COVID 19 New variant: ಸೌತ್ ಆಫ್ರಿಕಾದಲ್ಲಿ ಹೊಸ ತಳಿ ಪತ್ತೆ, ರಾಜ್ಯಗಳಿಗೆ ಕೇಂದ್ರದ ಹೈ ಅಲರ್ಟ್!

  • ಕೊರೋನಾ ವೈರಸ್‌ನಿಂದ ಮುಕ್ತಿ ಸಿಗುತ್ತಿಲ್ಲ, ಮತ್ತೊಂದು ತಳಿ ಪತ್ತೆ
  • ಸೌತ್ ಆಫ್ರಿಕಾದಲ್ಲಿ ಆತಂಕಕಾರಿ ರೂಪಾಂತರಿ ತಳಿ ಪತ್ತೆ
  • ಭಾರತದಲ್ಲಿ ಕಠಿಣ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ
  • ಅತೀ ವೇಗದಲ್ಲಿ ಹರಬಡಲ್ಲ, ದೇಹದ ಪ್ರತಿರೋಧಕ ಕುಗ್ಗಿಸಬ್ಬಲ ತಳಿ
Centre alert states UT against the new variant of COVID 19 detected in South Africa ckm

ಸೌತ್ ಆಫ್ರಿಕಾ(ನ.25): ಭಾರತ ಕೊರೋನಾ ವೈರಸ್(Coronavirus) 2ನೇ ಅಲೆಯನ್ನು ನಿಯಂತ್ರಿಸಿ ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇತರ ದೇಶಗಳು ಇದೀಗ 3 ಮತ್ತು ನಾಲ್ಕನೇ ಅಲೆಯನ್ನು ಎದುರಿಸುತ್ತಿದೆ. ಬ್ರಿಟನ್ ಸೇರಿದಂತೆ ಕೆಲ ಯುರೋಪ್ ರಾಷ್ಟ್ರಗಳು ಲಾಕ್‌ಡೌನ್ ಮೊರೆ ಹೋಗಿವೆ. ಇದರ ನಡುವೆ ಮತ್ತೊಂದು ಆತಂಕಕಾರಿ ವೈರಸ್ ಸೌತ್ ಆಫ್ರಿಕಾದಲ್ಲಿ(South Africa variant) ಪತ್ತೆಯಾಗಿದೆ.  ಇದರಿಂದ ಭಾರತದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಪರಿಣಾಮ ಅಂತಾರಾಷ್ಟ್ರೀಯ ಪ್ರಯಾಣಿಕರ(international travellers) ಮೇಲೆ ನಿಗಾ ಇಡಲಾಗಿದ್ದು, ಕೋವಿಡ್ ಪರೀಕ್ಷೆ, ಸ್ಕ್ರೀನಿಂಗ್ ಸೇರಿದಂತೆ ಕಠಿಣ ನಿಯಮ ಭಾರತದಲ್ಲಿ(India) ಮತ್ತೆ ಜಾರಿಯಾಗಿದೆ. 

ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ವಿಮಾನ ನಿಲ್ದಾಣ ಸೇರಿದಂತೆ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಲು ಸೂಚಿಸಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ(Indian Government) ಸೂಚನೆ ನೀಡಿದ್ದು, ಅತೀವ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಕೋವಿಡ್ ಪರೀಕ್ಷೆ, ಸ್ಕ್ರೀನಿಂಗ್, ಕ್ವಾರಂಟೈನ್, ಐಸೋಲೇಶನ್ ಸೇರಿದಂತೆ ಕೋವಿಡ್ ಕಠಿಣ ಮಾರ್ಗಸೂಚಿ ಮತ್ತೆ ಜಾರಿಗೊಳಿಸಲು ನಿರ್ದೇಶನ ನೀಡಿದೆ.

Covid Crisis: ಜರ್ಮನಿಯಲ್ಲಿ 1 ಲಕ್ಷ ಗಡಿ ದಾಟಿದ ಕೊರೋನಾ ಸಾವಿನ ಸಂಖ್ಯೆ!

ಬೋಟ್ಸವನಾ , ಹಾಂಕ್‌ಕಾಂಗ್ ಹಾಗೂ ಸೌತ್ ಆಫ್ರಿಕಾದಲ್ಲಿ ಈ ಹೊಸ ತಳಿ ಪತ್ತೆಯಾಗಿದೆ. ಇದರ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ(Ministy of Helath) ಕಾರ್ಯದರ್ಶಿ ರಾಜೇಶ್ ಭೂಷಣ್ , ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಪತ್ರ ಬರೆದಿದ್ದಾರೆ.  ಕೋವಿಡ್ ವೈರಸ್ ಅಪಾಯದಲ್ಲಿರುವ ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸುವ ಹಾಗೂ ಭಾರತದಿಂದ ತೆರಳುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸುವುದು ಕಡ್ಡಾಯ. ಅವರ ಸಂಪರ್ಕಗಳನ್ನು ಟ್ರ್ಯಾಕ್ ಮಾಡಿ ಪರೀಕ್ಷಿಸಬೇಕು ಎಂದು ರಾಜೇಶ್ ಭೂಷಣ್ ಸೂಚಿಸಿದ್ದಾರೆ. 

ಸದ್ಯ ಪತ್ತೆಯಾಗಿರುವ ಹೊಸ ತಳಿ ಹೆಚ್ಚಿನ ರೂಪಾಂತರಿ ವೈರಸ್ ಆಗಿದೆmutations Virus). ಇದು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಎಚ್ಚರಿಕೆ ವಹಿಸದಿದ್ದರೆ, ಭಾರತ ಎದುರಿಸಿದ ಕೊರೋನಾ 2ನೇ ಅಲೆಗಿಂತ ಭೀಕರವಾಗಲಿದೆ. ಹೀಗಾಗಿ ಕೊರೋನಾ ವಿಚಾರದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ರಾಜೇಶ್ ಭೂಷಣ್ ನಿರ್ದೇಶ ನೀಡಿದ್ದಾರೆ.

Corona In Karnataka: ಒಂದೇ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೋನಾ, ಜನರಲ್ಲಿ ಮತ್ತೆ ಆತಂಕ!

ಸೌತ್ ಆಫ್ರಿಕಾದಲ್ಲಿ ಆತಂಕ:
B.1.1.529 ಹೊಸ ರೂಪಾಂತರಿ ವೈರಸ್ ಸೌತ್ ಆಫ್ರಿಕಾದಲ್ಲಿ ಪತ್ತೆಯಾಗಿದೆ. ಸದ್ಯ ಈ ವೈರಸ್ ಕೆಲವೇ ಕೆಲವರಲ್ಲಿ ಪತ್ತೆಯಾಗಿದೆ. ಆದರೆ ಇದರ ಪರಿಣಾಮ ಕುರಿತು ಇನ್ನು ಸ್ಪಷ್ಟತೆ ಸಿಕ್ಕಿಲ್ಲ. ಸದ್ಯ ಪತ್ತೆಯಾಗಿರುವ ಹೊಸ ರೂಪಾಂತರಿ ತಳಿ ದೇಹದ ಪ್ರತಿರೋಧಕ ಶಕ್ತಿಯನ್ನು ಕ್ಷಣಾರ್ಧದಲ್ಲಿ ಕುಗ್ಗಿಸುವ ಸಾಮರ್ಥ್ಯ ಹೊಂದಿದೆ. ಇಷ್ಟೇ ಅಲ್ಲ ಮಿಂಚಿನ ವೇಗದಲ್ಲಿ ಈ ವೈರಸ್ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಸೌತ್ ಆಫ್ರಿಕಾ ಸಂಶೋಧಕರು ಹೇಳಿದ್ದಾರೆ.

ಪತ್ತೆಯಾಗಿರುವ ಹೊಸ ವೈರಸ್ ಮತ್ತೊಂದು ಅಲೆ ಸೃಷ್ಟಿಬಲ್ಲ ಸಾಮರ್ಥ್ಯ ಹೊಂದಿದೆಯಾ? ಇದರ ವಿರುದ್ದ ಲಸಿಕೆ ಪರಿಣಾಮಕಾರಿಯಾಗಬಲ್ಲದೇ ಕುರಿತು ಸೌತ್ ಆಫ್ರಿಕಾ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಮತ್ತೆ ವಿಶ್ವದ ಚಿಂತೆ ಹೆಚ್ಚಿಸಿದೆ. ಕಾರಣ ಪತ್ತೆಯಾಗಿರುವ ರೂಪಾಂತರಿ ವೈರಸ್ ಮೊದಲು ಪತ್ತೆಯಾಗಿರುವ ಕೊರೋನಾ ವೈರಸ್‌ನಂತೆ ವಿಶ್ವವನ್ನೇ ಸ್ಥಗಿತಗೊಳಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜನಸಂಖ್ಯೆ ಹೆಚ್ಚಿರುವ ಸೌತ್ ಅಫ್ರಿಕಾದ ಗೌಟೆಂಗ್ ಪ್ರಾಂತ್ಯದಲ್ಲಿ ಈ ರೂಪಾಂತರಿ ವೈರಸ್ ಹರಡುತ್ತಿದೆ. ಇನ್ನು ಸೌತ್ ಆಫ್ರಿಕಾದ ಇತರ 8 ಪ್ರಾಂತ್ಯಗಳಲ್ಲಿ ಈ ವೈರಸ್ ಹರಡಿಸುವ ಸಾಧ್ಯತೆಯನ್ನು ವಿಜ್ಞಾನಿಗಳು ಹೇಳಿದ್ದಾರೆ. 

Latest Videos
Follow Us:
Download App:
  • android
  • ios