ನಾಂಪಲ್ಲಿ ರೈಲು ನಿಲ್ದಾಣದಲ್ಲಿ ಚಾರ್ ಮಿನಾರ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಚಾರ್‌ ಮಿನಾರ್ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಉರುಳಿದ ಪರಿಣಾಮ ಈ ಅವಘಡ ಸಂಭವಿಸಿದೆ. 

ತೆಲಂಗಾಣ: ನಾಂಪಲ್ಲಿ ರೈಲು ನಿಲ್ದಾಣದಲ್ಲಿ ಚಾರ್ ಮಿನಾರ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಚಾರ್‌ ಮಿನಾರ್ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಉರುಳಿದ ಪರಿಣಾಮ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಸಮೀಪದ ರೈಲ್ವೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕೇಂದ್ರ ರೈಲ್ವೆಯ ಸಿಇಆರ್‌ಒ ರಾಕೇಶ್ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ್ದು, ಅವರು ಹೇಳುವ ಪ್ರಕಾರ ಬೆಳಗ್ಗೆ 9.15ರ ಸುಮಾರಿಗೆ ಈ ಅನಾಹುತ ಸಂಭವಿಸಿದೆ. ಈ ರೈಲ್ವೆ ನಿಲ್ದಾಣವು ಟರ್ಮಿನಲ್ ಸ್ಟೇಷನ್ ಆಗಿದ್ದು, ಇಲ್ಲಿಗೆ ರೈಲುಗಳು ಬಂದು ಪ್ರಯಾಣ ಅಂತ್ಯಗೊಳಿಸುತ್ತಿದ್ದವು. ರೈಲು ಪ್ರಯಾಣ ಕೊನೆಗೊಳಿಸುವ ಮೊದಲು ನಿಲ್ಲಬೇಕಿತ್ತು. ಆದರೆ ರೈಲು ನಿಲ್ಲದೇ ಮಿತಿ ಮೀರಿ ಮುಂದೆ ಹೋದ ಪರಿಣಾಮ ಈ ಘಟನೆ ನಡೆದಿದೆ. ರೈಲಿನ ಮೂರು ಕೋಚುಗಳು ಹಳಿ ತಪ್ಪಿವೆ. ಈ ವೇಳೆ ರೈಲಿನ ಬಾಗಿಲ ಬಳಿ ನಿಂತಿದ್ದ ಐವರು ಕೆಳಗೆ ಬಿದ್ದು ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಅವರನ್ನು ರೈಲ್ವೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ನಮ್ಮ ಮೆಟ್ರೋದಲ್ಲಿ ಕೆಟ್ಟದಾಗಿ ಕಿರುಚಿ ಭಯಭೀತಗೊಳಿಸಿ ವಿಡಿಯೋ; ಇನ್ಸ್‌ಟಾಗ್ರಾಂ ಸ್ಟಾರ್‌ಗೆ ದಂಡ ವಿಧಿಸಿದ ಬಿಎಂಆರ್‌ಸಿಎಲ್

ಈ ರೈಲು ಏರೋಪ್ಲೇನ್‌ಗಿಂತ ವೇಗವಾಗಿ ಓಡಬಲ್ಲದು!

Scroll to load tweet…