ರಿಕ್ಷಾ, ಕ್ಯಾಬ್‌ ಬುಕಿಂಗ್‌ ವೇಳೆ ‘ಅಡ್ವಾನ್ಸ್‌ ಟಿಪ್ಸ್‌’ ಮೂಲಕ ಗ್ರಾಹಕರಿಂದ ಹೆಚ್ಚಿನ ಹಣ ಸಂಗ್ರಹಕ್ಕೆ ಒತ್ತಾಯಿಸುತ್ತಿದ್ದ ಉಬರ್‌ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೋಟಿಸ್‌ ನೀಡಿದೆ.

ನವದೆಹಲಿ (ಮೇ.22): ರಿಕ್ಷಾ, ಕ್ಯಾಬ್‌ ಬುಕಿಂಗ್‌ ವೇಳೆ ‘ಅಡ್ವಾನ್ಸ್‌ ಟಿಪ್ಸ್‌’ ಮೂಲಕ ಗ್ರಾಹಕರಿಂದ ಹೆಚ್ಚಿನ ಹಣ ಸಂಗ್ರಹಕ್ಕೆ ಒತ್ತಾಯಿಸುತ್ತಿದ್ದ ಉಬರ್‌ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೋಟಿಸ್‌ ನೀಡಿದೆ.

ಈ ಬಗ್ಗೆ ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಹ್ಲಾದ್‌ ಜೋಶಿ ಟ್ವೀಟ್‌ ಮಾಡಿ ‘ಅಡ್ವಾನ್ಸ್‌ ಟಿಪ್ಸ್‌ ನಿಜಕ್ಕೂ ಕಳವಳಕಾರಿಯಾಗಿದೆ. ವೇಗದ ಬುಕಿಂಗ್‌ಗೋಸ್ಕರ ಗ್ರಾಹಕರಿಂದ ಟಿಪ್ಸ್‌ ಹೆಸರಿನಲ್ಲಿ ಹೆಚ್ಚಿನ ಹಣ ಕೇಳುವುದು ಮತ್ತು ಒತ್ತಾಯಿಸುವುದು ಅನೈತಿಕವಾಗಿದ್ದು, ಇದು ಶೋಷಣೆಯಾಗಿದೆ. ಇಂತಹ ಚಟುವಟಿಕೆಗಳು ಕಾನೂನು ಬಾಹಿರ ಅಭ್ಯಾಸಗಳ ಅಡಿಯಲ್ಲಿ ಬರುತ್ತದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಜೊತೆಗೆ ‘ಟಿಪ್ಸ್‌ ಎಂಬುದು ಸೇವೆ ಬಳಿಕ ಸಂತೋಷದಿಂದ ಕೊಡುವಂತಹ ಹಣ. ಅದನ್ನು ಬಲವಂತವಾಗಿ, ಅಥವಾ ಸೇವೆಯ ಮೊದಲೇ ಪಡೆಯುವಂತಹದ್ದಲ್ಲ. ಈ ಬಗ್ಗೆ ಕ್ರಮಕ್ಕೆ ಸೂಚಿಸಲಾಗಿದೆ’ ಎಂದಿದ್ದಾರೆ. ಇದರ ಬೆನ್ನಲ್ಲೇ ಸಿಸಿಪಿಎ ಊಬರ್‌ ಕಂಪನಿಗೆ ನೋಟಿಸ್‌ ನೀಡಿದೆ. ಊಬರ್‌ ಮಾತ್ರವಲ್ಲದೇ ಇನ್ನಿತರ ಟ್ಯಾಕ್ಸಿ, ಆಟೋ ಸೇವೆ ನೀಡುವ ಆ್ಯಪ್‌ ಆಧಾರಿತ ಸಂಸ್ಥೆಗಳು ಸಹ ಅಡ್ವಾನ್ಸ್‌ ಟಿಪ್ಸ್‌ ಆಯ್ಕೆ ಬಳಸುತ್ತಿವೆ.

ರಾಯಚೂರಲ್ಲಿ ವಕ್ಫ್ ಜಾಗದ ಅನಧಿಕೃತ ಮನೆ, ಅಂಗಡಿ ತೆರವು: ಬಿಗಿ ಪೊಲೀಸ್‌ ಬಂದೋಬಸ್ತ್

ಏನಿದು ಅಡ್ವಾನ್ಸ್‌ ಟಿಪ್ಸ್‌?: ಆಟೋ ರಿಕ್ಷಾ, ಕ್ಯಾಬ್‌ ಬುಕ್ ಮಾಡುವಾಗ ವೇಗವಾಗಿ ವಾಹನ ಸಿಗಲು ಕಂಪನಿ ಅಡ್ವಾನ್ಸ್‌ ಟಿಪ್ಸ್‌ ಎಂಬ ಹೆಸರಿನಲ್ಲಿ 10, 20,30, 50 ರು.ಗಳನ್ನು ಹೆಚ್ಚುವರಿಯಾಗಿ ಕೇಳುತ್ತವೆ. ಈ ರೀತಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಂಡಾಗ ಬಿಲ್‌ ಜೊತೆ ಹೆಚ್ಚುವರಿಯಾಗಿ ಇಷ್ಟು ಮೊತ್ತವನ್ನು ಗ್ರಾಹಕ ಪಾವತಿ ಮಾಡಬೇಕಾಗುತ್ತದೆ.