Asianet Suvarna News Asianet Suvarna News

ಬಿಜೆಪಿ ಸ್ಟ್ರೋಕ್‌ಗೆ ಛತ್ತೀಸಘಡದಲ್ಲಿ ಕಾಂಗ್ರೆಸ್ ಧೂಳೀಪಟ, ಬುಡಕಟ್ಟು ನಾಯಕನಿಗೆ ಸಿಎಂ ಪಟ್ಟ?

ಛತ್ತೀಸಘಡದಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಂಪೂರ್ಣ ವಿಶ್ವಾಸ ಕಾಂಗ್ರೆಸ್‌ಗಿತ್ತು. ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿತ್ತು. ಆದರೆ ಫಲಿತಾಂಶ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದೆ. ಛತ್ತೀಸಘಡದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೇರಿದೆ. ಇದು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗದ ಸೋಲು. ಛತ್ತೀಸಘಡದಲ್ಲಿ ಕಾಂಗ್ರೆಸ್ ಪ್ಲಾನ್ ಉಲ್ಟಾ ಆಗಿದ್ದು ಹೇಗೆ? ಇದೀಗ ಸಿಎಂ ರೇಸ್‌ನಲ್ಲಿ ಯಾರಿದ್ದಾರೆ? 

Chhattisgarh Assembly Election Result BJP masterstroke outclass overconfidence Congress ckm
Author
First Published Dec 3, 2023, 10:12 PM IST

ಛತ್ತೀಸಘಡ(ಡಿ.03) ಪಂಚ ರಾಜ್ಯ ಚುನಾವಣೆ ಪೈಕಿ ಛತ್ತೀಸಘಡದಲ್ಲಿ ಕಣ್ಮುಚ್ಚಿ ಅಧಿಕಾರಕ್ಕೇರುವ ವಿಶ್ವಾಸ ಕಾಂಗ್ರೆಸ್‌ಗಿತ್ತು. ಇದಕ್ಕೆ ತಕ್ಕಂತೆ ಅಬ್ ಕಿ ಬಾರ್, 75 ಪಾರ್ ಅನ್ನೋ ಘೋಷವಾಕ್ಯವನ್ನು ಕಾಂಗ್ರೆಸ್ ಬಳಸಿತ್ತು. ಈ ಬಾರಿ 75ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಘೋಷಣೆಯನ್ನು ಕೂಗಿತ್ತು. ಬುಡಕಟ್ಟು ಸಮುದಾಯ, ಒಬಿಸಿ ಸಮುದಾಯಗಳೇ ಪ್ರಾಬಲ್ಯ ಸಾಧಿಸಿರುವ ಛತ್ತೀಸಘಡದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿದ್ದೇ ಹೆಚ್ಚು. ಆದರೆ ಈ ಬಾರಿ ಬಿಜೆಪಿಯ ಮಾಸ್ಟರ್‌ಸ್ಟ್ರೋಕ್‌ಗೆ ಕಾಂಗ್ರೆಸ್ ತತ್ತರಿಸಿದೆ.  

90 ವಿಧಾನಸಭಾ ಕ್ಷೇತ್ರ ಸ್ಥಾನಗಳಿರುವ ಛತ್ತೀಸಘಡದಲ್ಲಿ ಸರ್ಕಾರ ರಚನೆಗೆ ಕನಿಷ್ಠ 46 ಸ್ಥಾನ ಗೆಲ್ಲಬೇಕು. ಬಿಜೆಪಿ 54 ಸ್ಥಾನ ಗೆಲ್ಲುವ ಮೂಲಕ ಪೂರ್ಣ ಬಹುಮತ ಪಡೆಯಿತು. ಇತ್ತ ಕಾಂಗ್ರೆಸ್ 35 ಸ್ಥಾನಕ್ಕೆ ಕುಸಿತ ಕಂಡಿತು.

ರಾಜಸ್ಥಾನದ 25 ಸಚಿವರ ಪೈಕಿ ಗೆದ್ದವರು 9 ಮಂದಿ ಮಾತ್ರ, ಗೆಹ್ಲೋಟ್‌ಗೆ ಕೈಕೊಟ್ಟ ಮಿನಿಸ್ಟರ್ಸ್!

ಛತ್ತೀಸಘಡ ವಿಧಾನಸಭಾ ಚುನಾವಣಾ ಫಲಿತಾಂಶ 2023
ಬಿಜೆಪಿ: 54
ಕಾಂಗ್ರೆಸ್: 35
ಜಿಜಿಪಿ: 1

ಛತ್ತಿಸಘಡ ಸಿಎಂ ರೇಸ್‌ನಲ್ಲಿರುವ ಪ್ರಮುಖ ನಾಯಕರು:
ಛತ್ತಿಸಘಡ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿ ಇದೀಗ ಸರ್ಕಾರ ರಚನೆ ಕಸರತ್ತಿನಲ್ಲಿದೆ. ಮುಖ್ಯಮಂತ್ರಿ ರೇಸ್‌ನಲ್ಲಿ ಕೆಲ ಪ್ರಮುಖ ಹೆಸರುಗಳು ಕೇಳಿಬರುತ್ತಿದೆ.

ವಿಷ್ಣು ದಿಯೋ ಸಾಯಿ: ಛತ್ತಿಸಘಡದಲ್ಲಿ ಬುಡಕಟ್ಟು ಸಮುದಾಯದ ಮತಗಳು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ. 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಬುಡಕಟ್ಟು ಸಮುದಾಯದ ಪ್ರಬಲ ನಾಯಕ ವಿಷ್ಣು ದಿಯೋ ಸಾಯಿ ಹೆಸರು ಮುಂಚೂಣಿಯಲ್ಲಿದೆ. ಛತ್ತಿಸಘಡದ ಮಾಜಿ ಸಿಎಂ ಹಾಗೂ ಕೇಂದ್ರದ ಮಾಜಿ ಸಚಿವ ವಿಷ್ಣು ದಿಯೋ ಸಾಯಿ ಮುಂದಿನ ಸಿಎಂ ಅನ್ನೋ ಮಾತುಗಳು ಬಲವಾಗುತ್ತಿದೆ.

ಇಂದಿನ ಹ್ಯಾಟ್ರಿಕ್ 2024ರ ಲೋಕಸಭೆ ಹ್ಯಾಟ್ರಿಕ್ ಗೆಲುವಿನ ಗ್ಯಾರೆಂಟಿ, ಬಿಜೆಪಿ ಜಯಭೇರಿಗೆ ಮೋದಿ ಖುಷ್!

ಛತ್ತೀಸಘಡ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಹೆಸರು ಕೂಡ ಸಿಎಂ ರೇಸ್‌ನಲ್ಲಿ ಕಾಣಿಸಿಕೊಂಡಿದೆ. ಸದ್ಯ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ರಮಣ್ ಸಿಂಗ್ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರದ ರಾಜ್ಯ ಖಾತೆ ಸಚಿವರಾಗಿದ್ದರು. ಮಹಿಳಾ ಸಿಎಂ ಅನ್ನೋ ಮಾತುಗಳು ಕೇಳಿಬರುತ್ತಿದೆ. ಮಹಿಳಾ ಸಿಎಂ ನೇಮಕಗೊಂಡರೆ ರೇಣುಕಾ ಸಿಂಗ್ ಹೆಸರು ಮುಂಚೂಣಿಯಲ್ಲಿದೆ. ರೇಣುಕಾ ಸಿಂಗ್ ಕೂಡ ಬುಡಕಟ್ಟು ಸಮುದಾಯದ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಮಾಡಿದ ಒಬಿಸಿ ಆರೋಪಕ್ಕೆ ಪ್ರತ್ಯುತ್ತರ ನೀಡಲು ಒಬಿಸಿ ಸಮುದಾಯದಿಂದ ಸಿಎಂ ಆಯ್ಕೆ ಮಾಡಿದರೆ ನಾಯಕ ಅರುಣ್ ಸಾವೋ ಹೆಸರು ಮುಂಚೂಣಿಯಲ್ಲಿದೆ.

Follow Us:
Download App:
  • android
  • ios