Asianet Suvarna News Asianet Suvarna News

ಬೆಂಗಳೂರು-ಮೈಸೂರು ಹೈವೇ ಫೆಬ್ರವರಿ ಅಂತ್ಯಕ್ಕೆ ಉದ್ಘಾಟನೆ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಬೆಂಗ​ಳೂರು-ಮೈಸೂರು ದಶ​ಪಥ ರಾಷ್ಟ್ರೀಯ ಹೆದ್ದಾ​ರಿ​ಯನ್ನು ಫೆಬ್ರ​ವರಿ ಅಂತ್ಯ​ದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. 

Bangalore Mysore Highway to be inaugurated by end of February says Union Minister Nitin Gadkari gvd
Author
First Published Jan 6, 2023, 6:21 AM IST

ರಾಮ​ನ​ಗರ (ಜ.06): ಬೆಂಗ​ಳೂರು-ಮೈಸೂರು ದಶ​ಪಥ ರಾಷ್ಟ್ರೀಯ ಹೆದ್ದಾ​ರಿ​ಯನ್ನು ಫೆಬ್ರ​ವರಿ ಅಂತ್ಯ​ದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಹೆಲಿ​ಕಾ​ಪ್ಟರ್‌, ಬಳಿಕ ರಸ್ತೆ ಮೂಲಕ ಬೆಂಗ​ಳೂರು-ಮೈಸೂರು ಹೆದ್ದಾ​ರಿಯ ಸಮೀಕ್ಷೆ ನಡೆ​ಸಿದ ಬಳಿಕ ಸುದ್ದಿ​ಗೋ​ಷ್ಠಿ​ಯಲ್ಲಿ ಅವರು ಮಾತ​ನಾ​ಡಿದರು. ಬೆಂಗಳೂರು-ಮೈಸೂರು ಹೆದ್ದಾ​ರಿಯ ಕಾಮ​ಗಾರಿ ಫೆಬ್ರ​ವರಿ ವೇಳೆಗೆ ಪೂರ್ಣ​ಗೊ​ಳ್ಳ​ಲಿದೆ. 

ರಾಷ್ಟ್ರಪತಿ ದ್ರೌಪತಿ ಮುರ್ಮು ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ಘಾ​ಟನಾ ಕಾರ್ಯ​ಕ್ರ​ಮಕ್ಕೆ ಆಹ್ವಾ​ನಿ​ಸ​ಲಾ​ಗು​ವುದು. ದಶ​ಪಥ ಹೆದ್ದಾರಿ ಕಾಮ​ಗಾರಿ ವೇಳೆ ಮಾಜಿ ಪ್ರಧಾನಿ ದೇವೇ​ಗೌಡ ಸೇರಿ​ದಂತೆ ಈ ಭಾಗದ ಸಂಸ​ದರು ಹಾಗೂ ಶಾಸ​ಕರು ಅಂಡರ್‌ ಪಾಸ್‌ಗಳ ನಿರ್ಮಾ​ಣ​ಕ್ಕಾಗಿ ಮನವಿ ಸಲ್ಲಿ​ಸಿ​ದ್ದರು. ಅವರ ಸಲಹೆ ಮತ್ತು ಮನ​ವಿ ಪರಿ​ಗ​ಣಿ​ಸ​ಲಾ​ಗಿದೆ. ಅಲ್ಲದೆ, ಹೊಸ​ಕೋಟೆ, ದೊಡ್ಡ​ಬ​ಳ್ಳಾ​ಪುರ, ದೇವ​ನ​ಹ​ಳ್ಳಿ, ಡಾಬಸ್‌ ಪೇಟೆ ಹಾಗೂ ರಾಮ​ನ​ಗರ ಸೇರಿ​ದಂತೆ ಪ್ರಮುಖ ನಗ​ರ​ಗ​ಳನ್ನು ಬೆಸೆ​ಯಲು ವರ್ತುಲ ರಸ್ತೆಯನ್ನು ನಿರ್ಮಾಣ ಮಾಡ​ಲಾ​ಗು​ವುದು ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಮಾತ್ರ ದಲಿ​ತ​ರು ಸಿಎಂ, ಪಿಎಂ ಆಗಲು ಸಾಧ್ಯ: ಮಾಜಿ ಶಾಸಕ ಬಾ​ಲ​ಕೃಷ್ಣ

ರಾಷ್ಟ್ರೀಯ ಹೆದ್ದಾ​ರಿಗೆ ಹೆಸ​ರಿ​ಡುವ ಸಂಪ್ರ​ದಾಯ ಇಲ್ಲ: ಹೆದ್ದಾ​ರಿಗೆ ಹೆಸರಿಡುವ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಷ್ಟ್ರೀಯ ಹೆದ್ದಾ​ರಿ​ಗ​ಳಿಗೆ ಹೆಸ​ರಿ​ಡುವ ಸಂಪ್ರ​ದಾಯ ಇಲ್ಲ. ನಾವು ಹೆದ್ದಾ​ರಿ​ಗ​ಳಿಗೆ ನಂಬರ್‌ ಮಾತ್ರ ನೀಡು​ತ್ತೇವೆ ಅಷ್ಟೇ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃ​ಷ್ಣ ಅವರು ಬೆಂಗ​ಳೂರು-ಮೈಸೂರು ಹೆದ್ದಾ​ರಿಗೆ ನಾಲ್ವಡಿ ಕೃಷ್ಣ​ರಾಜ ಒಡೆ​ಯರ್‌ ಹೆಸರಿಡುವಂತೆ ಮನವಿ ಸಲ್ಲಿ​ಸಿ​ದ್ದಾರೆ. ಇನ್ನು ಕೆಲ​ವರು ಬೇರೆ ಹೆಸ​ರು​ಗ​ಳನ್ನು ಪ್ರಸ್ತಾಪ ಮಾಡು​ತ್ತಿ​ದ್ದಾರೆ. ಈ ಬಗ್ಗೆ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾ​ಯಿ ಪ್ರಸ್ತಾ​ವನೆ ಸಲ್ಲಿ​ಸಿ​ದರೆ ಪ್ರಧಾನಿಗಳೊಂದಿಗೆ ಚರ್ಚಿಸಿ ಯಾವ ಹೆಸರು ಇಡ​ಬೇ​ಕೆಂಬು​ದನ್ನು ನಿರ್ಧಾರ ಮಾಡು​ತ್ತೇವೆ ಎಂದು ಹೇಳಿ​ದರು.

ಹೆದ್ದಾರಿ ​ಯೋ​ಜನೆ ಅವೈಜ್ಞಾನಿಕ ಅಲ್ಲ: ನಾನಾ​ಗಲಿ, ಸಂಸ​ದ​ರಾ​ಗಲಿ ಅಥವಾ ಶಾಸ​ಕ​ರಾ​ಗಲಿ ಡಿಪಿ​ಆರ್‌ ಸಿದ್ಧಪಡಿ​ಸು​ವು​ದಿಲ್ಲ. ತಾಂತ್ರಿ​ಕ​ವಾಗಿ ನಿಪು​ಣ​ರಾ​ಗಿ​ರುವ ಅಧಿ​ಕಾ​ರಿ​ಗಳ ತಂಡ ಯೋಜನೆ ಸಿದ್ಧಪಡಿ​ಸು​ತ್ತದೆ. 10 ವರ್ಷದ ಬಳಿಕ, ಈ ಬಾರಿ ಅಧಿಕ ಮಳೆಯಾಗಿದ್ದು, ಇದ​ರಿಂದ ಹೆದ್ದಾ​ರಿ​ಯಲ್ಲಿ ಸಮಸ್ಯೆ ಉಂಟಾಗಿತ್ತು. ಸಮಸ್ಯೆ ಪರಿ​ಹ​ರಿ​ಸ​ಲಾ​ಗಿದೆ. ಹೆದ್ದಾ​ರಿ​ಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ. ಬೆಂ-ಮೈ ಹೆದ್ದಾರಿ ರಸ್ತೆಯ ಡಿಸೈನ್‌ ತುಂಬ ಚೆನ್ನಾಗಿದ್ದು, ಪ್ರಕೃತಿಯ ನಡುವೆ ಈ ಹೆದ್ದಾರಿ ಹಾದು ಹೋಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ: ಪ್ರದೀಪ್ ಪತ್ನಿ ದಾಖಲಿಸಿದ್ದ ಕೇಸ್‌ಗೆ ಟ್ವಿಸ್ಟ್!

ಡಬಲ್‌ ಡೆಕ್ಕರ್‌ ಬಸ್‌: ಸಾರಿಗೆ ಸೇವೆಗಳನ್ನು ಮೇಲ್ದರ್ಜೆಗೇರಿಸುವ ದೃಷ್ಟಿಯಿಂದ ವಿದೇಶಗಳಲ್ಲಿರುವಂತೆ ಬ್ಯುಸಿನೆಸ್‌ ಕ್ಲಾಸ್‌ ಒಳಗೊಂಡ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಮೈಸೂರು-ಬೆಂಗಳೂರು ಮಾರ್ಗ​ದಲ್ಲಿ ಆರಂಭಿ​ಸುವ ಕುರಿತು ಚಿಂತನೆ ನಡೆ​ಸ​ಲಾ​ಗಿದೆ. ಈ ಸಂಬಂಧ ವೋಲ್ವೋ ಸಂಸ್ಥೆಯೊಂದಿಗೆ ಮಾತುಕತೆ ನಡೆ​ದಿದೆ. ಸ್ಕೈ ವಾಕ್‌ ನಿರ್ಮಾಣದ ಬಗ್ಗೆಯೂ ಶೀಘ್ರವೇ ತೀರ್ಮಾನಿಸಲಾ​ಗು​ವುದು ಎಂದು ತಿಳಿಸಿದರು.

Follow Us:
Download App:
  • android
  • ios