Asianet Suvarna News Asianet Suvarna News

S-400 ‘Triumf’| ಚೀನಾ, ಪಾಕ್‌ ದಾಳಿ ತಡೆಯಲು ಬಂತು ವಾಯುರಕ್ಷಣಾ ವ್ಯವಸ್ಥೆ!

* ‘ಎಸ್‌-400 ಟ್ರಯಂಫ್‌’ ಆಗಮನ ಪಾಕ್‌ ಗಡಿಯಲ್ಲಿ ನಿಯೋಜನೆ

* 400 ಕಿ.ಮೀ. ವ್ಯಾಪ್ತಿಯ ಯಾವುದೇ ಕ್ಷಿಪಣಿಯನ್ನೂ ಧ್ವಂಸ ಮಾಡುತ್ತೆ

* ಚೀನಾ, ಪಾಕ್‌ ದಾಳಿ ತಡೆಯಲು ಬಂತು ವಾಯುರಕ್ಷಣಾ ವ್ಯವಸ್ಥೆ

S 400 Triumf Air Defence System reaching India year end Russian official pod
Author
Bangalore, First Published Nov 15, 2021, 10:20 AM IST
  • Facebook
  • Twitter
  • Whatsapp

ನವದೆಹಲಿ(ನ.15): ಚೀನಾ ಮತ್ತು ಪಾಕಿಸ್ತಾನದಿಂದ (China and Pakistan)ಎದುರಾಗಬಹುದಾದ ಯಾವುದೇ ದಾಳಿಯನ್ನು ಸಮರ್ಥವಾಗಿ ತಡೆಯಬಲ್ಲ ರಷ್ಯಾ (Russia) ನಿರ್ಮಿತ ಎಸ್‌-400 ಟ್ರಯಂಫ್‌ ವಾಯು ರಕ್ಷಣಾ ವ್ಯವಸ್ಥೆ ಭಾರತಕ್ಕೆ ಬಂದಿಳಿದಿದೆ. ಇದರೊಂದಿಗೆ ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ಬಂದಂತಾಗಿದೆ.

2018ರಲ್ಲಿ ಭಾರತ ಸರ್ಕಾರ ರಷ್ಯಾದಿಂದ ಒಟ್ಟು ಐದು ಎಸ್‌-400 ಟ್ರಯಂಫ್‌ ಏರ್‌ ಡಿಫೆನ್ಸ್‌ ಸಿಸ್ಟಮ್‌ (S-400 Triumf ‘SA-21 Growler’ air defence systems ) ಖರೀದಿ ಸಂಬಂಧ 40000 ಕೋಟಿ ರು. ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಈ ಖರೀದಿ ನಡೆದರೆ ಭಾರತದ (India) ಮೇಲೆ ನಿರ್ಬಂಧ ಹೇರುವುದಾಗಿ ಅಮೆರಿಕ ಬೆದರಿಕೆ ಒಡ್ಡಿದ್ದರೂ ಜಗ್ಗದ ಭಾರತ ಒಪ್ಪಂದ ಜಾರಿಗೆ ಮುಂದಾಗಿತ್ತು. ಅದರಂತೆ ಮೊದಲ ವಾಯುರಕ್ಷಣಾ ವ್ಯವಸ್ಥೆಯ ಉಪಕರಣಗಳು ವಾಯು ಮತ್ತು ಸಮುದ್ರ ಮಾರ್ಗದ ಮೂಲಕ ಈಗಾಗಲೇ ಭಾರತವನ್ನು ಪ್ರವೇಶಿಸಿವೆ ಎಂದು ರಷ್ಯಾ ಪ್ರಕಟಿಸಿದೆ. ದುಬೈನಲ್ಲಿ (Dubai) ನಡೆಯುತ್ತಿರುವ ಏರ್‌ಶೋ ವೇಳೆ ರಷ್ಯಾ ಸರ್ಕಾರದ ಮಿಲಿಟರಿ ಉಪಕರಣ ರಫ್ತು ನಿಯಂತ್ರಣ ಸಂಸ್ಥೆಯ ನಿರ್ದೇಶಕ ಡಿಮಿಟ್ರಿ ಶುಗೇವ್‌ ಭಾನುವಾರ ಈ ಮಾಹಿತಿ ನೀಡಿದ್ದಾರೆ.

ಈ ಮೊದಲ ವಾಯುರಕ್ಷಣಾ ವ್ಯವಸ್ಥೆಯನ್ನು ಪಾಕಿಸ್ತಾನದೊಂದಿಗೆ ತಾನು ಹೊಂದಿರುವ ಪ್ರಮುಖ ಗಡಿಭಾಗದಲ್ಲಿ ಭಾರತ ನಿಯೋಜಿಸಲಿದೆ. ಈ ಸ್ಥಳದಿಂದ ಕೇವಲ ಪಾಕ್‌ ಗಡಿಯಷ್ಟೇ (Pakistan Border) ಅಲ್ಲ, ಉತ್ತರ ಗಡಿಗೆ ಹೊಂದಿಕೊಂಡಿರುವ ಚೀನಾದ ಬೆದರಿಕೆಯನ್ನೂ ನಿಭಾಯಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಎಸ್‌-400 ವ್ಯವಸ್ಥೆ:

ಎಸ್‌-400 ಟ್ರಯಂಫ್‌ ವಾಯು ರಕ್ಷಣಾ ವ್ಯವಸ್ಥೆಯು (S-400 Triumf ‘SA-21 Growler’ air defence systems)  ಸದ್ಯ ವಿಶ್ವದಲ್ಲಿ ಲಭ್ಯವಿರುವ ಅತ್ಯಾಧುನಿಕ ಮತ್ತು ಅತ್ಯುತ್ತಮ ರಕ್ಷಣಾ ವ್ಯವಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ಈ ವ್ಯವಸ್ಥೆಯು ರಾಡಾರ್‌, ಕಂಟ್ರೋಲ್‌ ಸಿಸ್ಟಮ್‌, ವಿವಿಧ ಮಾದರಿಯ ಕ್ಷಿಪಣಿ, ಲಾಂಚರ್‌, ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸಿಸ್ಟಮ್‌ ಒಳಗೊಂಡಿರುತ್ತದೆ.

ಏನು ಮಾಡುತ್ತೆ?:

ಭಾರತದ ಕಡೆಗೆ ಹಾರಿಬರುವ ಯಾವುದೇ ಡ್ರೋನ್‌ (Drone), ಯುದ್ಧ ವಿಮಾನಗಳು )0Fighter Jets), ಬ್ಯಾಲಿಸ್ಟಿಕ್‌, ಕ್ರೂಸ್‌ ಕ್ಷಿಪಣಿಗಳನ್ನು ಸ್ವಯಂ ಗುರುತಿಸಿ ಅವುಗಳನ್ನು ತಡೆಯುವ ರಕ್ಷಣಾ ವ್ಯವಸ್ಥೆ ರೂಪಿಸಿ ಅವು ದೇಶದ ವಾಯು ಗಡಿಯೊಳಗೆ ಪ್ರವೇಶ ಮಾಡದಂತೆ ತಡೆಯುತ್ತದೆ. ಜೊತೆಗೆ ಅವುಗಳ ಮೇಲೆ ದಾಳಿ ಮಾಡಿ ಅವುಗಳನ್ನು ಧ್ವಂಸಗೊಳಿಸುತ್ತದೆ. ಅಗತ್ಯಬಿದ್ದರೆ ಶತ್ರು ದೇಶಗಳ ಮೇಲೆ ದಾಳಿಯನ್ನೂ ನಡೆಸುತ್ತದೆ.

ಎಷ್ಟುಸಾಮರ್ಥ್ಯ?:

ಭಾರತದ ವಾಯುಗಡಿಯಿಂದ 400 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕ್ಷಿಪಣಿ, ಡ್ರೋನ್‌ ದಾಳಿ ಉದ್ದೇಶದಿಂದ ಬರುತ್ತಿದ್ದರೆ ಅದನ್ನು ಧ್ವಂಸಗೊಳಿಸುವ ಶಕ್ತಿ ಇದಕ್ಕಿದೆ. ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಿಬರುವ ಕ್ಷಿಪಣಿ, ಡ್ರೋನ್‌ಗಳ ಜೊತೆಗೆ 30 ಕಿ.ಮೀ. ಎತ್ತರದಲ್ಲಿ ಬರುವ ಕ್ಷಿಪಣಿ, ಡ್ರೋನ್‌ಗಳ ಮೇಲೆ ದಾಳಿಯ ಸಾಮರ್ಥ್ಯ ಇದಕ್ಕಿದೆ. ಒಂದೇ ಬಾರಿಗೆ ತನ್ನತ್ತ ತೂರಿಬರುತ್ತಿರುವ 36 ಗುರಿಗಳನ್ನು ನಿರ್ವಹಿಸುವ ಮತ್ತು ಅದೇ ಸಮಯದಲ್ಲಿ 72 ಕ್ಷಿಪಣಿಗಳ ಮೂಲಕ ದಾಳಿ ನಡೆಸುವ ಸಾಮರ್ಥ್ಯ ಇದಕ್ಕಿದೆ.

ಅಮೆರಿಕ ವಿರೋಧಿಸಿತ್ತು:

ಅಮೆರಿಕದ ಅತ್ಯಾಧುನಿಕ ಎಫ್‌-16, ಎಫ್‌-22 ಕ್ಷಿಪಣಿಗಳನ್ನು ಕೂಡ ಪತ್ತೆ ಮಾಡಿ ಅವುಗಳನ್ನು ತಡೆಯುವ ಶಕ್ತಿ ಈ ವ್ಯವಸ್ಥೆಗಿದೆ. ಹೀಗಾಗಿಯೇ ರಷ್ಯಾದಿಂದ ಈ ಏರ್‌ ಡಿಫೆನ್ಸ್‌ ಖರೀದಿಗೆ ಭಾರತ ಮುಂದಾದಾಗ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

Follow Us:
Download App:
  • android
  • ios