ಚೆನ್ನೈನ (Chennai) ಉದ್ಯಮಿಯೊಬ್ಬರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ (Employee) ಕಾರು ಬೈಕ್ ಮೊದಲಾದ ಭರ್ಜರಿ ಕೊಡುಗೆಗಳನ್ನು ನೀಡುವ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.

ಚೆನ್ನೈ: ಇನ್ನೇನು ದೀಪಾವಳಿ ಹಬ್ಬ ಸಮೀಪಿಸುತ್ತಿದೆ, ಹಲವು ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೋನಸ್ ಆಗಿ ಏನಾದರೂ ಗಿಫ್ಟ್ ನೀಡುತ್ತಾರೆ. ಕೆಲವು ಸಂಸ್ಥೆಗಳಲ್ಲಿ ಒಂದು ತಿಂಗಳ ಸಂಬಳ ಗಿಫ್ಟ್ ನೀಡಿದರೆ ಮತ್ತೆ ಕೆಲವು ಸಂಸ್ಥೆಗಳಲ್ಲಿ ಸಿಹಿ ತಿನಿಸು ಪಟಾಕಿ ಬಾಕ್ಸ್, ಬ್ಯಾಗ್ ಹೀಗೆ ಸಣ್ಣ ಪುಟ್ಟ ವಸ್ತುಗಳಿಂದ ಆರಂಭವಾಗಿ ದೊಡ್ಡ ದೊಡ್ಡ ವಸ್ತುಗಳವರೆಗೆ ಉದ್ಯೋಗಿಗಳಿಗೆ ಸಂಸ್ಥೆ ಉಡುಗೊರೆ ನೀಡುತ್ತದೆ. ಕಳೆದ ವರ್ಷ ಗುಜರಾತ್‌ನ ವಜ್ರಾಭರಣ ಸಂಸ್ಥೆಯ ಮಾಲೀಕರೊಬ್ಬರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಭಾರಿ ಸುದ್ದಿಯಾಗಿತ್ತು.

ಅದೇ ರೀತಿ ಈಗ ಚೆನ್ನೈನ (Chennai) ಉದ್ಯಮಿಯೊಬ್ಬರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ (Employee) ಕಾರು ಬೈಕ್ ಮೊದಲಾದ ಭರ್ಜರಿ ಕೊಡುಗೆಗಳನ್ನು ನೀಡುವ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಚೆನ್ನೈ ನಗರದಲ್ಲಿರುವ ಛಲನಿ ಜ್ಯುವೆಲ್ಲರಿ ಸಂಸ್ಥೆಯ ಮಾಲೀಕ, ಜಯಂತಿ ಲಾಲ್ ಛಯಂತಿ (Jayanthi Lal Chayanthi) ಎಂಬ ಉದ್ಯಮಿಯೊಬ್ಬರು ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಒಟ್ಟು 18 ಬೈಕ್ ಹಾಗೂ 8 ಕಾರುಗಳನ್ನು ಖರೀದಿಸಿ ನೀಡಿದ್ದಾರೆ. ತಮ್ಮ ಮಾಲೀಕ ನೀಡಿದ ಈ ಅಚ್ಚರಿಯ ಗಿಫ್ಟ್‌ಗೆ (Gift) ಅಲ್ಲಿದ್ದ ಅನೇಕರು ಮಾತು ಹೊರಡಂತೆ ಸ್ತಬ್ಧರಾಗಿ ನಿಂತಿದ್ದರು. ಅನೇಕರು ಖುಷಿಯಿಂದ ಕಣ್ಣೀರು ಸುರಿಸಿದರು. 

Scroll to load tweet…

ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಸಂಸ್ಥೆಯ ಮಾಲೀಕ ಜಯಂತಿ ಲಾಲ್, ನನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ನನಗೆ ನನ್ನ ಕುಟುಂಬವಿದ್ದಂತೆ. ಅವರು ನನ್ನ ವ್ಯವಹಾರದ ಏಳು ಬೀಳುಗಳ ಸಂದರ್ಭದಲ್ಲಿ ನನ್ನ ಜೊತೆಗಿದ್ದರು. ಜೊತೆಗೆ ನನಗೆ ಉತ್ತಮ ಆದಾಯ ಗಳಿಸುವಲ್ಲಿ ಸಹಾಯ ಮಾಡಿದ್ದರು. ಅವರಾರು ನನ್ನ ಸಂಸ್ಥೆಯ ಸಿಬ್ಬಂದಿ ಅಲ್ಲ, ಅವರು ನನ್ನ ಕುಟುಂಬವಿದ್ದಂತೆ, ಹೀಗಾಗಿ ನಾನು ನನ್ನ ಕುಟುಂಬಕ್ಕೆ (Family) ನೀಡುವಂತೆ ಅವರಿಗೂ ಸರ್‌ಫ್ರೈಸ್ ಅಗಿ ಉಡುಗೊರೆ ನೀಡಿದ್ದೇನೆ. ಇದರಿಂದ ನನಗೂ ತುಂಬಾ ಖುಷಿ ಆಗುತ್ತಿದೆ. ಎಲ್ಲ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಹೀಗೆ ಉಡುಗೊರೆ ನೀಡಬೇಕು ಎಂದು ಅವರು ಹೇಳಿದರು. 

ಕೇರಳದ ಉದ್ಯೋಗಿಗೆ ಮರ್ಸಿಡಿಸ್‌ ಬೆಂಜ್‌ ಕಾರು ಗಿಫ್ಟ್ ನೀಡಿದ ಮಾಲೀಕ

ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ದೀಪಾವಳಿ ಗಿಫ್ಟ್‌:

ಇದೇ ರೀತಿ ರೈಲ್ವೆ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ದೀಪಾವಳಿ ಹಬ್ಬದ ಅಂಗವಾಗಿ ಸಂತಸದ ಸುದ್ದಿ ನೀಡಿದೆ. ಪ್ರಸಕ್ತ ಸಾಲಿನಲ್ಲಿ 78 ದಿನಗಳ ವೇತನಕ್ಕೆ ಸಮನಾದ ಉತ್ಪಾದಕತೆ ಆಧರಿತ ಬೋನಸ್‌ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರತಿ ಉದ್ಯೋಗಿಗೆ ಸರಾಸರಿ 18 ಸಾವಿರ ರೂ. ಬೋನಸ್‌ ಲಭಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಇದರಿಂದ ಇಲಾಖೆಯಲ್ಲಿನ 11.27 ಲಕ್ಷ ನಾನ್‌ ಗೆಜೆಟೆಡ್‌ ಉದ್ಯೋಗಿಗಳಿಗೆ ಲಾಭವಾಗಲಿದೆ. ಇಷ್ಟು ಉದ್ಯೋಗಿಗಳಿಗೆ ಬೋನಸ್‌ ನೀಡಲು 1832 ಕೋಟಿ ರೂ. ವೆಚ್ಚವಾಗಲಿದೆ. ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಿಬ್ಬಂದಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷ ಟ್ರ್ಯಾಕ್‌ ನಿರ್ವಹಣೆ ಮಾಡುವವರು, ಚಾಲಕರು, ಗಾರ್ಡ್‌, ಪರಿವೀಕ್ಷಕರು, ತಂತ್ರಜ್ಞರು, ಕಂಟ್ರೋಲರ್‌, ಪಾಯಿಂಟ್ಸ್‌ಮೆನ್‌, ಸಚಿವರ ಸಿಬ್ಬಂದಿ ಮತ್ತು ಇತರೆ ಸಿ ಗ್ರೂಪ್‌ ಸಿಬ್ಬಂದಿಗೆ ಬೋನಸ್‌ ನೀಡಲಾಗುತ್ತದೆ.

Vijayapura: ನಿವೃತ್ತ ಶಿಕ್ಷಕನಿಗೆ ಗ್ರಾಮಸ್ಥರಿಂದ ಕಂಡುಕೇಳರಿಯದ ಬೀಳ್ಕೊಡುಗೆ!

2021-2022ರ ಹಣಕಾಸು ವರ್ಷಕ್ಕೆ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆ-ಸಂಯೋಜಿತ ಬೋನಸ್ ಪಾವತಿಗೆ ಸರ್ಕಾರ ಆ.12 ರಂದು ಅನುಮೋದನೆ ನೀಡಿತ್ತು. ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ, ಗೆಜೆಟೆಡ್ ಅಲ್ಲದ ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆ-ಸಂಬಂಧಿತ ಬೋನಸ್ (ಪಿಎಲ್‌ಬಿ) ಅನ್ನು ಪಾವತಿಸಲಾಗುವುದು ಎಂದು ಸಚಿವ ಸಂಪುಟ ಸಭೆ ತಿಳಿಸಿತ್ತು.