Asianet Suvarna News Asianet Suvarna News

ಪುತ್ರನ ಸಾವಿನ ನ್ಯಾಯಕ್ಕಾಗಿ ಹೋರಾಡಿದ ಕೂಲಿ ಕಾರ್ಮಿಕ ಈಗ ಬಿಜೆಪಿ ಶಾಸಕ!

ಜಿಹಾದಿಗಳಿಂದ ಹತ್ಯೆಯಾದ ಪುತ್ರನ ಸಾವಿಗೆ ನ್ಯಾಯಕೊಡಿಸಲು ಹೋರಾಡಿದ ಈಶ್ವರ್ ಸಾಹುಗೆ, ಕಾಂಗ್ರೆಸ್ ಸರ್ಕಾರ ನೆರವು ನೀಡಲಿಲ್ಲ. ಇತ್ತ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದರೆ, ಈಶ್ವರ್ ಸಾಹು ಏಕಾಂಗಿ ಹೋರಾಟ ನಡೆಸಿದ್ದರು. ಇದೇ ಈಶ್ವರ್ ಸಾಹುಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿತ್ತು. ಇದೀಗ ಕಾಂಗ್ರೆಸ್‌ನಿಂದ 7 ಬಾರಿ ಶಾಸಕನಾಗಿದ್ದ ನಾಯಕನನ್ನೇ ಮಣಿಸಿರುವ ಈಶ್ವರ್ ಸಾಹು ಇದೀಗ ಶಾಸಕರಾಗಿದ್ದಾರೆ.

Chhattisgarh Assembly Election Results mob violence victim Ishwar Sahu defeat 7 time Congress MLA ckm
Author
First Published Dec 3, 2023, 11:31 PM IST

ಸಾಜ(ಡಿ.03)ಜಿಹಾದಿಗಳ ಕೃತ್ಯಕ್ಕೆ ತನ್ನ ಪುತ್ರನ ಹತ್ಯೆಯಾಗಿತ್ತು. ಪುತ್ರನ ಸಾವಿಗೆ ನ್ಯಾಯಕೊಡಿಸಲು ತಂದೆ ಈಶ್ವರ್ ಸಾಹು ಹೋರಾಟ ಆರಂಭಿಸಿದ್ದರು. ಅಧಿಕಾರದಲ್ಲಿದ್ದ ಕಾಂಗ್ರೆಸ್‌ನಿಂದ ಈಶ್ವರ್‌ಗೆ ಯಾವುದೇ ನೆರವು ಸಿಗಲಿಲ್ಲ. ಇತ್ತ ಆರೋಪಿಗಳು ಜೈಲಿನಿಂದ ಸುಲಭವಾಗಿ ಬಿಡುಗಡೆಯಾಗಿದ್ದರು. ಆದರೆ ಈಶ್ವರ್ ಸಾಹು ಹೋರಾಟ ನಿಲ್ಲಿಸಿರಲಿಲ್ಲ. ಈಶ್ವರ್ ಸಾಹುಗೆ ಬಿಜೆಪಿ ಸಾಥ್ ನೀಡಿತ್ತು. ಈ ಹೋರಾಟದ ಮೂಲಕ ಗಮನಸೆಳೆದ ಈಶ್ವರ್ ಸಾಹುಗೆ ಈ ಬಾರಿ ಛತ್ತೀಸಘಡ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿತ್ತು. ಸಾಜಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಈಶ್ವರ್ ಸಾಹು, ಪ್ರತಿಸ್ಪರ್ಧಿ, ಕಾಂಗ್ರೆಸ್‌ನಿಂದ 7 ಬಾರಿ ಶಾಸಕನಾಗಿ ಆಯ್ಕೆಯಾದ ರವೀಂದ್ರ ಚೌಬೆಯನ್ನು ಸೋಲಿಸಿ ದಾಖಲೆ ಬರೆದಿದ್ದಾರೆ. 

ಸಾಜಾ ಕ್ಷೇತ್ರದಿಂದ ಸ್ಪರ್ಧಿಸಿದ ಈಶ್ವರ್ ಸಾಹು ಬರೋಬ್ಬರಿ 5,196 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಈಶ್ವರ್ ಸಾಹು 1,01,789 ಮತಗಳನ್ನು ಪಡೆದರೆ, ಕಾಂಗ್ರೆಸ್ ನಾಯಕ ರವೀಂದ್ರ ಚೌಬೆ 96,593 ಮತ ಪಡೆದಿದ್ದಾರೆ. ಕಾಂಗ್ರೆಸ್ ಪ್ರಮುಖ ನಾಯಕನಾಗಿ, ಚತ್ತಿಸಘಡ ವಿರೋಧ ಪಕ್ಷದ ನಾಯಕನಾಗಿ, ಸಂಸದಿಯ ವ್ಯವಹಾರ ಸಚಿವನಾಗಿದ್ದ ರವೀಂದ್ರ ಚೌಬೆ ಇದೀಗ ಸೋಲಿನ ಮುಖಭಂಗ ಅನುಭವಿಸಿದ್ದಾರೆ.

ಬಿಜೆಪಿ ಸ್ಟ್ರೋಕ್‌ಗೆ ಛತ್ತೀಸಘಡದಲ್ಲಿ ಕಾಂಗ್ರೆಸ್ ಧೂಳೀಪಟ, ಬುಡಕಟ್ಟು ನಾಯಕನಿಗೆ ಸಿಎಂ ಪಟ್ಟ?

ಈಶ್ವರ್ ಸಾಹು ರಾಜಕಾರಣಿ ಅಲ್ಲ. ಈತ ಕೂಲಿ ಕಾರ್ಮಿಕ. ಚತ್ತೀಸಘಡದಲ್ಲಿ ನಡೆದ ಹಿಂಸಾಚಾರದಲ್ಲಿ ತನ್ನ ಪುತ್ರ ಭುವನೇಶ್ವ್ ಸಾಹು ಹತ್ಯೆಯಾಗಿದ್ದ. ಬಿರಾನ್‌ಪುರ್ ಗ್ರಾಮದಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳ ಸೈಕಲ್ ಡಿಕ್ಕಿಯಾಗಿತ್ತು. ಮುಸ್ಲಿಂ ವಿದ್ಯಾರ್ಥಿ ಸೈಕಲ್ ಹಾಗೂ ಹಿಂದೂ ವಿದ್ಯಾರ್ಥಿ ಸೈಕಲ್ ಡಿಕ್ಕಿಯಾಗಿ ವಾಗ್ವಾದ ಆರಂಭಗೊಂಡಿತ್ತು. ಈ ವೇಳೆ ಮುಸ್ಲಿಂ ವಿದ್ಯಾರ್ಥಿ, ಹಿಂದೂ ವಿದ್ಯಾರ್ಥಿಗೆ ಗಾಜಿನ ಬಾಟಲಿ ಮೂಲಕ ಹಲ್ಲೆ ಮಾಡಿದ್ದು. ಈ ವೇಳೆ ಎರಡು ಗುಂಪುಗಳ ಘರ್ಷಣೆ ಆರಂಭಗೊಂಡಿತು. ಈ ಘಟನೆ ನಡೆದಿರುವುದು 2023ರ ಎಪ್ರಿಲ್ ತಿಂಗಳಲ್ಲಿ.

 

 

ಮಾಹಿತಿ ತಿಳಿಯುತ್ತಿದ್ದಂತೆ ಜಿಹಾದಿ ಮನಸ್ಥಿತಿ ಯವಕರ ಗುಂಪು ಸ್ಥಳಕ್ಕೆ ಧಾವಿಸಿತ್ತು. ಮಚ್ಚು ಲಾಂಗ್ ಹಿಡಿದು ಬಿರನ್‌ಪುರ್ ಗ್ರಾಮದಲ್ಲಿ ಭೀಕರ ದಾಳಿ ನಡೆಸಿತ್ತು. ಈ ವೇಳೆ ಮನೆಯೊಳಗಿದ್ದ ಈಶ್ವರ್ ಸಾಹು ಪುತ್ರ 22 ವರ್ಷದ ಭುವನೇಶ್ವ ಸಾಹುವನ್ನು ಜಿಹಾದಿಗಳು ಹೊರಗೆಳೆದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಘಟನೆಯ ಬಗ್ಗೆ ಅರಿವೇ ಇಲ್ಲದ ಭುವನೇಶ್ವರ್ ಸಾಹು ಅಮಾನುಷವಾಗಿ ಕೊಲೆಯಾಗಿದ್ದು.

ತನ್ನ ಪುತ್ರನ ಸಾವಿಗೆ ನ್ಯಾಯಕೊಡಿಸಲು ಕೂಲಿ ಕಾರ್ಮಿಕ ಈಶ್ವರ್ ಸಾಹು ಹೋರಾಟ ಆರಂಭಿಸಿದ್ದರು. ಆದರೆ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿ ಈಶ್ವರ್ ಸಾಹುಗೆ ಧಮ್ಕಿ ಹಾಕಲು ಆರಂಭಿಸಿದ್ದರು. ಕಾಂಗ್ರೆಸ್ ಸರ್ಕಾರದ ಬಳಿ ಪರಿ ಪರಿಯಾಗಿ ಬೇಡಿಕೊಂಡರು ಯಾವುದೇ ನರೆವು ಸಿಗಲಿಲ್ಲ. ಇತ್ತ ಆರೋಪಿಗಳಿಗೆ ಶಿಕ್ಷೆ ಕೂಡ ಆಗಲಿಲ್ಲ. ಪುತ್ರನ ಫೋಟೋ ಹಿಡಿದು ಏಕಾಂಗಿ ಹೋರಾಟ ನಡೆಸಿದ ಈಶ್ವರ್ ಸಾಹುಗೆ ಬಿಜೆಪಿ ಬೆಂಬಲ ನೀಡಿತ್ತು.

ಮಾಮ-ಮೋದಿ ಮೋಡಿಗೆ ಮಧ್ಯಪ್ರದೇಶ ಬಿಜೆಪಿ ಮಡಿಲಿಗೆ, ಗೆಲುವಿಗಿದೆ ಮತ್ತೆರೆಡು ಕಾರಣ!

ಈ ಬಾರಿಯ ಚತ್ತಿಸಘಡ ಚುನಾವಣೆಗೆ ಬಿಜೆಪಿ ಈಶ್ವರ್ ಸಾಹುಗೆ ಟಿಕೆಟ್ ನೀಡಿತ್ತು. ಇದೀಗ ಈಶ್ವರ್ ಸಾಹು ಇತಿಹಾಸ ರಚಿಸಿದ್ದಾರೆ. ಕೂಲಿ ಕಾರ್ಮಿಕ, ಯಾವುದೇ ರಾಜಕೀಯ ಹಿನ್ನಲೆ ಇಲ್ಲ, ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ, ಬಿಜೆಪಿಯಲ್ಲಿ ಕಾರ್ಯಕರ್ತನಾಗಿ ದುಡಿದ ಅನುಭವೂ ಇಲ್ಲ. ಆದರೆ ನ್ಯಾಯಕ್ಕಾಗಿ ಮಾಡಿದ ಹೋರಾಟ ಇದೀಗ ಈಶ್ವರ್ ಸಾಹುವನ್ನು ಶಾಸಕನಾಗಿ ಆಯ್ಕೆ ಮಾಡಿದೆ.

Latest Videos
Follow Us:
Download App:
  • android
  • ios