ಕಾವೇರಿ ಜಲವಿವಾದ: ಇಂದು ಸಿಡಬ್ಲ್ಯುಆರ್‌ಸಿ ಸಭೆ, ರಾಜ್ಯಕ್ಕೆ ಮತ್ತೆ ಢವಢವ!
ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿ ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ) ಸಭೆ ಮಂಗಳವಾರ ನಡೆಯಲಿದೆ. ರಾಜ್ಯದಲ್ಲಿರುವ ಬರ ಪರಿಸ್ಥಿತಿಯನ್ನು ನೋಡಿಕೊಂಡು ಸಮಿತಿ ಈ ಬಾರಿ ತಮಿಳುನಾಡಿಗೆ ನೀರುಹರಿಸುವ ಆದೇಶ ನೀಡಲಿಕ್ಕಿಲ್ಲ ಎಂಬ ನಿರೀಕ್ಷೆ ರಾಜ್ಯಕ್ಕಿದೆ.

ನವದೆಹಲಿ (ಸೆ.26): ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿ ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ) ಸಭೆ ಮಂಗಳವಾರ ನಡೆಯಲಿದೆ. ರಾಜ್ಯದಲ್ಲಿರುವ ಬರ ಪರಿಸ್ಥಿತಿಯನ್ನು ನೋಡಿಕೊಂಡು ಸಮಿತಿ ಈ ಬಾರಿ ತಮಿಳುನಾಡಿಗೆ ನೀರುಹರಿಸುವ ಆದೇಶ ನೀಡಲಿಕ್ಕಿಲ್ಲ ಎಂಬ ನಿರೀಕ್ಷೆ ರಾಜ್ಯಕ್ಕಿದೆ.
ಈಗಾಗಲೇ ಸಮಿತಿಯ ಎರಡು ಆದೇಶಗಳನ್ನು ಪಾಲಿಸಿರುವ ರಾಜ್ಯ ಸರ್ಕಾರ ಮತ್ತೆ ನೀರು ಬಿಡುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟಲ್ಲಿ ವಾದಿಸಿದ್ದು, ಇದೇ ಅಭಿಪ್ರಾಯವನ್ನು ಮಂಗಳವಾರವೂ ಪುನರಾವರ್ತಿಸಲಿದೆ.
ಡಿಕೆಶಿ ಮುಚ್ಚಿಟ್ಟಿರುವ ಸತ್ಯ ಏನು? ಬಹಿರಂಗಪಡಿಸಲಿ: ಎಚ್‌ಡಿಕೆ ಸವಾಲು
ಕೇಂದ್ರ ಜಲ ಆೋಗದ ಸದಸ್ಯ ವಿನೀತ್ ಗುಪ್ತಾ ಅಧ್ಯಕ್ಷತೆಯ ಈ ಸಭೆಯಲ್ಲಿ ಕರ್ನಾಟಕದಿಂದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ನಂತರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಈ ಹಿಂದಿನ ಎರಡು ಸಭೆಗಳಲ್ಲೂ ರಾಜ್ಯಕ್ಕೆ ನಿತ್ಯ 15 ದಿನ 5 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಸಮಿತಿ ಸೂಚಿಸಿತ್ತು. ಈ ಆದೇಶವನ್ನೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೂಡ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸೆ.21ರಂದು ನಡೆದ ವಿಚಾರಣೆ ವೇಳೆ ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶಿಸಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು. ಜತೆಗೆ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತ್ತು.
ಕಾವೇರಿ ಜಲವಿವಾದ: ಎರಡೂ ಬಂದ್‌ಗೆ ನಮ್ಮ ಬೆಂಬಲವಿಲ್ಲ- ಕರವೇ ನಾರಾಯಣಗೌಡ