ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ, ಈ ಸಂಬಂಧ ಕೇರಳದ ಕಾಂಗ್ರೆಸ್‌ ಮಾಲೀಕತ್ವದ ‘ಜೈ ಹಿಂದ್‌ ಟೀವಿ’ ಚಾನೆಲ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್‌.ಶಿಜು ಅವರನ್ನು ವಿಚಾರಣೆಗೆ ಒಳಪಡಿಸಿದೆ.

ಪಿಟಿಐ ತಿರುವನಂತಪುರ (ಆ.1): ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ, ಈ ಸಂಬಂಧ ಕೇರಳದ ಕಾಂಗ್ರೆಸ್‌ ಮಾಲೀಕತ್ವದ ‘ಜೈ ಹಿಂದ್‌ ಟೀವಿ’ ಚಾನೆಲ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್‌.ಶಿಜು ಅವರನ್ನು ವಿಚಾರಣೆಗೆ ಒಳಪಡಿಸಿದೆ.

ವಿಚಾರಣೆ ಬಳಿಕ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಶಿಜು, ‘ಬೆಂಗಳೂರಿನ ಕಚೇರಿಗೆ ವಿಚಾರಣೆಗೆ ಬರುವಂತೆ ಸಿಬಿಐ(CBI) ಸೂಚಿಸಿತ್ತು. ಅದರಂತೆ ವಿಚಾರಣೆಗೆ ಹಾಜರಾಗಿ ಅವರು ಕೇಳಿದ ದಾಖಲೆ ಒದಗಿಸಿದ್ದೇನೆ. ಅವರ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ.ಕಿದೇ ವೇಳೆ ಚಾನೆಲ್‌ನಲ್ಲಿ ಡಿ.ಕೆ.ಶಿವಕುಮಾರ್‌ ಹೂಡಿಕೆ ಮಾಡಿರುವುದು ನಿಜ. ಅದರಲ್ಲಿ ಯಾವುದೇ ಅಕ್ರಮವೂ ನಡೆದಿಲ್ಲ. ಎಲ್ಲವೂ ಕಾನೂನು ಬದ್ಧವಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐಗೆ ನೀಡಿದ್ದೇನೆ’ ಎಂದರು.

ದೆಹಲಿಯಲ್ಲಿಂದು ಮೋದಿ, ಡಿ.ಕೆ. ಶಿವಕುಮಾರ್‌ ಭೇಟಿ?

ಆದರೆ ಇದೇ ವೇಳೆ, ‘ಟೀವಿ ಚಾನೆಲ್‌ನಲ್ಲಿ ಶಿವಕುಮಾರ್‌ ಅವರ ಪತ್ನಿಯಾಗಲೀ, ಮಕ್ಕಳಾಗಲೀ ಯಾವುದೇ ಹೂಡಿಕೆ ಮಾಡಿಲ್ಲ. ಈ ಕುರಿತ ಸಿಬಿಐ ಪ್ರಶ್ನೆಗೂ ಉತ್ತರ ನೀಡಿದ್ದೇನೆ’ ಎಂದು ತಿಳಿಸಿದರು.

2013-2018ರ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ 74 ಕೋಟಿ ರು. ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ 2029ರಲ್ಲಿ ಸಿಬಿಐ ಕೇಸು ದಾಖಲಿಸಿತ್ತು.