Asianet Suvarna News Asianet Suvarna News

AK-203 assault rifles: ರಷ್ಯಾ ನಿರ್ಮಿತ ಎಕೆ-203 ರೈಫಲ್ ಭಾರತದಲ್ಲಿ ತಯಾರಿಸಲು ಕೇಂದ್ರದ ಒಪ್ಪಿಗೆ

  • ಭಾರತದಲ್ಲೇ ತಯಾರಾಗಲಿದೆ ರಷ್ಯಾ ನಿರ್ಮಿತ ಎಕೆ-203 
  • ಉತ್ತರ ಪ್ರದೇಶದಲ್ಲಿ ತಲೆ ಎತ್ತಲಿದೆ ರೈಫಲ್ ತಯಾರಿಕಾ ಘಟಕ
  • 6 ಲಕ್ಷಕ್ಕೂ ಹೆಚ್ಚು ಎಕೆ-203 ರೈಫಲ್‌ಗಳ ಉತ್ಪಾದನೆ, 5,000 ಕೋಟಿ ರೂ ಒಪ್ಪಂದ
     
Central approved a plan to produce over five lakh AK-203 assault rifles at Korwa in Uttar Pradesh GOW
Author
Bengaluru, First Published Dec 4, 2021, 2:43 PM IST
  • Facebook
  • Twitter
  • Whatsapp

ನವದೆಹಲಿ (ಡಿ.4): ಸೇನಾಪಡೆಗಳ ಬಲಿಷ್ಠ ಶಸ್ತ್ರಗಳಲ್ಲಿ ಒಂದಾಗಿರುವ ರಷ್ಯಾ(Russia) ನಿರ್ಮಿತ ಎಕೆ-203 ವಿಧ್ವಂಸಕ ಬಂದೂಕು(AK-203 assault rifles) ಇನ್ನು ಮುಂದೆ ಭಾರತದಲ್ಲೇ ತಯಾರಾಗಲಿದೆ. ಕೇಂದ್ರ ಸರ್ಕಾರ ಶನಿವಾರ ಸುಮಾರು 5 ಲಕ್ಷ ಎಕೆ 203 ರೈಫಲ್ ತಯಾರಿಕೆಗೆ ಅನುಮೋದನೆ ನೀಡಿದೆ. 

ಮೂಲಗಳ ಪ್ರಕಾರ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ದೊಡ್ಡ ಉತ್ತೇಜನ ನೀಡುವ ಯೋಜನೆಯಡಿಯಲ್ಲಿ ಉತ್ತರ ಪ್ರದೇಶದ (Uttar Pradesh) ಅಮೇಥಿಯ (Amethi) ಕೊರ್ವಾದಲ್ಲಿ (Korwa) ಎಕೆ 203 ಅಸಾಲ್ಟ್ ರೈಫಲ್ ತಯಾರಿಕಾ ಘಟಕ ತಲೆ ಎತ್ತಲಿದೆ. ಇಲ್ಲಿ ಶಸ್ತ್ರಗಳನ್ನು ತಯಾರಿಸಲು ಸಿದ್ಧತೆ ನಡೆಯುತ್ತಿದೆ. 6 ಲಕ್ಷಕ್ಕೂ ಹೆಚ್ಚು ಎಕೆ-203 ರೈಫಲ್‌ಗಳ ಉತ್ಪಾದನೆಯ ಒಪ್ಪಂದವು 5,000 ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ್ದಾಗಿದೆ. 

ತಾಲಿಬಾನ್ ಉಗ್ರರಿಗೆ 2,000 ಸಶಸ್ತ್ರ ವಾಹನ, 40 ಹೆಲಿಕಾಪ್ಟರ್‌ ಬಲ!

ಈ ಹಿಂದೆ ರಷ್ಯಾದೊಂದಿಗೆ ಎಕೆ 203 ರೈಫಲ್ ಖರೀದಿಗೆ ಭಾರತ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.  ಇದೀಗ ಇದೇ ರಷ್ಯಾ ಸಹಭಾಗಿತ್ವದಲ್ಲೇ ಈ ಎಕೆ 203 ರೈಫಲ್ ತಯಾರಿಕಾ ಘಟಕ ನಿರ್ಮಾಣಕ್ಕೆ ಮುಂದಾಗಿದೆ. ಆ ಮೂಲಕ ಇದು ಖರೀದಿಯಿಂದ (ಜಾಗತಿಕ) ಮೇಕ್ ಇನ್ ಇಂಡಿಯಾಕ್ಕೆ ರಕ್ಷಣಾ ಸ್ವಾಧೀನದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಮಾದರಿ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಈ ಪ್ರಯತ್ನವನ್ನು ರಷ್ಯಾದ ಸಹಭಾಗಿತ್ವದಲ್ಲಿ ಮಾಡಲಾಗುತ್ತದೆ ಮತ್ತು ರಕ್ಷಣಾ ವಲಯದಲ್ಲಿ ಉಭಯ ದೇಶಗಳ ನಡುವಿನ ಆಳವಾದ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

64th National Rifle Shooting Championship ಕ್ರೀಡಾಕೂಟಕ್ಕೆ ಮಧ್ಯಪ್ರದೇಶ ಶೂಟಿಂಗ್ ಅಕಾಡಮಿ ಆತಿಥ್ಯ

ಹೊಸ ಉದ್ಯೋಗ ಸೃಷ್ಟಿ, ಸಾವಿರಾರು ಉದ್ಯೋಗಾವಕಾಶ:
ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (IRRPL) ಎಂಬ ವಿಶೇಷ ಉದ್ದೇಶದ ಜಂಟಿ ಉದ್ಯಮದಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದ್ದು, ಇದನ್ನು ಭಾರತದ ಹಿಂದಿನ OFB [ಈಗ ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL) ಮತ್ತು ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ (MIL)] ಮತ್ತು ರೊಸೊಬೊರೊನೆಕ್ಸ್‌ಪೋರ್ಟ್ (RoE) ನೊಂದಿಗೆ ರಚಿಸಲಾಗಿದೆ. ಈ ಯೋಜನೆಯು ವಿವಿಧ ಎಂಎಸ್‌ಎಂಇಗಳು ಮತ್ತು ಇತರ ರಕ್ಷಣಾ ಉದ್ಯಮಗಳಿಗೆ ಕಚ್ಚಾ ವಸ್ತು ಮತ್ತು ಘಟಕಗಳ ಪೂರೈಕೆಗಾಗಿ ವ್ಯಾಪಾರ ಅವಕಾಶಗಳನ್ನು ಒದಗಿಸುತ್ತದೆ. ಇದು ಹೊಸ ಉದ್ಯೋಗಾವಕಾಶಗಳಿಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

India Russia Summit:ಶೃಂಗಸಭೆಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿ, ಪ್ರಧಾನಿ ಮೋದಿ ಜೊತೆ ಮಹತ್ವದ ಸಭೆ!

ಎನ್ಸಾಸ್ ಬದಲಿಗೆ ಘಾತುಕ ಹಾನಿ ಮಾಡಬಲ್ಲ 'ಎಕೆ 203':
ಪ್ರಸ್ತುತ ಭಾರತೀಯ ಸೇನೆಯ ಬತ್ತಳಕೆಯಲ್ಲಿರುವ ಮೂರು ದಶಕಗಳ ಹಿಂದೆ ಸೇರ್ಪಡೆಗೊಂಡ ಹಳೆಯ ಇನ್ಸಾಸ್ ರೈಫಲ್ ಗಳಿಗೆ ಬದಲಿಗೆ ಎಕೆ 203 ಅಸ್ಸಾಲ್ಟ್ ರೈಫಲ್ ಗಳನ್ನು ನೀಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಈ ಬಗ್ಗೆ ಕಳೆದ ಹಲವು ದಶಕಗಳಿಂದಲೂ ಸೇನಾ ವಲಯದಿಂದ ಸಾಕಷ್ಟು ಮನವಿ ಬಂದಿತ್ತು. ಇದೀಗ ಕೇಂದ್ರ ಸರ್ಕಾರ ಇನ್ಸಾಸ್ ರೈಫಲ್ ಗಳನ್ನು ಬದಲಿಸಲು ಮುಂದಾಗಿದ್ದು, ಶೀಘ್ರದಲ್ಲೇ ಯೋಧರ  ಕೈಗೆ ಘಾತುಕ ಹಾನಿ ಮಾಡಬಲ್ಲ ಎಕೆ 203 ಅಸ್ಸಾಲ್ಟ್ ರೈಫಲ್ ಗಳು ಕೈ ಸೇರಲಿವೆ. ಇದು ಭಯೋತ್ಪಾದನೆ ನಿಗ್ರಹ ಮತ್ತು ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾರತೀಯ ಸೇನೆಯ ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ.

S-400 ‘Triumf’| ಚೀನಾ, ಪಾಕ್‌ ದಾಳಿ ತಡೆಯಲು ಬಂತು ವಾಯುರಕ್ಷಣಾ ವ್ಯವಸ್ಥೆ!

ಸುಧಾರಿತ AK-203 ರೈಫಲ್‌ಗಳ ಉತ್ಪಾದನೆಯ ಪ್ರಸ್ತಾಪವನ್ನು ಮೊದಲು 2018 ರಲ್ಲಿ ಘೋಷಿಸಲಾಯಿತು. ಆದರೆ ಶಸ್ತ್ರಾಸ್ತ್ರಗಳ ಬೆಲೆ ಮತ್ತು ತಂತ್ರಜ್ಞಾನದ ವರ್ಗಾವಣೆಯ ವಿಷಯದ ಮೇಲೆ ಕೆಲ ಪರ - ವಿರೋಧ  ಚರ್ಚೆಯಾಗಿತ್ತು. ನಂತರ ರಾಯಲ್ಟಿ ಪಾವತಿಯನ್ನು ಮನ್ನಾ ಮಾಡಲು ರಷ್ಯಾ ಒಪ್ಪಿಕೊಂಡ ನಂತರ, ಯುಪಿಯ ಅಮೇಥಿ ಜಿಲ್ಲೆಯ ಕೊರ್ವಾದಲ್ಲಿನ ಕಾರ್ಖಾನೆ ಉತ್ಪಾದನೆಯನ್ನು ಪ್ರಾರಂಭಿಸಲು ಈಗ ಡೆಕ್‌ಗಳನ್ನು ತೆರವುಗೊಳಿಸಲಾಗಿದೆಯಂತೆ.

Aiyar comments:ಅಮೆರಿಕದ ಗುಲಾಮನಂತೆ ವರ್ತಿಸುತ್ತಿರೋ ಭಾರತ: ಮಣಿಶಂಕರ್ ಐಯ್ಯರ್ ಆರೋಪ

ಅತ್ಯಾಧುನಿಕ ತಂತ್ರಜ್ಞಾನದ ರೈಫಲ್: 7.62 X 39mm ಕ್ಯಾಲಿಬರ್ ಹೊಂದಿರುವ AK-203 ರೈಫಲ್‌ಗಳು 300 ಮೀಟರ್‌ಗಳ ಪರಿಣಾಮಕಾರಿ ವ್ಯಾಪ್ತಿಯೊಂದಿಗೆ, ಹಗುರವಾದ, ದೃಢವಾದ ಮತ್ತು ಸಾಬೀತಾಗಿರುವ ತಂತ್ರಜ್ಞಾನದೊಂದಿಗೆ ಬಳಸಲು ಅತ್ಯುತ್ತಮವಾಗಿದೆ. ಆಧುನಿಕ ಆಕ್ರಮಣಕಾರಿ ರೈಫಲ್‌ಗಳನ್ನು ಬಳಸಲು ಸೈನಿಕರಿಗೆ ಸುಲಭವಾಗಿದೆ. ಇದು ಪ್ರಸ್ತುತ ಮತ್ತು ಯೋಜಿತ ಕಾರ್ಯಾಚರಣೆಯ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಸೈನಿಕರ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಶತ್ರು ಪಾಳಯದವರು ಕಣ್ಣುಮಿಟುಕಿಸಿವುದರೊಳಗೆ ಹೊಡೆದುರುಳಿಸುವ ತಾಕತ್ತು ಈ ರೈಫಲ್‌ಗಿದೆ. ಒಂದು ನಿಮಿಷದಲ್ಲಿ 600 ಬುಲೆಟ್‌ಗಳನ್ನು ಫೈರ್‌ ಮಾಡಬಲ್ಲದು. ಇದಕ್ಕೆ ಹೊಂದಿಕೆಯಾಗುವ ಮ್ಯಾಗ್‌ಜಿನ್‌ನಲ್ಲಿ 30 ಬುಲೆಟ್‌ಗಳಿರುತ್ತವೆ ಎಂದು ಮೂಲಗಳು ತಿಳಿಸಿವೆ. 

Follow Us:
Download App:
  • android
  • ios