ತಮಿಳುನಾಡಿನ ಹಲವೆಡೆ ಭಾರಿ ಮಳೆಗೆ ಶಾಲೆಗೆ ರಜೆ, ಆದರೂ ಕಾವೇರಿ ನದಿ ನೀರಿಗೆ ಪಟ್ಟು!
ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅಗಿರುವ ಅನ್ಯಾಯದ ವಿರುದ್ಧ ಇಂದು ಬೆಂಗಳೂರು ಬಂದ್ ಪ್ರತಿಭಟನೆ ನಡೆದಿತ್ತು. ಆದರೂ ಆಕ್ರೋಶ ತಣ್ಣಗಾಗಿಲ್ಲ. ಜಲಾಶಯ ಬರಿದಾಗುತ್ತಿದೆ. ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಆದರೆ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೂ ತಮಿಳುನಾಡು ಕಾವೇರಿ ನೀರಿಗೆ ಪಟ್ಟು ಹಿಡಿದಿದೆ.
ಚೆನ್ನೈ(ಸೆ.26) ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆಯಿಂದ ಹಲವು ಜಿಲ್ಲೆಗಳಲ್ಲಿ ಬರಪರಿಸ್ಥಿತಿ ಎದುರಾಗಿದೆ. ಈಗಲೇ ಕುಡಿಯ ನೀರಿನ ಅಭಾವ ಎದುರಾಗಿದೆ. ತಮಿಳುನಾಡು ಖ್ಯಾತೆಯಿಂದ ಕರ್ನಾಟಕ ನೀರು ಹರಿಸುತ್ತಲೇ ಇದೆ. ಇದರಿಂದ ಅಕ್ಟೋಬರ್ ಮೊದಲ ವಾರದಲ್ಲೇ ಕೆಆರ್‌ಎಸ್ ಜಲಾಶಯ ಖಾಲಿಯಾಗಲಿದೆ. ತಮಿಳುನಾಡಿನ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಇಂದು ಕೂಡ ವೆಲ್ಲೂರು ಸೇರಿದಂತೆ ಹಲೆವೆಡೆ ಭಾರಿ ಮಳೆಯಾಗಿರುವುದರಿಂದ 1 ರಿಂದ 5ನೇ ತರಗತಿ ವರೆಗೆ ರಜೆ ಘೋಷಿಸಲಾಗಿದೆ. ಮುಂದಿನ 7 ದಿನ ತಮಿಳುನಾಡಿನಾದ್ಯಂತ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ಕಾವೇರಿ ನದಿ ನೀರಿಗೆ ಪಟ್ಟು ಹಿಡಿದಿದೆ. ಇದರಿಂದ ಕರ್ನಾಟಕದಲ್ಲಿ ಕುಡಿಯು ನೀರಿಗೆ ಕಂಟಕ ಎದುರಾಗಿದೆ.
ತಮಿಳುನಾಡಿನ ಕಾವೇರಿ ಕೊಳ್ಳ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿಲ್ಲ ನಿಜ. ಆದರೆ ಒಟ್ಟಾರೆ ತಮಿಳುನಾಡಿನಲ್ಲಿ ನೀರಿನ ಕೊರತೆ ಇಲ್ಲ. ಆದರೆ ಕರ್ನಾಟಕದ ಪರಿಸ್ಥಿತಿ ಹಾಗಿಲ್ಲ. ಬಹುತೇಕ ಭಾಗದಲ್ಲಿ ಮಳೆ ಕೊರತೆ ಇದೆ. ಇದರಿಂದ ಕೆಲವೇ ಕೆಲವು ಜಲಾಶಯ ಹೊರತುಪಡಿಸಿದರೆ ಇನ್ನುಳಿದ ಯಾವುದೇ ಜಲಾಶಯ ಭರ್ತಿಯಾಗಿಲ್ಲ.
ತಮಿಳುನಾಡು ಸಿಎಂ ಸ್ನೇಹ, ಪ್ರೀತಿಗಾಗಿ ಕರ್ನಾಟಕ ಜನರನ್ನು ಬಲಿಕೊಡಬೇಡಿ: ಕುರುಬೂರು ಶಾಂತಕುಮಾರ್
ತಮಿಳುನಾಡಿನ ವೆಲ್ಲೂರು, ರಾಣಿಪೇಟೆ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹೀಗಾಗಿ 1 ರಿಂದ 5ನೇ ತರಗತಿಗೆ ರಜೆ ಘೋಷಿಸಲಾಗಿದೆ. ಸೆಪ್ಟೆಂಬರ್ 26 ರಂದ ಅಕ್ಟೋಬರ್ 1ರ ವರೆಗೆ ತಮಿಳುನಾಡು, ಪುದುಚೇರಿ, ಕಾರಕೈಲ್ ವಲಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ವರ್ಷದಲ್ಲಿ ತಮಿಳುನಾಡಿನಲ್ಲಿ ಉತ್ತಮ ಮಳೆಯಾಗಿದೆ. ಹಲವು ಭಾಗದಲ್ಲಿ ಭಾರಿ ಮಳೆಯಿಂದ ಜಲಾವೃತಗೊಂಡ ಘಟನೆಗಳು ನಡೆದಿದೆ. ಆದರೆ ಕರ್ನಾಟಕ ಪರಿಸ್ಥಿತಿ ವಿರುದ್ಧಾಗಿದೆ. ಉತ್ತಮವಾಗಿ ಮಳೆಯಾಗುತ್ತಿದ್ದ ಹಲವು ಜಿಲ್ಲೆಗಳಲ್ಲೇ ಮಳೆ ಕೊರತೆ ಕಾಡುತ್ತಿದೆ. ಪ್ರಮುಖವಾಗಿ ಕೊಡುಗು ಜಿಲ್ಲೆಯಲ್ಲಿನ ಮಳೆ ಕೊರತೆಯಿಂದ ಕಾವೇರಿ ಬರಿದಾಗಿದೆ.
ಮಂಡ್ಯ, ರಾಮನಗರ, ಚಾಮರಾಜನಗರ ಸೇರಿದಂತೆ ಬಹುತೇಕ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ವಿರೋಧಿಸಿ ಇಂದು ಬೆಂಗಳೂರು ಬಂದ್ ನಡೆಸಲಾಗಿದೆ. ಬೆಂಗಳೂರು ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಈ ಪ್ರತಿಭಟನೆ ಮೂಲಕ ಕನ್ನಡಿಗರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಬೊಗಳೆ ಬಿಟ್ಟುಕೊಂಡು ಕಾವೇರಿ ನೀರು ಕೈಬಿಟ್ಟ ಸಿಎಂ ಸಿದ್ದರಾಮಯ್ಯ: ಶಾಸಕ ಅಶ್ವತ್ಥನಾರಾಯಣ ಆರೋಪ