ಚಂದ್ರಯಾನ-3 ಸಕ್ಸಸ್‌ಗೆ ಕಾರಣವಾದ ಮಸಾಲೆ ದೋಸೆ, ಫಿಲ್ಟರ್ ಕಾಫಿ!
ಚಂದ್ರಯಾನ 3 ಸಕ್ಸಸ್ ದೇಶದ ಪ್ರತಿಯೊಬ್ಬರೂ ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಜಗತ್ತೇ ತಲೆದೂಗಿದೆ. ಹೀಗಿರುವಾಗ ಚಂದ್ರಯಾನ 3 ಯಶಸ್ಸಿನಲ್ಲಿ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಪ್ರಮುಖ ಪಾತ್ರ ವಹಿಸಿದೆ ಎಂದು ಇಸ್ರೋ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಚಂದ್ರಯಾನ ಮತ್ತು ಮಸಾಲೆ ದೋಸೆನಾ, ಎತ್ತಣಿದೆಂತ್ತ ಸಂಬಂಧವಯ್ಯಾ ಅನ್ಬೇಡಿ. ಇಲ್ಲಿದೆ ಹೆಚ್ಚಿನ ಮಾಹಿತಿ.
ಇಸ್ರೋದ ಚಂದ್ರಯಾನ 3, ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಿತು. ಈ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿತು. ಈ ಸಾಧನೆಯ ಹಿಂದೆ ಇಸ್ರೋದ ಅನೇಕ ವಿಜ್ಞಾನಿಗಳಿದ್ದಾರೆ. ಚಂದ್ರಯಾನ 3 ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಚಂದ್ರನ ಮೇಲೆ ಪರಿಶೋಧನೆಯಲ್ಲಿ ತೊಡಗಿರುವ ಇಸ್ರೋದ ಪ್ರಗ್ಯಾನ್ ರೋವರ್, ಇತ್ತೀಚೆಷ್ಟೇ ಶತಕ ಬಾರಿಸಿದ್ದು ಅಜೇಯವಾಗಿ ಮುನ್ನಡೆಯುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಚಂದ್ರಯಾನ ಯಶಸ್ವಿಯಾಗಿ ಚಂದ್ರನ ಮೇಲೆ ಅಧ್ಯಯನ ನಡೆಸುತ್ತಿದೆ. ಇತ್ತ ಶ್ರೀಹರಿಕೋಟಾದಿಂದ ಆದಿತ್ಯ ಎಲ್-1 ಉಡಾವಣೆಗೊಂಡಿದೆ. ಇದೀಗ ಚಂದ್ರನ ಮೇಲೆ ಕತ್ತಲ ಸಮಯ ಸಮೀಪಿಸುತ್ತಿದೆ. ಹೀಗಾಗಿ ಚಂದ್ರನ ಮೇಲೆ ಕಳೆದ 10 ದಿನಗಳಿಂದ ಸಂಚರಿಸುತ್ತಿರುವ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ಶೀಘ್ರದಲ್ಲೇ ನಿದ್ರೆಗೆ ಜಾರಲಿದೆ.
ಚಂದ್ರಯಾನ 3 ಯಶಸ್ಸಿಗೆ ಎಲ್ಲಾ ವಿಜ್ಞಾನಿಗಳ (Scientist) ಪರಿಶ್ರಮ ಕಾರಣವಾಗಿದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಯೊಬ್ಬರು ಗಮನಾರ್ಹವಾದ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಸಂಜೆ 5 ಗಂಟೆಗೆ ಸರ್ವ್ ಮಾಡುತ್ತಿದ್ದ ಸರಳ ಮಸಾಲೆ ದೋಸೆಯು (Masala dosa) ಭಾರತದ ಚಂದ್ರಯಾನ-3 ಚಂದ್ರಯಾನದ ಯಶಸ್ಸಿನಲ್ಲಿ (Success) ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ. ಚಂದ್ರಯಾನ ಮತ್ತು ಮಸಾಲೆ ದೋಸೆನಾ, ಎತ್ತಣಿದೆಂತ್ತ ಸಂಬಂಧವಯ್ಯಾ ಅನ್ಬೇಡಿ. ಇಲ್ಲಿದೆ ಹೆಚ್ಚಿನ ಮಾಹಿತಿ.
Chandrayaan-3: ಇಂಡೋ-ಪಾಕ್ ಮ್ಯಾಚ್‌ಗೂ ಮುಂಚೆ, ಚಂದ್ರನಲ್ಲಿ ಶತಕ ಬಾರಿಸಿದ ಪ್ರಗ್ಯಾನ್ ರೋವರ್!
ಸಂಜೆ 5 ಗಂಟೆಗೆ ಸರಳ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಸರ್ವ್
ಅಸಾಧ್ಯವಾದುದನ್ನು ಸಾಧಿಸುವ ಸವಾಲನ್ನು ಎದುರಿಸಿದಾಗ, ISRO ತನ್ನ ಸಮರ್ಪಿತ ಕಾರ್ಯಪಡೆಯನ್ನು ನೀಡಲು ಯಾವುದೇ ಆರ್ಥಿಕ ಪ್ರೋತ್ಸಾಹವನ್ನು ಹೊಂದಿರಲಿಲ್ಲ. ಪತ್ರಕರ್ತೆ ಬರ್ಖಾ ದತ್, ವಾಷಿಂಗ್ಟನ್ ಪೋಸ್ಟ್‌ಗೆ ನೀಡಿದ ಅಭಿಪ್ರಾಯದಲ್ಲಿ, ತಂಡವನ್ನು ಪ್ರೇರೇಪಿಸುವುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸಂಜೆ 5 ಗಂಟೆಗೆ ಸರಳ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿಯನ್ನು ಸರ್ವ್ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ.
'ಪ್ರತಿದಿನ ಸಂಜೆ 5 ಗಂಟೆಗೆ ಉಚಿತ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ನೀಡುವ ಮೂಲಕ ನಾವು ಅದನ್ನು ಭೇದಿಸಿದ್ದೇವೆ' ಎಂದು ಮಿಷನ್ ವಿಜ್ಞಾನಿ ವೆಂಕಟೇಶ್ವರ ಶರ್ಮಾ ಬಹಿರಂಗಪಡಿಸಿದ್ದಾರೆ. ಈ ಅಸಾಂಪ್ರದಾಯಿಕ ಆಹಾರವು ಪ್ರೇರಣೆ ಹೆಚ್ಚಿಸಲು ಕಾರಣವಾಯಿತು, ಪ್ರತಿಯೊಬ್ಬರೂ ಸ್ವಇಚ್ಛೆಯಿಂದ ಹೆಚ್ಚುವರಿ ಸಮಯವನ್ನು ಹೂಡಿಕೆ ಮಾಡಲು ಪ್ರೇರೇಪಿಸಿತು. ಇದ್ದಕ್ಕಿದ್ದಂತೆ, ಎಲ್ಲರೂ ಹೆಚ್ಚು ಕಾಲ ಉಳಿಯಲು ಸಂತೋಷಪಟ್ಟರು' ಎಂದು ಶರ್ಮಾ ಹೇಳುತ್ತಾರೆ.
ಚಂದ್ರನಲ್ಲಿ ಕತ್ತಲ ಸಮಯ ಹತ್ತಿರ, ನಿದ್ರೆಗೆ ಜಾರಲಿದೆ ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್!
ಎತ್ತಿನ ಗಾಡಿಯಲ್ಲಿ ಸಂವಹನ ಉಪಗ್ರಹ ಸಾಗಾಟ
ಇಸ್ರೋ ಮಾಜಿ ನಿರ್ದೇಶಕ ಸುರೇಂದ್ರ ಪಾಲ್ ಅವರು ಸಂವಹನ ಉಪಗ್ರಹವನ್ನು ಸರಳವಾದ ಎತ್ತಿನ ಗಾಡಿಯಲ್ಲಿ ಸಾಗಿಸಿದ ಸಮಯವನ್ನು ನೆನಪಿಸಿಕೊಂಡರು. ಇದು ಕೇವಲ 150 ರೂಪಾಯಿಗಳ ವೆಚ್ಚದಾಯಕ ಪ್ರಯತ್ನವಾಗಿದೆ. 'ನಾವು ಅಗತ್ಯ ವಸ್ತುಗಳಿಗೆ ಮಾತ್ರ ಖರ್ಚು ಮಾಡುತ್ತೇವೆ. ನಮ್ಮ ವಿಜ್ಞಾನಿಗಳು ಇತರ ಯಾವುದೇ ಕಂಪನಿಗಳಲ್ಲಿ ಭಾರತ ಅಥವಾ ವಿದೇಶದಲ್ಲಿರುವ ಯಾವುದೇ ವಿಜ್ಞಾನಿಗಳಿಗಿಂತ ಹೆಚ್ಚಿನ ಪ್ರಯತ್ನವನ್ನು ಮಾಡುತ್ತಾರೆ' ಎಂದು ISRO ಮಾಜಿ ಮುಖ್ಯಸ್ಥ ಮಾಧವನ್ ನಾಯರ್ ತಿಳಿಸಿದರು.