ಶಾಲೆ ಪುನಾರಂಭ ಯಾವಾಗ? ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ

* ಮಕ್ಕಳನ್ನು ಶಾಲೆಗೆ ಕಳಿಸಲು ಇನ್ನಷ್ಟುವೈಜ್ಞಾನಿಕ ಸಾಕ್ಷ್ಯ ಬೇಕು: ನೀತಿ ಆಯೋಗ

* ಶಾಲೆ ಪುನಾರಂಭ ಯಾವಾಗ? ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ

* ಶಾಲೆಗಳು ಸದ್ಯಕ್ಕೆ ತೆರೆಯೋದಿಲ್ಲ: ಕೇಂದ್ರದ ಸುಳಿವು

Centre informs on when to reopen schools amid fears over third COVID 19 wave pod

ನವದೆಹಲಿ(ಜೂ.20): ಶಾಲೆಗಳನ್ನು ಪುನಾರಂಭ ಮಾಡಬೇಕೇ ಬೇಡವೇ ಎಂಬುದು ದೇಶದ ಬಹುತೇಕ ರಾಜ್ಯಗಳಲ್ಲಿ ಚರ್ಚೆಯ ವಿಷಯವಾಗಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರವು ಸದ್ಯಕ್ಕೆ ಶಾಲೆಗಳನ್ನು ತೆರೆಯಲು ಅನುಮತಿ ನೀಡುವುದಿಲ್ಲ ಎಂಬ ಪರೋಕ್ಷ ಸುಳಿವು ನೀಡಿದೆ.

ತೆಲಂಗಾಣ ಸಂಪೂರ್ಣ ಅನ್‌ಲಾಕ್‌: ವೈದ್ಯಕೀಯ, ಆರೋಗ್ಯ ಇಲಾಖೆ ವರದಿ ಆಧರಿಸಿಯೇ ಕ್ರಮ!

‘ಬೇರೆ ಬೇರೆ ದೇಶಗಳಿಂದ ಬರುತ್ತಿರುವ ಮಾಹಿತಿಗಳನ್ನು ನೋಡಿದರೆ ಕೋವಿಡ್‌ ಸಮಯದಲ್ಲಿ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸುವ ಮುನ್ನ ಇನ್ನಷ್ಟುವೈಜ್ಞಾನಿಕ ದತ್ತಾಂಶಗಳನ್ನು ಪರಿಗಣಿಸಬೇಕು ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಸರಿಯಾದ ವಿಚಾರ ವಿಮರ್ಶೆಯ ನಂತರವೇ ಶಾಲೆಗಳನ್ನು ತೆರೆಯಲಾಗುವುದು. ಅನೇಕ ದೇಶಗಳಲ್ಲಿ ಶಾಲೆ ತೆರೆದ ನಂತರ ಕೋವಿಡ್‌ ಕೇಸುಗಳು ಹೆಚ್ಚಾದ ಕಾರಣ ಮತ್ತೆ ಶಾಲೆ ಮುಚ್ಚಲಾಗಿದೆ. ನಾವು ನಮ್ಮ ಮಕ್ಕಳು ಹಾಗೂ ಶಿಕ್ಷಕರನ್ನು ಅಪಾಯಕ್ಕೆ ತಳ್ಳಲು ಸಿದ್ಧರಿಲ್ಲ. ಕ್ರಮೇಣ ಶಾಲೆಗಳನ್ನು ತೆರೆಯಬೇಕಾಗುತ್ತದೆ ಎಂಬುದು ನಿಜ, ಆದರೆ ಈಗ ಅದಕ್ಕೆ ಸಕಾಲವಲ್ಲ’ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ.ಪೌಲ್‌ ಹೇಳಿದ್ದಾರೆ.

‘ಶಾಲೆಯಲ್ಲಿ ಮಕ್ಕಳ ಜೊತೆಗೆ ಶಿಕ್ಷಕರು, ಸಹಾಯಕರು ಹಾಗೂ ಇತರ ಸಿಬ್ಬಂದಿಯೂ ಇರುತ್ತಾರೆ. ಅಲ್ಲಿ ಸಾಮಾಜಿಕ ಅಂತರಕ್ಕೆ ಬಹಳ ಕಡಿಮೆ ಅವಕಾಶವಿರುತ್ತದೆ. ಇದನ್ನೆಲ್ಲ ಪರಿಗಣಿಸಿ, ವೈಜ್ಞಾನಿಕ ಸಾಕ್ಷ್ಯಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು ತಗಲುತ್ತದೆ ಎಂಬುದಕ್ಕೆ ಆಧಾರವಿಲ್ಲ. ಮಕ್ಕಳಿಗೆ ಕೋವಿಡ್‌ ತಗಲಿದರೂ ಲಕ್ಷಣಗಳು ಸೌಮ್ಯವಾಗಿರುತ್ತವೆ. ಆದರೆ, ಮಕ್ಕಳಿಗೆ ಹೆಚ್ಚು ಹಾನಿ ಉಂಟುಮಾಡುವ ರೀತಿಯಲ್ಲಿ ವೈರಸ್‌ ರೂಪಾಂತರ ಹೊಂದಬಹುದು. ಹೀಗಾಗಿ ಎಚ್ಚರಿಕೆಯಿಂದಿರಬೇಕು’ ಎಂದೂ ಅವರು ಹೇಳಿದ್ದಾರೆ.

ಲಾಕ್‌ಡೌನ್ ತಡೆ ನಡುವೆ ಪುಟಾಣಿಗಳ ಮನ ಗೆದ್ದ ಹಳ್ಳಿಯ ಕನ್ನಡ ಟೀಚರ್!

ಕೋವಿಡ್‌ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು ತಗಲಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ಹೇಳಿಕೆ ಮಹತ್ವ ಪಡೆದಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಕಳೆದ ವರ್ಷದ ಮಾಚ್‌ರ್‍ನಲ್ಲಿ ಮುಚ್ಚಿದ ಶಾಲೆಗಳು ಇನ್ನೂ ತೆರೆದಿಲ್ಲ. ಕೆಲ ರಾಜ್ಯಗಳಲ್ಲಿ ಮಾತ್ರ ಶಾಲೆ ಪುನಾರಂಭ ಮಾಡಿ, ನಂತರ 2ನೇ ಅಲೆ ಬಂದಾಗ ಮತ್ತೆ ಮುಚ್ಚಲಾಗಿದೆ.

Latest Videos
Follow Us:
Download App:
  • android
  • ios