ಮೃತದೇಹ ಪತ್ತೆ ಪ್ರಕರಣ, ತನಿಖೆಗೂ ಮೊದಲೇ ಭಜರಂಗದಳ ಹೆಸರು ಹೇಳಿದ ಸಿಎಂ ಕ್ಷಮೆಯಾಚನೆಗೆ ಪಟ್ಟು!

ಸುಟ್ಟು ಕರಕಲಾದ ಮೃತದೇಹ ಕೇಸ್ ಇದೀಗ ಚುರುಕುಗೊಂಡಿದೆ. ಆದರೆ ತನಿಖೆಗೂ ಮೊದಲೇ ಸಿಎಂ ಅಶೋಕ್ ಗೆಹ್ಲೋಟ್ ಈ ಪ್ರಕರಣದ ಹಿಂದೆ ಬಜರಂಗದಳ ಕೈವಾಡ ಇದೆ ಎಂಬ ಹೇಳಿಕೆ ನೀಡಿದ್ದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಅಶೋಕ್ ಗೆಹ್ಲೋಟ್‌ ಭೇಷರತ್ ಕ್ಷಮೆ ಯಾಚಿಸಬೇಕು ಎಂದು ಹೋರಾಟ ಆರಂಭಗೊಂಡಿದೆ. 

Charred skeletons burnt vehicle case VHP Demand Rajasthan Cm Ashok Gehlot should apologize for name Bajrang Dal ckm

ಜೈಪುರ(ಫೆ.17): ವಾಹನದಲ್ಲಿ ಸುಟ್ಟುಕರಕಲಾದ ಸ್ಥಿತಿಯಲ್ಲಿ ಎರಡು ಮೃತ ದೇಹ ಪತ್ತೆಯಾದ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ರಾಜಸ್ಥಾನ ಹಾಗೂ ಹರ್ಯಾಣದ ಗಡಿ ಭಾಗವಾಗಿರುವ ಬಿವಾನಿಯಲ್ಲಿ ಸಂಪೂರ್ಣವಾಗಿ ಸುಟ್ಟ ಜೀಪ್‌ನಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿತ್ತು. ಭಾಗಶಃ ಸುಟ್ಟಿದ್ದ ಈ ಮೃತ ದೇಹ ರಾಜಸ್ಥಾನ ಮೂಲದ ಜುನೈದ್(35) ಹಾಗೂ ನಾಸಿರ್(27) ಎಂದು ಗುರುತಿಸಲಾಗಿದೆ. ಈ ಘಟನೆ ವರದಿಯಾದ ಬೆನ್ನಲ್ಲೇ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜಕೀಯ ಪ್ರೇರಿತ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.ಈ ಘಟನೆ ಹಿಂದೆ ಭಜರಂಗದಳದ ಕೈವಾಡವಿದೆ ಎಂಬ ಅನುಮಾನದ ಹೇಳಿಕೆ ನೀಡಿದ್ದರು. ಇದು ಆಕ್ರೋಶಕ್ಕೆ ಕಾರಣವಾಗಿದೆ. ತನಿಖೆಗೂ ಮೊದಲೇ, ಯಾವುದೇ ಆಧಾರವಿಲ್ಲದೆ ಬಜರಂಗದಳದ ಹೆಸರು ಎಳೆದು ತರಲಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದಾರೆ. ಹೀಗಾಗಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರ ಪ್ರಧಾನ ಕಾರ್ಯದರ್ಶಿ ಡಾ.ಸುರೇಂದ್ರ ಜೈನ್ ಹೇಳಿದ್ದಾರೆ.

ಲೊಹರು ಬಳಿ ಪತ್ತೆಯಾಗಿರುವ ಸುಟ್ಟು ಕರಕಲಾದ ವಾಹನದಲ್ಲಿ ಸುಟ್ಟ ಮೃತದೇಹ ಪತ್ತೆಯಾಗಿದೆ. ಈ ಘಟನೆ ದುರಾದೃಷ್ಟಕರ. ಅಕಸ್ಮಿಕವಾಗಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಇಬ್ಬರು ಸುಟ್ಟುಕರಕಲಾಗಿದ್ದಾರೆಯೇ? ಅಥವಾ ಹತ್ಯೈಗೆದು ವಾಹನಕ್ಕೆ ಬೆಂಕಿ ಇಡಲಾಗಿದೆಯೇ? ಅನ್ನೋದು ತನಿಖೆಯಿಂದ ಬಹಿರಂಗವಾಗಬೇಕು. ಇದರ ನಡುವೆ ಬಜರಂಗದಳದ ಹೆಸರು ಯಾಕೆ ಎಳೆದು ತಂದೀದ್ದೀರಿ ಎಂದು ಸುರೇಂದ್ರ ಜೈನ್ ಪ್ರಶ್ನಿಸಿದ್ದಾರೆ. 

ಲವ್ ಜಿಹಾದ್ ವಿರುದ್ಧ VHP ಸಮರ: 20 ಜನರ ಟೀಂ ರಚನೆ

ರಾಜಸ್ಥಾನದಿಂದ ಇಬ್ಬರು ಗೋ ಕಳ್ಳರು ನಾಪತ್ತೆಯಾಗಿದ್ದರು. ನಾಪತ್ತೆಯಾದ ಗೋಕಳ್ಳರ ಸಹೋದರ ಬಜರಂಗದಳದ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೇ ಮೂಲ ಆಧಾರವಾಗಿಟ್ಟುಕೊಂಡು ಅಶೋಕ್ ಗೆಹ್ಲೋಟ್ ಹೇಳಿಕೆ ನೀಡಿದ್ದರೆ. ಮುಖ್ಯಮಂತ್ರಿ ಆಧಾರ ರಹಿತಿ ಹೇಳಿಕೆ ನೀಡಿ ಧರ್ಮದ ನಡುವೆ ವಿಷಬೀತ ಬಿತ್ತುತ್ತಿದ್ದಾರೆ. ಶಾಂತಿಯುತ ವಾತಾವರಣ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸುರೇಂದ್ರ ಜೈನ್ ಆರೋಪಿಸಿದ್ದಾರೆ. 

ಗೋಳ್ಳರ ಸಹೋದರ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ತನಿಖೆ ನಡೆಯಲಿದೆ. ಆದರೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಈ ಹಿಂದೆಯೂ ಹಲವು ಬಾರಿ ಬಜರಂಗದಳದ ಹೆಸರು ತಂದಿದೆ. ಪ್ರಕರಣ ವರದಿ ಬಂದಾಗ ಆರೋಪಿಗಳ, ಅಪರಾದಿಗಳು ಬೇರೆ ಆಗಿದ್ದರು. ಕಾಂಗ್ರೆಸ್ ಸರ್ಕಾರ ಪ್ರತಿ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಇದೀಗ ಅನಗತ್ಯವಾಗಿ ಬಜರಂಗದಳದ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸುರೇಂದ್ರ ಜೈನ್ ಹೇಳಿದ್ದಾರೆ. 

ಭಾರತದ ಶಿರ ಕಾಶ್ಮೀರ ಕತ್ತರಿಸಲು ಬಿಡಲ್ಲ: ಸಾಧ್ವಿ ಪ್ರಜ್ಞಾ ಸಿಂಗ್‌

ರಾಜಸ್ಥಾನ ಸರ್ಕಾರದಿಂದ ನಿಸ್ಪಕ್ಷಪಾತ ತನಿಖೆ ಅಸಾಧ್ಯ. ಅಶೋಕ್ ಗೆಹ್ಲೋಟ್ ಬಜರಂಗದಳ ಹೆಸರು ಹೇಳಿದ ಮೇಲೆ ಪೊಲೀಸರ ತನಿಖೆ ಅದೇ ದಿನಕ್ಕಿನಲ್ಲಿ ಸಾಗಲಿದೆ. ರಾಜಸ್ಥಾನ ಸರ್ಕಾರದಿಂದ ಈ ಪ್ರಕರಣದಲ್ಲಿ ನ್ಯಾಯ ಹೊರಬರಲಿದೆ ಅನ್ನೋ ಯಾವುದೇ ವಿಶ್ವಾಸವಿಲ್ಲ. ಹೀಗಾಗಿ ವಿಶ್ವಹಿಂದೂ ಪರಿಷತ್ ಸಿಬಿಐ ತನಿಖೆಗೆ ಆದೇಶಿಸಿದೆ. ತನಿಖೆ ವೇಳೆ ಗೋಳಕಳ್ಳರ ಸಹೋದರ ಹೇಳಿಕೆ ಆಧಾರಸಿ ಬಜರಂಗದಳದ ಯಾವುದೇ ಕಾರ್ಯಕರ್ಕರನ್ನು ಬಂಧಿಸಬಾರದು. ತನಿಖೆಯಲ್ಲಿ ಯಾವುದೇ ಆಧಾರ, ಸುಳಿವಿದ್ದರೆ ಮಾತ್ರ ಬಂಧಿಸುವ ಅವಕಾಶವಿದೆ. ಈ ಘಟನೆಯಲ್ಲಿ ಯಾರೇ ತಪ್ಪತಸ್ಥರಿದ್ದರೂ ಕಠಿಣ ಶಿಕ್ಷೆ ನೀಡಬೇಕು. ರಾಜಸ್ಥಾನ ಸರ್ಕಾರ ವಿನಾಕಾರಣ ಭಜರಂಗದಳ ಹೆಸರು ಉಲ್ಲೇಖಿಸಿರುವ ಕಾರಣ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ವಿಶ್ವಹಿಂದೂ ಪರಿಷತ್ ಬೇಡಿಕೆ ಇಟ್ಟಿದೆ.

Latest Videos
Follow Us:
Download App:
  • android
  • ios