಪ್ರದರ್ಶನದಲ್ಲಿ ಮಾತ್ರ ಕಾಣಲು ಸಾಧ್ಯ. ಆದರೆ ಈತ ಯಾವುದೇ ಆತಂಕ, ಭಯವಿಲ್ಲದೆ ನಿಯಮಗಳನ್ನು ಉಲ್ಲಂಘಿಸಿದ್ದಾನೆ.

ಸ್ಟಂಟ್ ಹಾಗೂ ಮೊಬೈಲ್ ಫೋನ್ ಬಳಕೆ ಮಾತ್ರವಲ್ಲ, ಬೈಕ್ ರೈಡಿಂಗ್‌ನಲ್ಲಿ ಹೆಲ್ಮೆಟ್ ಕೂಡ  ಹಾಕಿಲ್ಲ. ಹೀಗಾಗಿ ಒಂದೇ ರೈಡ್‌ನಲ್ಲಿ ಹಲವು ಟ್ರಾಫಿಕ್ ನಿಯಮ ಉಲ್ಲಂಘಿಸಲಾಗಿದೆ. 

 

Traffic Violation ಇನ್ಸ್‌ಸ್ಟಾಗ್ರಾಂಗಾಗಿ ಬೈಕ್ ಮೇಲೆ ಸಿನಿಮಾ ಹಾಡು ಶೂಟಿಂಗ್, ಬುಲೆಟ್ ರೈಡರ್‍‌ಗೆ 14,000 ರೂ ದಂಡ!

ವಡೋದರ ಪೊಲೀಸರು ಸಿಟಿವಿಯಲ್ಲಿ ಈ ದೃಶ್ಯಗಳು ದಾಖಲಾಗಿದೆ. ಸಿಟಿವಿ ಆಧರಿಸಿ ಪೊಲೀಸರು ದುಬಾರಿ ದಂಡ ಹಾಕಿದ್ದಾರೆ. ಬೈಕ್ ನಂಬರ್‌ಗೆ ಚಲನ್ ನೀಡಲಾಗಿದೆ. ಇಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಪ್ರದರ್ಶನ, ತನ್ನ ಜೀವ ಸೇರಿದಂತೆ ಇತರ ಸವಾರರಿಗೆ ಅಪಾಯ ತಂದೊಡ್ಡುವ ರೀತಿಯಲ್ಲಿ ರೈಡಿಂಗ್, ಎರಡು ಫೋನ್ ಬಳಕೆ ಹಾಗೂ ಹೆಲ್ಮೆಟ್ ರಹಿತ ಪ್ರಯಾಣ ಹೀಗೆ ಹಲವು ಟ್ರಾಫಿಕ್ ನಿಯಮಗಳು ಉಲ್ಲಂಘನೆಯಾಗಿದೆ.

ಮೋಟಾರು ನಿಯಮ ಪ್ರಕಾರ ಸಾರ್ವಜನಿಕ ರಸ್ತೆಗಳಲ್ಲಿ ಯಾವುದೇ ಸ್ಟಂಟ್ ಮಾಡುವಂತಿಲ್ಲ. ರ್ಯಾಶ್ ಡ್ರೈವಿಂಗ್ ಕೂಡ ನಿಯಮ ಉಲ್ಲಂಘನೆಯಾಗಿದೆ. ಇನ್ನು ಡ್ರೈವಿಂಗ್ ವೇಳೆ ಮೊಬೈಲ್ ಫೋನ್ ಬಳಕೆ ಮಾಡುವಂತಿಲ್ಲ. ಫೋನ್ ಮಾತ್ರವಲ್ಲ ಹೆಡ್‌ಫೋನ್ ಕೂಡ ಬಳಕೆ ಮಾಡುವಂತಿಲ್ಲ.  

ಫೋನ್ ಬಳಕೆಯಿಂದ ಹಲವು ರಸ್ತೆ ಅಪಘಾತಗಳು ಸಂಭವಿಸಿದೆ. ರಸ್ತೆ ಅಪಘಾತ ಪ್ರಮಾಣ ಕಡಿಮೆ ಮಾಡಲು ಕೇಂದ್ರ ಸರ್ಕಾರ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆದರೂ ರಸ್ತೆ ಅಪಘಾತ ಪ್ರಮಾಣ ಗಣನೀಯವಾಗಿ ತಗ್ಗಿಲ್ಲ.

ಕೇಂದ್ರ ಸರ್ಕಾರ ಸುಗಮ ಸಂಚಾರ ಹಾಗೂ ಇತರ ಸಮಸ್ಯೆಗಳಿಂದ ಮುಕ್ತಿ ಪಡೆಯಲು  ಟ್ರಾಫಿಕ್ ನಿಯಮ ಉಲ್ಲಂಘನೆ ದಂಡವನ್ನು ಹೆಚ್ಚಿಸಲಾಗಿದೆ. ಸಿಗ್ನಲ್ ಜಂಪ್ ಸೇರಿದಂತೆ, ಕುಡಿದು ವಾಹನ ಚಲಾವಣೆ, ಫೋನ್ ಬಳಕೆ ಸೇರಿದಂತೆ ಎಲ್ಲಾ ಮೋಟಾರು ವಾಹನ ಕಾಯ್ದೆ ನಿಯಮಗಳ ಉಲ್ಲಂಘನೆ ದಂಡ ದುಪ್ಪಟ್ಟು ಮಾಡಲಾಗಿದೆ. ಪದೇ ಪದೆ ತಪ್ಪು ಮಾಡಿದರೆ ಡ್ರೈವಿಂಗ್ ಲೈಸೆನ್ಸ್ ರದ್ದಾಗಲಿದೆ.

Follow Us:
Download App:
  • android
  • ios