ಪ್ರತಿ 10 ವರ್ಷಕ್ಕೊಮ್ಮೆ ನಡೆಸಲಾಗುವ ಜನಗಣತಿಯನ್ನು ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ 2020 ರಲ್ಲಿ ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಯಿತು. ಆದರೆ ಇಲ್ಲಿಯವರೆಗೂ ಜನಗಣತಿಯ ಕುರಿತಾಗಿ ಸರ್ಕಾರ ಯಾವುದೇ ಘೋಷಣೆಯನ್ನು ಮಾಡಿಲ್ಲ.
ನವದೆಹಲಿ (ಮೇ 29, 2023): ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಮುಂದೂಡಲ್ಪಟ್ಟಿರುವ ಜನಗಣತಿಯನ್ನು 2024ರ ಲೋಕಸಭೆ ಚುನಾವಣೆಗೂ ಮೊದಲು ನಡೆಸುವ ಸಾಧ್ಯತೆ ಇಲ್ಲ. ಮುಂದಿನ ವರ್ಷ ಏಪ್ರಿಲ್ ಅಥವಾ ಮೇನಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಇದಾದ ಬಳಿಕ ಜನಗಣತಿಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಪ್ರತಿ 10 ವರ್ಷಕ್ಕೊಮ್ಮೆ ನಡೆಸಲಾಗುವ ಜನಗಣತಿಯನ್ನು ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ 2020 ರಲ್ಲಿ ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಯಿತು. ಆದರೆ ಇಲ್ಲಿಯವರೆಗೂ ಜನಗಣತಿಯ ಕುರಿತಾಗಿ ಸರ್ಕಾರ ಯಾವುದೇ ಘೋಷಣೆಯನ್ನು ಮಾಡಿಲ್ಲ.
ಇದನ್ನು ಓದಿ: ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ: ಕಳೆದ 50 ವರ್ಷದಲ್ಲಿ ಶೇ. 75 ರಷ್ಟು ಹೆಚ್ಚಳ
ಜನಗಣತಿಯನ್ನು ತಡೆಹಿಡಿದಿರುವುದರ ಜೊತೆಗೆ ಹೊಸ ಜಿಲ್ಲೆ, ಉಪ ಜಿಲ್ಲೆಗಳ ಸೃಷ್ಟಿಕಾರ್ಯವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಜನವರಿಯಲ್ಲಿ ಜನಗಣತಿ ಆಯೋಗ ಹೇಳಿತ್ತು. ಹಾಗಾಗಿ ಜುಲೈನಿಂದ ಜನಗಣತಿ ಕಾರ್ಯವನ್ನು ಆರಂಭಿಸುವುದು ಕಷ್ಟವಾಗವಾಗಲಿದೆ. ಜನಗಣತಿ ನಡೆಸುವ ಸುಮಾರು 30 ಲಕ್ಷ ಸರ್ಕಾರಿ ನೌಕರರಿಗೆ ತರಬೇತಿ ನೀಡುವುದಕ್ಕಾಗಿಯೇ 3 ತಿಂಗಳ ಸಮಯ ಹಿಡಿಯುತ್ತದೆ. ಅಲ್ಲದೇ ಮುಂದಿನ ಚುನಾವಣೆಗಾಗಿ ಚುನಾವಣಾ ಆಯೋಗ ಭರದ ಸಿದ್ದತೆ ಆರಂಭಿಸಿರುವುದರಿಂದ ಚುನಾವಣೆಗೂ ಮೊದಲು ಜನಗಣತಿ ನಡೆಯುವ ಸಾಧ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
6 ಧರ್ಮಗಳನ್ನಾಧರಿಸಿ ಜನಗಣತಿ:
ದೇಶಾದ್ಯಂತ ಪ್ರತ್ಯೇಕ ಧರ್ಮಗಳ ಕುರಿತಾಗಿ ಆಗ್ರಹಗಳು ಕೇಳಿಬಂದಿದ್ದರೂ ಸಹ ಈ ಬಾರಿಯೂ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಸಿಖ್, ಜೈನ ಧರ್ಮಗಳನ್ನು ಮಾತ್ರ ಆಧಾರವಾಗಿಟ್ಟುಕೊಂಡು ಜಣಗಣತಿ ನಡೆಸಲಾಗುವುದು ಎಂದು ಸರ್ಕಾರ ಬಿಡುಗಡೆ ಮಾಡಿರುವ ಜನಗಣತಿ ಕೈಪಿಡಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಹುಲಿ ಗಣತಿ: ಈ ಬಾರಿ ಕರ್ನಾಟಕಕ್ಕೆ ಮತ್ತೆ ನಂ. 1 ಸ್ಥಾನ..?
