* ಇಂದಿನಿಂದ ತೆಲಂಗಾಣ ಸಂಪೂರ್ಣ ಅನ್‌ಲಾಕ್‌* ಜು.1ರಿಂದ ಎಲ್ಲ ಶಾಲೆ-ಕಾಲೇಜುಗಳಲ್ಲಿ ಭೌತಿಕ ತರಗತಿ ಶುರು* ಸಂಪೂರ್ಣ ನಿರ್ಬಂಧ ತೆರವು ಮಾಡಿದ ಮೊದಲ ರಾಜ್ಯ?* ವೈದ್ಯಕೀಯ, ಆರೋಗ್ಯ ಇಲಾಖೆ ವರದಿ ಆಧರಿಸಿಯೇ ಕ್ರಮ: ಸರ್ಕಾರ

ಹೈದರಾಬಾದ್‌(ಜೂ.20): ಕೊರೋನಾ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗದಿದ್ದರೆ ಶೀಘ್ರವೇ 3ನೇ ಅಲೆಯು ಭಾರತಕ್ಕೆ ಸುನಾಮಿಯಂತೆ ಅಪ್ಪಳಿಸಲಿದೆ ಎಂಬ ಎಚ್ಚರಿಕೆಗಳ ಬೆನ್ನಲ್ಲೇ, ತೆಲಂಗಾಣವು ಭಾನುವಾರದಿ ಬೆಳಗ್ಗೆ 6ರಿಂದಲೇ ಜಾರಿಯಾಗುವಂತೆ ಸಂಪೂರ್ಣ ಅನ್‌ಲಾಕ್‌ ಘೋಷಿಸಿದೆ. ಈ ರೀತಿ ಸಂಪೂರ್ಣ ಅನ್‌ಲಾಕ್‌ ಘೋಷಿಸಿದ ದೇಶದ ಮೊದಲ ರಾಜ್ಯ ತೆಲಂಗಾಣ ಎಂದು ಹೇಳಲಾಗಿದೆ.

ಹೈದರಾಬಾದ್‌ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್‌ ಸಸ್ಪೆಂಡ್..!

ಇದರ ಜತೆಗೆ ಜು.1ರಿಂದಲೇ ರಾಜ್ಯದ ಶಾಲಾ ಕಾಲೇಜುಗಳ ಕಾರಾರ‍ಯರಂಭಕ್ಕೆ ಸೂಚಿಸಲಾಗಿದೆ. ಅಂದರೆ, ಆನ್‌ಲೈನ್‌ ಕ್ಲಾಸ್‌ಗಳಿಗೆ ತಿಲಾಂಜಲಿ ಹೇಳಿ ವಿದ್ಯಾರ್ಥಿಗಳ ಭೌತಿಕ ಹಾಜರಾತಿಗೆ ಅನುಮತಿಸಲಾಗಿದೆ. ಜೊತೆಗೆ ರಾತ್ರಿ ಕರ್ಫ್ಯೂ ಸಹ ಜಾರಿಯಲ್ಲಿರುವುದಿಲ್ಲ ಎಂದು ಸರ್ಕಾರ ಹೇಳಿದೆ.

ಕೃಷ್ಣೆಗಾಗಿ ತೆಲಂಗಾಣ ವಿರುದ್ಧ ರಾಜ್ಯ, ಮಹಾ ಜಂಟಿ ಸಮರ!

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಮತ್ತು ಪಾಸಿಟಿವಿಟಿ ದರ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ ಎಂಬ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆ ವರದಿ ನೀಡಿದೆ. ಜೊತೆಗೆ ನೆರೆಯ ರಾಜ್ಯಗಳಲ್ಲೂ ಸೋಂಕು ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ, ಲಾಕ್‌ಡೌನ್‌ನಿಂದ ಜನಸಾಮಾನ್ಯರು ಬಳಲಬಾರದು ಎಂಬ ಕಾರಣಕ್ಕೆ ಈ ಕ್ರಮ ಜರುಗಿಸಲಾಗಿದೆ. ಆದರೆ ಜನರು ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.