India Russia Summit:ಶೃಂಗಸಭೆಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿ, ಪ್ರಧಾನಿ ಮೋದಿ ಜೊತೆ ಮಹತ್ವದ ಸಭೆ!
- ಡಿಸೆಂಬರ್ 6 ರಂದು ಭಾರತ ಹಾಗೂ ರಷ್ಯಾ ವಾರ್ಷಿಕ ಶೃಂಗಸಭೆ
- 21ನೇ ಶೃಂಗಸಭೆಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ
- ದ್ವಿಪಕ್ಷೀಯ ಮಾತುಕತೆ, ಒಪ್ಪಂದಕ್ಕೆ ಸಾಕ್ಷಿಯಾಗಲಿದೆ ಮೋದಿ ಜೊತೆಗಿನ ಸಭೆ
ನವದೆಹಲಿ(ನ.26): ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್(Vladimir Putin) ಇದೇ ಡಿಸೆಂಬರ್ 6 ರಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಭಾರತ ಹಾಗೂ ರಷ್ಯಾ 21ನೇ ಶೃಂಗಸಭೆಯಲ್ಲಿ(India Russia annual summit) ಪಾಲ್ಗೊಳ್ಳಲು ಪುಟಿನ್ ಭಾರತಕ್ಕೆ ಆಗಮಿಸುತ್ತಿರುವುದಾಗಿ ಭಾರತ ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ. ಪುಟಿನ್ ಸ್ವಾಗತಕ್ಕೆ ಇದೀಗ ಭಾರತದಲ್ಲಿ ತಯಾರಿ ಆರಂಭಗೊಂಡಿದೆ. ಈ ಭೇಟಿಯಲ್ಲಿ ಪುಟಿನ್ ಜೊತೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಮಹತ್ವ ಸಭೆ ನಡೆಸಲಿದ್ದಾರೆ.
ವ್ಲಾಡಿಮಿರ್ ಪುಟಿನ್ ಡಿಸೆಂಬರ್ 6 ರಂದು ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂದು ವಿದೇಶಾಂಗ ಇಲಾಖೆ(Ministry of External Affairs) ವಕ್ತಾರ ಅರಿಂದಮ್ ಬಗ್ಚಿ ಖಚಿತಪಡಿಸಿದ್ದಾರೆ. ಶೃಂಗಸಭೆಯಲ್ಲಿ ಭಾರತ ಹಾಗೂ ರಷ್ಯಾದ ರಕ್ಷಣಾ ಕ್ಷೇತ್ರದ ಪಾಲುದಾರಿಗೆ, ವ್ಯಾಪಾರ ವಹಿವಾಟು ವಿಸ್ತರಣೆ ಹಾಗೂ ಇಂಧನ ಕ್ಷೇತ್ರಗಳಲ್ಲಿ ಹೆಚ್ಚಿನ ಪಾಲುದಾರಿಗೆ ಹಾಗೂ ಸಗಭಾಗಿತ್ವಕ್ಕೆ ಒತ್ತು ನೀಡುವ ನಿರೀಕ್ಷೆ ಇದೆ. ಇದೇ ವೇಳೆ ರಕ್ಷಣಾ ಕ್ಷೇತ್ರ, ವ್ಯಾಪಾರ, ಹೂಡಿಕೆ, ವಿಜ್ಞಾನ ತಂತ್ರಜ್ಞಾನ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.
ಪುಟಿನ್ ಜೊತೆ ರಷ್ಯಾ ರಕ್ಷಣಾ ಸಚಿವ ಸರ್ಗೆಯೆ ಲಾವ್ರೋವ್(Sergey Lavrov) ಕೂಡ ಭಾರತಕ್ಕೆ ಆಗಮಿಸುತ್ತಿದ್ದಾರೆ. ಭಾರತ ಹಾಗೂ ರಷ್ಯಾ ನಡುವಿನ ಮೊದಲ 2+2 ಮಾತುಕತೆ ಡಿಸೆಂಬರ್ 6 ರಂದು ನಡೆಯಲಿದೆ. ಮೊದಲ 2+2 ಸಭೆಯಲ್ಲಿ ಸರ್ಗೆಯೆ , ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh), ಭಾರತದ ವಿದೇಶಾಂಗ ಸಚಿವ ಜೈಶಂಕರ್(Dr S Jaishankar) ಜೊತೆ ಮಾತುಕತೆ ನಡೆಸಲಿದ್ದಾರೆ.
Constitution Day: ಸಂವಿಧಾನ ಆಶಯದಂತೆ ಆಡಳಿತ ಹಾಗೂ ಅಭಿವೃದ್ಧಿ, ಪ್ರಧಾನಿ ನರೇಂದ್ರ ಮೋದಿ
ಶೃಂಗಸಭೆಯ ಮೊದಲ 2+2 ಸಭೆಯಲ್ಲಿ ರಷ್ಯಾದ ರಕ್ಷಣಾ ಸಚಿವ ಸರ್ಗೆಯೆ ಲಾವ್ರೋವ್ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂದು ರಷ್ಯಾ ವಿದೇಶಾಂಕ ಇಲಾಖೆ ಸ್ಪಷ್ಟಪಡಿಸಿದೆ. ಭಾರತ ಹಾಗೂ ರಷ್ಯಾ ಜೊತೆಗಿನ ರಕ್ಷಣಾ ಕ್ಷೇತ್ರದ ಪಾಲುದಾರಿಕೆ ಹಾಗೂ ಒಪ್ಪಂದ ಜೊತೆಗೆ ಏಷ್ಯಾ ಫೆಸಿಪಿಕ್ ವಲಯದಲ್ಲಿನ ಪರಿಸ್ಥಿತಿ ಕೂಡ ಪ್ರಮುಖವಾಗಿ ಚರ್ಚೆಯಾಗಲಿದೆ. ಆಫ್ಘಾನಿಸ್ತಾನದಲ್ಲಿನ ಬೆಳವಣಿಗೆ, ಸಿರಿಯಾ ಆತಂಕ ಸೇರಿದಂತೆ ಹಲವು ರಕ್ಷಣೆ ಹಾಗೂ ಭದ್ರತೆ ವಿಚಾಗಳು ಚರ್ಚೆಯಾಗಲಿದೆ. ಈ ಕುರಿತು ರಷ್ಯಾ ರಾಯಭಾರ ಕಚೇರಿ ಸೂಚನೆ ನೀಡಿದೆ.
2020ರ ಡಿಸೆಂಬರ್ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮಿಸಬೇಕಿತ್ತು. 2020ರಲ್ಲಿ ಭಾರತ ಹಾಗೂ ರಷ್ಯಾ ಶೃಂಗಸಭೆಯ ಆಯೋಜನೆಗೊಳ್ಳಬೇಕಿತ್ತು. ಆದರೆ ಕೊರೋನಾ ಕಾರಣ ಎಲ್ಲಾ ಸಭೆ ರದ್ದುಕೊಂಡಿತು. ಹೀಗಾಗಿ 21ನೇ ಭಾರತ ಹಾಗೂ ರಷ್ಯಾ ಶೃಂಗಸಭೆಯನ್ನು ಮುಂದೂಡಲಾಗಿತ್ತು. ಇದೀಗ ಆ ಸಭೆ ಆಯೋಜನೆಗೊಂಡಿದೆ.
ಪುಟಿನ್ ಟಿವಿ ಸಂವಾದದ ಮೇಲೆ ‘ಸೈಬರ್ ದಾಳಿ’: ರಷ್ಯಾ ಅಧ್ಯಕ್ಷರಿಗೆ ಆಘಾತ!
ಈ ಹಿಂದಿನ 20 ಭಾರತ ಹಾಗೂ ರಷ್ಯಾ ನಡುವಿನ ದ್ವಪಕ್ಷೀಯ ಸಭೆಗಳು ಯಶಸ್ವಿಯಾಗಿದೆ. ಆದರೆ ಕಳೆದ ಕೆಲ ವರ್ಷಗಳಿಂದ ಭಾರತ ಹಾಗೂ ರಷ್ಯಾ ನಡುವಿನ ಪಾಲುದಾರಿಕೆ ಹಾಗೂ ಒಪ್ಪಂದ ಹೆಚ್ಚಾಗಿದೆ. ಅದರಲ್ಲೂ ರಕ್ಷಣಾ ಕ್ಷೇತ್ರ, ವ್ಯಾಪಾರ ವಹಿವಾಟು ಸೇರಿದಂತೆ ಹಲವು ಪಾಲುದಾರಿಕೆ ಗಟ್ಟಿಯಾಗಿದೆ. ಇದರಿಂದ ಈ ಬಾರಿಯ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ. ಕೊರೋನಾ ಸಂದರ್ಭದಲ್ಲಿ ಭಾರತ ಹಾಗೂ ರಷ್ಯಾ ಪರಸ್ಪರ ಸ್ಪಂದಿಸಿದೆ. ಭಾರತದ ಸಂಕಷ್ಟದಲ್ಲಿ ರಷ್ಯಾ ಸ್ಫುಟ್ನಿಕ್ ಲಸಿಕೆ ನೀಡುವ ಮೂಲಕ ಭಾರತಕ್ಕೆ ನೆರವಾಗಿದೆ.
ಕೊರೋನಾ ವಕ್ಕರಿಸಿದ ಬಳಿಕ ವಿದೇಶ ಪ್ರವಾಸಗಳು ರದ್ದುಗೊಂಡಿತ್ತು. ಬಹುತೇಕ ಸಭೆ ಸಮಾರಂಭಗಳು ವರ್ಚುವಲ್ ಆಗಿತ್ತು. ಇದೀಗ ಮತ್ತೆ ಮಹತ್ವದ ಸಭೆಗಳು ಆರಂಭಗೊಂಡಿದೆ. ಕೊರೋನಾ ಬಳಿಕ ಪುಟಿನ್ ಭೇಟಿ ನೀಡುತ್ತಿರುವ 2ನೇ ರಾಷ್ಟ್ರ ಭಾರತ. ಇದಕ್ಕೂ ಮೊದಲು ಜಿನೆವಾದಲ್ಲಿ ನಡೆದ ಶೃಂಗಸಭೆಯಲ್ಲಿ ಪುಟಿನ್ ಪಾಲ್ಗೊಂಡಿದ್ದರು.