Asianet Suvarna News Asianet Suvarna News

ಚಂದ್ರಯಾನ ನಿದ್ರಾವಸ್ಥೆಗೆ, ಲ್ಯಾಂಡರ್‌, ರೋವರ್‌ ಕೆಲಸ ಪೂರ್ಣ: ಚಂದ್ರನಲ್ಲಿ ನಾಳೆಯಿಂದ ರಾತ್ರಿ!

ಕಳೆದ 11 ದಿನಗಳಿಂದ ಚಂದ್ರನ ಮೇಲೆ ವಿವಿಧ ಸಂಶೋಧನೆಗಳನ್ನು ನಡೆಸುತ್ತಿದ್ದ ವಿಕ್ರಂ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ತಮ್ಮ ಕೆಲಸಗಳನ್ನು ಪೂರ್ತಿಗೊಳಿಸಿದ್ದು, ‘ನಿದ್ದೆ’ ಮಾಡಲು ಆರಂಭಿಸಿವೆ! 

chandrayaan 3 update isro says pragyan rover put into sleep mode may wake up on 22 september gvd
Author
First Published Sep 3, 2023, 4:00 AM IST

ಶ್ರೀಹರಿಕೋಟ (ಸೆ.03): ಕಳೆದ 11 ದಿನಗಳಿಂದ ಚಂದ್ರನ ಮೇಲೆ ವಿವಿಧ ಸಂಶೋಧನೆಗಳನ್ನು ನಡೆಸುತ್ತಿದ್ದ ವಿಕ್ರಂ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ತಮ್ಮ ಕೆಲಸಗಳನ್ನು ಪೂರ್ತಿಗೊಳಿಸಿದ್ದು, ‘ನಿದ್ದೆ’ ಮಾಡಲು ಆರಂಭಿಸಿವೆ! ನಿಗದಿತ 14 ದಿನದ ಬದಲು 3 ದಿನ ಮೊದಲೇ ‘ಅವುಗಳನ್ನು ಸ್ಲೀಪ್‌ ಮೋಡ್‌ಗೆ ಹಾಕಲಾಗಿದೆ’ ಎಂದು ಶನಿವಾರ ತಡರಾತ್ರಿ ಇಸ್ರೋ ಘೋಷಣೆ ಮಾಡಿದೆ.

‘ರೋವರ್‌ ಹಾಗೂ ಲ್ಯಾಂಡರ್‌ ಅನ್ನು ಇನ್ನೆರಡು ದಿನದಲ್ಲಿ ಸ್ಲೀಪ್‌ ಮೋಡ್‌ಗೆ ಹಾಕಲಾಗುತ್ತದೆ’ ಎಂದು ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ ಶನಿವಾರ ಬೆಳಗ್ಗೆ ಹೇಳಿದ್ದರು. ಆದರೆ ‘ಶನಿವಾರ ರಾತ್ರಿಯೇ ಎರಡನ್ನೂ ನಿದ್ರಾವಸ್ಥೆಗೆ ದೂಡಲಾಗಿದೆ. ಎರಡೂ ಪೇಲೋಡ್‌ಗಳನ್ನು ಆಫ್‌ ಮಾಡಲಾಗಿದೆ. ಪೇಲೋಡ್‌ ಸೆರೆಹಿಡಿದ ದತ್ತಾಂಶಗಳನ್ನು ಲ್ಯಾಂಡರ್‌ ಮೂಲಕ ಭೂಮಿಗೆ ತರಿಸಿಕೊಳ್ಳಲಾಗಿದೆ’ ಎಂದು ಇಸ್ರೋ ಟ್ವೀಟ್‌ ಮಾಡಿದೆ.
 


ಚಂದ್ರಯಾನ-3 ಸಕ್ಸಸ್‌ಗೆ ಕಾರಣವಾದ ಮಸಾಲೆ ದೋಸೆ, ಫಿಲ್ಟರ್‌ ಕಾಫಿ!

ಭೂಮಿಯಲ್ಲಿ ಒಂದು ದಿನವೆಂದರೆ 24 ಗಂಟೆಗಳಾದರೆ, ಚಂದ್ರನಲ್ಲಿ ಒಂದು ದಿನವೆಂದರೆ ಭೂಮಿಯ 28 ದಿನಗಳಿಗೆ (655 ತಾಸಿಗೆ) ಸಮ. ಅಂದರೆ 14 ದಿನ ಬಿಸಿಲು ಮತ್ತು ಅಷ್ಟೇ ಸಮಯ ರಾತ್ರಿ ಇರುತ್ತದೆ. ಚಂದ್ರನಲ್ಲಿ ಹಗಲು ಆರಂಭವಾದ ಸಮಯವಾದ ಆ.23ರಂದು ಇಸ್ರೋ ಅದರ ಮೇಲೆ ಲ್ಯಾಂಡರ್‌ ಮತ್ತು ರೋವರ್‌ ಇಳಿಸಿತ್ತು. ಎರಡು ಉಪಕರಣಗಳು ತಮ್ಮಲ್ಲಿನ ಸೌರ ಫಲಕಗಳನ್ನು ಬಳಸಿಕೊಂಡು 14 ದಿನ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದು, ಅದರಂತೆ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಸೆ.4ಕ್ಕೆ ಚಂದ್ರನಲ್ಲಿ ಹಗಲು ಮುಗಿದು ರಾತ್ರಿ ಆಗಲಿದೆ. 

ಚಂದ್ರನಲ್ಲಿ ರಾತ್ರಿ ಉಷ್ಣಾಂಶ ಮೈನಸ್‌ 180 ಡಿ.ಸೆ.ನಿಂದ 200 ಡಿ.ಸೆ.ವರೆಗೂ ಕುಸಿಯುತ್ತದೆ. ಈ ವಾತಾವರಣದಲ್ಲಿ ಯಾವುದೇ ಉಪಕರಣ ಕಾರ್ಯನಿರ್ವಹಿಸಲು ಅಸಾಧ್ಯ. ಹೀಗಾಗಿ ಸೆ.22ರವರೆಗೆ (ಚಂದ್ರನಲ್ಲಿ ಸೂರ್ಯೋದಯ ಆಗುವ ದಿನಾಂಕ) ವಿಕ್ರಂ ಮತ್ತು ಪ್ರಜ್ಞಾನ್‌ ಅನ್ನು ‘ಸ್ಲೀಪ್‌ಮೋಡ್‌’ಗೆ ಕಳಿಸಲಾಗಿದೆ. ಆದರೆ ರಿಸೀವರ್‌ ಅನ್ನು ಆನ್‌ನಲ್ಲಿ ಇರಿಸಲಾಗಿದ್ದು, ಮತ್ತೆ ಪ್ರಜ್ಞಾನ್‌ ಹಾಗೂ ವಿಕ್ರಮ್‌ ಎಚ್ಚರವಾಗುವ ಎಲ್ಲ ಸಾಧ್ಯತೆ ಇದೆ ಹಾಗೂ ಮುಂದಿನ ಕೆಲಸಗಳನ್ನು ಮಾಡಬಲ್ಲದು. ಹೀಗಾದರೆ ಪ್ರಜ್ಞಾನ್‌ ಚಂದ್ರನ ಮೇಲಿನ ಶಾಶ್ವತ ರಾಯಭಾರಿಯಾಗಲಿದೆ’ ಎಂದಿದೆ.

ಚಂದ್ರನ ನೆಲದಲ್ಲಿ ಮತ್ತೊಮ್ಮೆ ಹಿರಿಯಣ್ಣ ವಿಕ್ರಮನ ಫೋಟೋ ತೆಗೆದು ಸಂಭ್ರಮಿಸಿದ ಪ್ರಗ್ಯಾನ್‌!

14 ದಿನ ಚಂದ್ರನ ರಾತ್ರಿ ವೇಳೆ ಎರಡೂ ಉಪಕರಣಗಳು ಭಾರೀ ಕನಿಷ್ಠ ಉಷ್ಣಾಂಶ ತಡೆದುಕೊಂಡರೆ, ಅವು ಮತ್ತೆ ಜೀವಂತವಾಗಲಿವೆ. ಜೀವಂತವಾದರೆ ಅದು ಇಸ್ರೋ ವಿಜ್ಞಾನಿಗಳ ಪಾಲಿಗೆ ಬೋನಸ್‌ ಆಗಲಿದೆ. ಇಲ್ಲದೆ ಹೋದಲ್ಲಿ ವಿಕ್ರಂ ಮತ್ತು ಲ್ಯಾಂಡರ್‌ನ ಸಂಶೋಧನೆ ಅವಧಿ ಪೂರ್ವ ನಿಗದಿತದಂತೆ 14 ದಿನಗಳಿಗೆ ಸೀಮಿತವಾಗಲಿದೆ.

Follow Us:
Download App:
  • android
  • ios