ಬಾಯಲ್ಲಿ ಸತ್ತ ಇಲಿ ಹಿಡಿದು ತಮಿಳನಾಡು ರೈತರ ಪ್ರತಿಭಟನೆ: ಕರ್ನಾಟಕ ಕಾವೇರಿ ನೀರು ಹೆಚ್ಚು ಬಿಡುವಂತೆ ಆಗ್ರಹ!
ರಾಜ್ಯಕ್ಕೆ ಕರ್ನಾಟಕವು ಹೆಚ್ಚು ಕಾವೇರಿ ನೀರು ಬಿಡುವಂತೆ ಆಗ್ರಹಿಸಿ ಅರೆಬೆತ್ತಲಾಗಿ ಭಿಕ್ಷೆ ಬೇಡಿ, ತಲೆ ಬುರುಡೆ ಹಿಡಿದುಕೊಂಡು ಸೋಮವಾರ ಪ್ರತಿಭಟನೆ ನಡೆಸಿದ್ದ ತಮಿಳುನಾಡಿನ ಅದೇ ರೈತರು, ಮಂಗಳವಾರ ಸತ್ತ ಇಲಿಗಳನ್ನು ತಮ್ಮ ಬಾಯಿಯಲ್ಲಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದಾರೆ.

ತಿರುಚನಾಪಳ್ಳಿ: ರಾಜ್ಯಕ್ಕೆ ಕರ್ನಾಟಕವು ಹೆಚ್ಚು ಕಾವೇರಿ ನೀರು ಬಿಡುವಂತೆ ಆಗ್ರಹಿಸಿ ಅರೆಬೆತ್ತಲಾಗಿ ಭಿಕ್ಷೆ ಬೇಡಿ, ತಲೆ ಬುರುಡೆ ಹಿಡಿದುಕೊಂಡು ಸೋಮವಾರ ಪ್ರತಿಭಟನೆ ನಡೆಸಿದ್ದ ತಮಿಳುನಾಡಿನ ಅದೇ ರೈತರು, ಮಂಗಳವಾರ ಸತ್ತ ಇಲಿಗಳನ್ನು ತಮ್ಮ ಬಾಯಿಯಲ್ಲಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯದ ತಿರುಚನಾಪಳ್ಳಿಯ ರೈತರ ಗುಂಪೊಂದು ಸತ್ತ ಇಲಿಗಳನ್ನು ಬಾಯಿಯಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ಓರ್ವ ಮಹಿಳೆ ಹಾಗೂ ನಾಲ್ಕೈದು ಜನ ಪುರುಷರು ತಮ್ಮ ಬಾಯಿಯಲ್ಲಿ ಸತ್ತ ಇಲಿ ಇಟ್ಟುಕೊಂಡು ಕುಳಿತಿರುವ ಪ್ರತಿಭಟನೆಯ ದೃಶ್ಯಗಳು ವೈರಲ್ ಆಗಿವೆ.
ಕಾವೇರಿ ವಿಚಾರದಲ್ಲಿ ನಮ್ಮಲ್ಲೇ ಒಗ್ಗಟ್ಟಿಲ್ಲ: ಬೇಸರ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ
ರಾಷ್ಟ್ರೀಯ ದಕ್ಷಿಣ ಭಾರತ ನದಿ ಜೋಡಣೆ ಕೃಷಿಕರ ಸಂಘ ಸದಸ್ಯರು ರೈತ ನಾಯಕ ಅಯ್ಯಕಣ್ಣು ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಅಯ್ಯಕಣ್ಣು, ‘ರಾಜ್ಯಕ್ಕೆ ಕಾವೇರಿ ನದಿ ನೀರು ಬಿಡದೆ ಕರ್ನಾಟಕ ಸರ್ಕಾರ ರೈತರನ್ನು ವಂಚಿಸುತ್ತದೆ. ನೀರಿನ ಕೊರತೆಯಿಂದ ಕೃಷಿ ಮಾಡಲು ಸಾಧ್ಯವಾಗದೆ ಜನರು ಆಹಾರದ ಕೊರತೆ ಎದುರಿಸುತ್ತಿದ್ದಾರೆ’ ಎಂದಿದ್ದಾರೆ.
ಬೆಂಗಳೂರು ಬಂದ್ ಆಯ್ತು, ನಾಡಿದ್ದು ಕರ್ನಾಟಕ ಬಂದ್! ಡಿಕೆಶಿ ಏನು ಹೇಳಿದ್ರು?