Asianet Suvarna News Asianet Suvarna News

ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಾಘೇಲ್‌ಗೂ ಮಹದೇವ ‘ಪ್ರಸಾದ’ ವಿತರಣೆ: ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ 508 ಕೋಟಿ ಲಂಚ!

ಮಹದೇವ ಬೆಟ್ಟಿಂಗ್ ಆ್ಯಪ್‌ನ ಪ್ರವರ್ತಕರಿಂದ ಬಾಘೇಲ್‌ 508 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. 

chhattisgarh cm bhupesh baghel got 508 crore from mahadev betting app promoters says enforcement directorate ash
Author
First Published Nov 4, 2023, 9:45 AM IST

ನವದೆಹಲಿ (ನವೆಂಬರ್ 4, 2023): ಛತ್ತೀಸ್‌ಗಢ ಚುನಾವಣೆಯ ನಡುವೆಯೇ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಹದೇವ ಬೆಟ್ಟಿಂಗ್ ಆ್ಯಪ್‌ನ ಪ್ರವರ್ತಕರಿಂದ ಬಾಘೇಲ್‌ 508 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. 

ತನಿಖೆಯ ಸಮಯದಲ್ಲಿ ಈ ವಿಷಯ ತಿಳಿದುಬಂದಿದೆ ಎಂದು ಇ.ಡಿ. ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಬಂಧಿಸಿದ್ದ ಏಜೆಂಟ್‌ ಆಸೀಂ ದಾಸ್‌ ಎಂಬಾತನನ್ನು ಈ ಆ್ಯಪ್‌ನ ಪ್ರವರ್ತಕರು ದುಬೈನಿಂದ ಕಳುಹಿಸಿದ್ದರು. ಈತ ಕಾಂಗ್ರೆಸ್‌ ಪಕ್ಷದ ಚುನಾವಣಾ ವೆಚ್ಚಕ್ಕಾಗಿ ದೊಡ್ಡ ಪ್ರಮಾಣದ ಹಣಕಾಸಿನ ಸಹಾಯ ಒದಗಿಸಿದ್ದ. ಅಲ್ಲದೇ ಈತನ ಬಳಿ ವಶಪಡಿಸಿಕೊಳ್ಳಲಾದ 5.39 ಕೋಟಿ ರೂ. ನಗದನ್ನು ಸಹ ಆ್ಯಪ್‌ನ ಪ್ರವರ್ತಕರು ನೀಡಿದ್ದರು. ಇದನ್ನು ಬಾಘೇಲ್‌ ಅವರಿಗೆ ನೀಡಲು ಸೂಚಿಸಲಾಗಿತ್ತು ಎಂದು ಸಹ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ತನಿಖಾ ಸಂಸ್ಥೆ ಹೇಳಿದೆ. 

ಇದನ್ನು ಓದಿ: ಛತ್ತೀಸ್‌ಗಢಕ್ಕೆ ಕಾಂಗ್ರೆಸ್‌ ಬಳಿಕ ‘ಮೋದಿ ಗ್ಯಾರಂಟಿ’: 500 ರೂ.ಗೆ ಸಿಲಿಂಡರ್; ಅಯೋಧ್ಯೆಗೆ ತೆರಳಲು ಭಕ್ತರಿಗೆ ನೆರವು!

ದಾಸ್‌ ವಿಚಾರಣೆ ಅಷ್ಟೇ ಅಲ್ಲದೆ ಆತನ ಮೊಬೈಲನ್ನು ಸಹ ಪರಿಶೀಲಿಸಲಾಗಿದ್ದು, ಆ್ಯಪ್‌ನ ಪ್ರವರ್ತಕರಿಂದ ಬಂದಿರುವ ಇ - ಮೇಲ್‌ಗಳು ಇದನ್ನು ಮತ್ತಷ್ಟು ದೃಢಪಡಿಸುತ್ತಿವೆ. ಹೀಗಾಗಿ ಈ ಕುರಿತಾಗಿ ತನಿಖೆ ನಡೆಸುವ ಅಗತ್ಯ ಇದೆ ಎಂದು ಇ.ಡಿ. ಹೇಳಿದೆ.

ಏನಿದು ಮಹದೇವ ಬೆಟ್ಟಿಂಗ್ ಆ್ಯಪ್‌ ಹಗರಣ?
ಇದೊಂದು ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್‌ ಆಗಿದ್ದು, ವಿದೇಶಿ ಮೂಲಗಳಿಂದ ನಿರ್ವಹಿಸಲ್ಪಡುತ್ತಿತ್ತು. ಹಲವು ಆಟಗಳು ಮತ್ತು ಲಾಟರಿಯನ್ನು ಹೊಂದಿರುವ ಇದು ಪ್ರತಿನಿತ್ಯ ಸುಮಾರು 200 ಕೋಟಿ ರೂ. ಗೂ ಹೆಚ್ಚು ಹಣ ಸಂಪಾದನೆ ಮಾಡುತ್ತಿತ್ತು. ಅಅಲ್ಲದೇ ಇದು 4 ದೇಶಗಳಲ್ಲಿ ಸಕ್ರಿಯ ಕಾಲ್‌ ಸೆಂಟರ್‌ಗಳನ್ನು ಹೊಂದಿತ್ತು ಎನ್ನಲಾಗಿದೆ. 

ಇದನ್ನು ಓದಿ: ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಸಂಸದನಿಗೆ ಚಾಕು ಇರಿತ: ಆರೋಪಿಗೆ ಹಿಗ್ಗಾಮುಗ್ಗ ಥಳಿತ; ಪೊಲೀಸ್‌ ವಶಕ್ಕೆ

ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‌ನಿಂದ 7 ಗ್ಯಾರಂಟಿ; ಅಧಿಕಾರಕ್ಕೆ ಬಂದ್ರೆ ಕರ್ನಾಟಕ ರೀತಿ ಎಲ್ಲ ಗ್ಯಾರಂಟಿ ಜಾರಿ: ಗೆಹ್ಲೋಟ್‌ ಘೋಷಣೆ

Follow Us:
Download App:
  • android
  • ios