Auto Expo: 2024ರ ಅಂತ್ಯದೊಳಗೆ ಶೇ. 50ರಷ್ಟು ಅಪಘಾತ ಕಡಿಮೆ ಮಾಡುವುದು ನಮ್ಮ ಗುರಿ: ನಿತಿನ್‌ ಗಡ್ಕರಿ

2024ರ ಅಂತ್ಯದೊಳಗೆ ಅಪಘಾತಗಳ ಸಂಖ್ಯೆಗಳನ್ನು ಶೇ. 50ರಷ್ಟು ಕಡಿಮೆ ಮಾಡುವುದು ಸರ್ಕಾರದ ಗುರಿ. ಈ ಹಿನ್ನೆಲೆ ಆಟೋ ಉದ್ಯಮ ರಸ್ತೆ ಸುರಕ್ಷತೆ ಬಗ್ಗೆ ಸ್ವಯಂಪ್ರೇರಿತ ಕ್ರಮ ತೆಗೆದುಕೊಳ್ಳಬಹುದೆಂದು ನಿತಿನ್‌ ಗಡ್ಕರಿ ಹೇಳಿದರು.

central governments goal is to cut down on road accidents by 50 percent nitin gadkari ash

ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ಜನವರಿ 12 ರಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹಾಗೂ ಭಾರಿ ಕೈಗಾರಿಕೆಗಳ ಸಚಿವ  ಮಹೇಂದ್ರನಾಥ್‌ ಪಾಂಡೆ ಆಟೋ ಎಕ್ಸ್‌ಪೋ 2023 ಅನ್ನು ಅಧಿಕೃತವಾಗಿ ಉದ್ಘಾಟಿಸಿದ್ರು. ಉದ್ಘಾಟನಾ ಭಾಷಣದ ವೇಳೆ ಮಾತನಾಡಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ರಸ್ತೆ ಅಪಘಾತಗಳಿಂದ ಜನರು ಸಾಯುವ ಸಂಖ್ಯೆ ಕಡಿಮೆ ಮಾಡಲು ಸುರಕ್ಷತಾ ಕ್ರಮ ಕೈಗೊಳ್ಳಿ ಎಂದು ಆಟೋ ಉದ್ಯಮಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, 2024ರ ಅಂತ್ಯದೊಳಗೆ ಅಪಘಾತಗಳ ಸಂಖ್ಯೆಗಳನ್ನು ಶೇ. 50ರಷ್ಟು ಕಡಿಮೆ ಮಾಡುವುದು ಸರ್ಕಾರದ ಗುರಿ ಎಂದೂ ನಿತಿನ್‌ ಗಡ್ಕರಿ ಹೇಳಿದರು. ಈ ಹಿನ್ನೆಲೆ ಆಟೋ ಉದ್ಯಮ ರಸ್ತೆ ಸುರಕ್ಷತೆ ಬಗ್ಗೆ ಸ್ವಯಂಪ್ರೇರಿತ ಕ್ರಮ ತೆಗೆದುಕೊಳ್ಳಬಹುದೆಂದು ಹೇಳಿದರು. 

ನಾವು ಉತ್ಪಾದನೆಯ (Manufacturing) ವಿಷಯದಲ್ಲಿ ಭಾರತದ ಆಟೋಮೊಬೈಲ್ ಉದ್ಯಮವನ್ನು (Automobile Industry) ವಿಶ್ವ ನಾಯಕನನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ. ಆದರೆ 2024 ರ ಅಂತ್ಯದ ವೇಳೆಗೆ ರಸ್ತೆ ಅಪಘಾತಗಳನ್ನು (Road Accidents) ಶೇಕಡಾ 50ರಷ್ಟು ಕಡಿತಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ನಿತಿನ್‌ ಗಡ್ಕರಿ (Nitin Gadkari) ಹೇಳಿದರು. 18 ರಿಂದ 34 ವರ್ಷದೊಳಗಿನ ಅನೇಕ ಯುವಕರು ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದಾರೆ ಎಂದೂ ಕೇಂದ್ರ ಸಚಿವರು ಪ್ರತಿಪಾದಿಸಿದರು. ರಸ್ತೆ ಮೂಲಸೌಕರ್ಯಗಳು ಸುಧಾರಿಸಿದಂತೆ, ಕಾರುಗಳನ್ನು ಓಡಿಸುವ ವೇಗವೂ ಹೆಚ್ಚುತ್ತಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. 

ಇದನ್ನು ಓದಿ: 17 ಸಾವಿರ ಕೋಟಿ ರೂ. ಮೊತ್ತದ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ 2024ರ ವೇಳೆಗೆ ಸಿದ್ಧ: ನಿತಿನ್‌ ಗಡ್ಕರಿ

5 ವರ್ಷಗಳಲ್ಲಿ ಈ ಉದ್ಯಮವು ವಿಶ್ವದ ಪ್ರಮುಖ ಉತ್ಪಾದನಾ ಕೇಂದ್ರವಾಗಲಿದೆ ಎಂದು ತಿಳಿದಿರುವ ಮೂಲಕ ಮತ್ತೊಮ್ಮೆ ನನ್ನ ಶುಭಾಶಯಗಳನ್ನು ಕಳುಹಿಸುತ್ತಿದ್ದೇನೆ. ಈ ಗುರಿಯನ್ನು ಸಾಧಿಸಲು ನೀವೆಲ್ಲರೂ ಸಮರ್ಥರಾಗಿದ್ದೀರಿ ಎಂದೂ ನಿತಿನ್‌ ಗಡ್ಕರಿ ಹೇಳಿದರು.

ಅಲ್ಲದೆ, "ಸ್ಕ್ರ್ಯಾಪಿಂಗ್ ಪ್ರಕ್ರಿಯೆಯಲ್ಲಿ, ಆಟೋಮೋಟಿವ್ ಉದ್ಯಮಕ್ಕೆ ಕಚ್ಚಾ ವಸ್ತುಗಳ ಬೆಲೆಯು ಶೇಕಡಾ 33 ರಷ್ಟು ಕಡಿಮೆಯಾಗಿದೆ.  ಆದರೆ ಮಾರಾಟವು ಶೇಕಡಾ 10-12 ರಷ್ಟು ಹೆಚ್ಚಾಗಿದೆ. ಹೆಚ್ಚುವರಿಯಾಗಿ, ತಮ್ಮ ಕಾರನ್ನು ಸ್ಕ್ರ್ಯಾಪ್‌ ಮಾಡಲು ಹೋಗುವ ಜನರು ಹೊಸದನ್ನು ಖರೀದಿಸಲು ಹೋಗುತ್ತಾರೆ. ಇದರಿಂದಲೂ ನಿಮ್ಮ ವಹಿವಾಟು ಹೆಚ್ಚಾಗುತ್ತದೆ ಎಂದೂ ನಿತಿನ್‌ ಗಡ್ಕರಿ ಹೇಳಿದರು.

ಇದನ್ನೂ ಓದಿ: 45,000 ಕೋಟಿ ವೆಚ್ಚ​ದಲ್ಲಿ ಬೆಂಗ​ಳೂರು-ಪುಣೆ ಹೆದ್ದಾರಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಅಲ್ಲದೆ, ಹಳೆಯ ವಾಹನಗಳನ್ನು ಸ್ಕ್ರ್ಯಾಪ್‌ ಮಾಡಿ ಹೊಸ ವಾಹನ ಕೊಂಡವರಿಗೆ ನೀವು ರಿಯಾಯಿತಿಯನ್ನು ನೀಡಿದರೆ, ಅದು ನಿಮಗೆ ಅನುಕೂಲಕರವಾಗಿರುತ್ತದೆ ಏಕೆಂದರೆ ಅದು ನಿಮ್ಮ ಮಾರಾಟ ಮತ್ತು ಗಳಿಕೆಯನ್ನು ಹೆಚ್ಚಿಸುತ್ತದೆ ಎಂದೂ ನಿತಿನ್ ಗಡ್ಕರಿ ಹೇಳಿದ್ದಾರೆ. ಸ್ಕ್ರ್ಯಾಪ್ ಮಾಡಿದ ವಾಹನಗಳಿಂದ ಲೋಹಗಳು ಮತ್ತು ಅರೆವಾಹಕಗಳನ್ನು ಮರುಬಳಕೆ ಮಾಡಲು ಸಾಧ್ಯವಿದೆ, ಇದು ಸಿದ್ಧಪಡಿಸಿದ ಸರಕುಗಳ ಬೆಲೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ವಾಯು ಮಾಲಿನ್ಯ ಕಡಿಮೆ ಮಾಡಬೇಕೆಂದೂ ನಿತಿನ್ ಗಡ್ಕರಿ ಹೇಳಿದ್ದಾರೆ. 

ಕೆಲವೊಮ್ಮೆ ವಾಯು ಮಾಲಿನ್ಯದಿಂದಾಗಿ ದೆಹಲಿಗೆ ಬರಲು ಮನಸ್ಸಾಗುವುದಿಲ್ಲ ಎಂದೂ ಕೆಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹೇಂದ್ರ ನಾಥ್ ಪಾಂಡೆ, ಭಾರತವು ವಿಶ್ವದ ಆಟೋಮೊಬೈಲ್‌ಗಳಲ್ಲಿ ಶೇಕಡಾ 1 ರಷ್ಟು ಮಾತ್ರ ಹೊಂದಿದ್ದರೂ, ವಿಶ್ವಾದ್ಯಂತ ಸಂಭವಿಸುವ ಎಲ್ಲಾ ರಸ್ತೆ ಸಂಬಂಧಿ ಸಾವುಗಳಲ್ಲಿ ಇದು ಶೇಕಡಾ 11 ರಷ್ಟು ಕಾರಣವಾಗಿದೆ ಎಂದು ವಿಷಾದಿಸಿದರು.

ಇದನ್ನೂ ಓದಿ: ಬೆಂಗಳೂರು-ಮೈಸೂರು ಹೈವೇ ಫೆಬ್ರವರಿ ಅಂತ್ಯಕ್ಕೆ ಉದ್ಘಾಟನೆ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಸಾರ್ವಜನಿಕರೂ ಭೇಟಿ ನೀಡಬಹುದು
ಇನ್ನು, ಗ್ರೇಟರ್‌ ನೋಯ್ಡಾದಲ್ಲಿ ನಡೆಯುತ್ತಿರುವ ಈ ಆಟೋ ಎಕ್ಸ್‌ಪೋಗೆ, ಜನವರಿ 14 ರಿಂದ ಜನವರಿ 18 ರವರೆಗೆ ಸಾಮಾನ್ಯ ಜನತೆ ಸಹ ಭೇಟಿ ನೀಡಬಹುದಾಗಿದೆ. ಜನವರಿ 14 ಹಾಗೂ 15 ರಾತ್ರಿ 8 ಗಂಟೆಯವರೆಗೆ ತೆರದಿರಲಿದ್ದು, ಜನವರಿ 16 ರಿಂದ 17 ರವರೆಗೆ ಸಂಜೆ 7 ಗಂಟೆಯವರೆಗೆ ತೆರೆದಿರಲಿದೆ. ಅಲ್ಲದೆ, ಜನವರಿ 18 ಕ್ಕೆ ಸಂಜೆ 6 ಗಂಟೆಗೆ ಬಂದ್‌ ಆಗುತ್ತದೆ ಎಂದು ತಿಳಿದುಬಂದಿದೆ. 

Latest Videos
Follow Us:
Download App:
  • android
  • ios