ಹ್ಯಾಂಡಲ್ ಹಿಡಿಯದೇ ಸೈಕಲ್‌ನಲ್ಲಿ ನಿಂತುಕೊಂಡು ರಸ್ತೆ ಮಧ್ಯೆ ಸಾಹಸ... ವಿಡಿಯೋ ವೈರಲ್
- ರಸ್ತೆ ಮಧ್ಯೆ ವ್ಯಕ್ತಿಯ ಸಾಹಸ
- ಸೈಕಲ್ ಮೇಲೆ ನಿಂತುಕೊಂಡು ಸ್ಟಂಟ್
- ಬೆರಗುಗೊಳಿಸುವ ವಿಡಿಯೋ
ವ್ಯಕ್ತಿಯೊಬ್ಬ ಸೈಕಲ್‌ನಲ್ಲಿ ರಸ್ತೆ ಮಧ್ಯೆ ನಿಂತು ಸಾಹಸ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರು ಹಾಗೂ ವಾಹನಗಳಿಂದ ತುಂಬಿರುವ ರಸ್ತೆಯಲ್ಲಿ ವ್ಯಕ್ತಿಯೋರ್ವ ಸ್ವಲ್ಪವೂ ಕ್ಯಾರೇ ಇಲ್ಲದೇ ಸಾಹಸ ಮಾಡುತ್ತಿದ್ದಾನೆ. ಸಾಹಸ ಮಾಡುತ್ತಿರುವಾಗಲೇ ಅನೇಕ ಕಾರುಗಳು ಅದೇ ರಸ್ತೆಯಲ್ಲಿ ಸಾಗುತ್ತವೆ.
ಕೇವಲ ಹಾಫ್ ಪ್ಯಾಂಟ್ ಧರಿಸಿರುವ ವ್ಯಕ್ತಿಯೊಬ್ಬ ಸೈಕಲ್ ಮೇಲಿರುವ ಸಣ್ಣ ಸೀಟಿನಲ್ಲಿ ನಿಂತುಕೊಂಡು ಸೈಕಲ್‌ನ್ನು ಕೈಯಲ್ಲಿ ಮುಟ್ಟದೇ ಅತ್ತಿತ್ತ ಚಲಾಯಿಸುತ್ತಾ ಸಾಹಸ ಮಾಡುತ್ತಾನೆ. ಸೈಕಲ್‌ನ್ನು ತನ್ನ ದೇಹದಲ್ಲೇ ನಿಯಂತ್ರಿಸುವ ಆತ ಅದನ್ನು ಜಿಗ್‌ಜಾಗ್ ಸ್ಟೈಲ್‌ನಲ್ಲಿ ಓಡಿಸುತ್ತಾನೆ. ವಾಹನಗಳ ಮಧ್ಯೆಯೂ ಆತ ಸೈಕಲ್‌ನ್ನು ಸಾಹಸಮಯವಾಗಿ ಓಡಿಸುವ ರೀತಿ ನೋಡುಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದೆ. ನಿಮಗೆ ಯಾವುದು ಹೆಚ್ಚಿ ಖುಷಿ ಕೊಡುವುದೋ ಅದನ್ನು ಮಾಡಿ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಮಧ್ಯವಯಸ್ಕ ವ್ಯಕ್ತಿಯ ಸಾಹಸ ನೋಡಿ ಬೆರಗಾಗಿದ್ದಾರೆ.
ಸರ್ಕಸ್ ಮಾಡುವ ವೇಳೆ ಸ್ಕೇಟರ್ ಓರ್ವ ಆಯತಪ್ಪಿ 20 ಅಡಿಯಿಂದ ಕೆಳಕ್ಕೆ ಬಿದ್ದಿದ್ದು, ಈ ಭಯಾನಕ ವಿಡಿಯೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜರ್ಮನಿಯಲ್ಲಿ(Germany) ಕಳೆದ ಡಿಸೆಂಬರ್‌ನಲ್ಲಿ ನಡೆದ ಘಟನೆ ಇದಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು.
7.41 ಮೀಟರ್ ಎತ್ತರದ ಸೈಕಲ್ ನಿರ್ಮಿಸಿ ರೈಡಿಂಗ್... ವಿಡಿಯೋ ನೋಡಿ
ಲೈವ್ ಸರ್ಕಸ್ ಪ್ರದರ್ಶನದ ಸಮಯದಲ್ಲಿ ರೋಲರ್‌ಬ್ಲೇಡ್‌ಗಳ (rollerblades) ಮೇಲೆ ಸ್ಟಂಟ್‌ಮ್ಯಾನ್ ಸರ್ಕಸ್ ಮಾಡುತ್ತಿದ್ದು, ಈ ವೇಳೆ ಆಯತಪ್ಪಿ ಆತ 20 ಅಡಿಗಳಷ್ಟು ಕೆಳಗೆ ಬಿದ್ದಿದ್ದಾನೆ. ಜರ್ಮನಿಯ ಡ್ಯೂಸ್‌ಬರ್ಗ್‌ನಲ್ಲಿರುವ (Duisburg) ಫ್ಲಿಕ್ ಫ್ಲಾಕ್ ಸರ್ಕಸ್‌ನಲ್ಲಿ (Flic Flac circus) ಈ ಘಟನೆ ನಡೆದಿದೆ. ಕೆಳಗೆ ಬಿದ್ದ ಸಾಹಸ ಮಾಡುತ್ತಿದ್ದವನನ್ನು ವೃತ್ತಿಪರ ಸ್ಕೇಟರ್ ಮತ್ತು ಪ್ರದರ್ಶಕ ಲುಕಾಸ್ಜ್ ಮಾಲೆವ್ಸ್ಕಿ (Lukasz Malewski)ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಲುಕಾಸ್ ಕೈ ಮಣ್ಣಿಕಟ್ಟು ಸ್ವಲ್ಪ ಮುರಿತಕ್ಕೊಳಗಾಗಿದ್ದು ಬಿಟ್ಟರೆ ಬೇರೇನೋ ಆಗದ ಕಾರಣ ದೊಡ್ಡ ಅವಘಡವೊಂದರಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.
ಲುಕಾಸ್ ಟೇಕ್-ಆಫ್ ಮಾಡುವ ವೇಳೆ ತಪ್ಪಾಗಿ ಹೆಜ್ಜೆ ಇಟ್ಟ ಪರಿಣಾಮ ಈ ಮಾರಣಾಂತಿಕ ಅನಾಹುತ ಸಂಭವಿಸಿತ್ತು. ಅವನು ರಾಫ್ಟರ್‌ಗಳಿಗಿಂತಲೂ (rafters- ರೀಪು ಅಥವಾ ಹಂಚಿನ ಮನೆಯ ಮಾಡಿನಲ್ಲಿರುವ ದಂಡು) ಎತ್ತರಕ್ಕೆ ಹಾರುತ್ತಿರುವುದನ್ನು ಕಾಣಬಹುದು ಆದರೆ ಸರಿಯಾದ ಹಿಡಿತ ಸಿಗದ ಪರಿಣಾಮ ಆತ 20 ಅಡಿ ಕೆಳಗೆ ಬೀಳುತ್ತಾನೆ. ಲುಕಾಸ್ ನೆಲದ ಮೇಲೆ ಬೀಳುತ್ತಿದ್ದಂತೆ ಗಾಬರಿಯಾದ ಜನ ಅಲ್ಲಿ ಒಮ್ಮೆಗೆ ಸೇರಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೇ ಅಲ್ಲಿದ್ದ ಮತ್ತೊಬ್ಬ ಸ್ಟಂಟ್‌ಮ್ಯಾನ್ ಲುಕಾಸ್ ಕೆಳಗೆ ಬೀಳದಂತೆ ತಡೆಯಲು ಯತ್ನಿಸಿದ್ದು ಕಾಣಿಸುತ್ತಿದ್ದು, ಎಲ್ಲವೂ ಕ್ಷಣಾರ್ಧದಲ್ಲಿ ಸಂಭವಿಸಿದೆ. ಘಟನೆಯನ್ನು ನೋಡುತ್ತಿದ್ದ ಜನ ಆತ ಕೆಳಗೆ ಬೀಳುತ್ತಿದ್ದಂತೆ ವೇದಿಕೆ ಮೇಲೆ ಬಂದು ಆತನಿಗೆ ಅಲ್ಲಿಂದ ಹೊರಬರಲು ಸಹಾಯ ಮಾಡಲು ಮುಂದಾದರು.
ಹಿಂದೆ ಪ್ರಪಾತ ಮುಂದೆ ಬೆಟ್ಟ, ಕಡಿದಾದ ರಸ್ತೆಯಲ್ಲಿ ಚಾಲಕನ ಸಾಹಸ... ವಿಡಿಯೋ ವೈರಲ್
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಲುಕಾಸ್, ಘಟನೆಯಲ್ಲಿ ನನಗೆ ಪಕ್ಕೆಲುಬುಗಳು, ಸೊಂಟ, ಭುಜಕ್ಕೆ ಪೆಟ್ಟಾಗಿತ್ತು. ನನಗೆ ಕಾರೊಂದು ಗುದ್ದಿದ ಅನುಭವವಾಯ್ತು, ಆದರೆ ಪ್ರಸ್ತುತ ನಾನು ಆರಾಮವಾಗಿದ್ದೇನೆ. ನಾನು ಜೀವಂತವಾಗಿದ್ದೇನೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಅವಘಡ ಸಂಭವಿಸಿದಾಗ ಸ್ಟಂಟ್‌ಮ್ಯಾನ್ ಜೋ ಅಟ್ಕಿನ್ಸನ್ (Joe Atkinson) ಅವರು ಲುಕಾಸ್ ಜೊತೆಗೆ ಸಾಹಸ ಪ್ರದರ್ಶನ ನೀಡುತ್ತಿದ್ದರು. 'ನಾನು ಮುಂದಿನ ಜಿಗಿತಕ್ಕಾಗಿ ಮೆಟ್ಟಿಲುಗಳ ಮೇಲೆ ಓಡುತ್ತಿದ್ದೆ ಈ ವೇಳೆ ನನಗೆ ಜೋರಾಗಿ ಕೂಗಿಕೊಂಡ ಸದ್ದು ಕೇಳಿಸಿತು. ಸ್ಕೂಟರ್ ರೈಡರ್ ಒಬ್ಬರು ಅವರು ಬಿದ್ದಿದ್ದನ್ನು ಗುರುತಿಸಲು ಪ್ರಯತ್ನಿಸಿದರು ಎಂದು ಲುಕಾಸ್ ಹೇಳಿದರು.