ಡಿಕೆಶಿ ಮುಚ್ಚಿಟ್ಟಿರುವ ಸತ್ಯ ಏನು? ಬಹಿರಂಗಪಡಿಸಲಿ: ಎಚ್‌ಡಿಕೆ ಸವಾಲು
ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸತ್ಯ ಹೇಳಿದರೆ ಕರ್ನಾಟಕಕ್ಕೆ ಇನ್ನೂ ತೊಂದರೆಯಾಗಲಿದೆ ಎಂಬುದಾಗಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸತ್ಯ ಯಾಕೆ ಮುಚ್ಚಿಟ್ಟಿದ್ದಾರೆ? ಸತ್ಯಾಂಶ ಹೇಳದಿದ್ದರೆ, ಅವರಿಗೆ ಗೌರವ ಎಲ್ಲಿ ಉಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಸೆ.26) ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸತ್ಯ ಹೇಳಿದರೆ ಕರ್ನಾಟಕಕ್ಕೆ ಇನ್ನೂ ತೊಂದರೆಯಾಗಲಿದೆ ಎಂಬುದಾಗಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸತ್ಯ ಯಾಕೆ ಮುಚ್ಚಿಟ್ಟಿದ್ದಾರೆ? ಸತ್ಯಾಂಶ ಹೇಳದಿದ್ದರೆ, ಅವರಿಗೆ ಗೌರವ ಎಲ್ಲಿ ಉಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಾಂಶವನ್ನು ಮುಚ್ಚಿಟ್ಟರೆ ಸುಪ್ರೀಂಕೋರ್ಟ್ ಹೇಗೆ ಅವರ ಪರವಾಗಿ ತೀರ್ಪು ಕೊಡಲಿದೆ? ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದರು. ಇಬ್ಬರೂ ಹೋಗಿ ಏನು ಅರ್ಜಿ ಕೊಟ್ಟು ಬಂದರು ಎಂದು ಹೇಳಬೇಕಲ್ಲವೇ? ಸುಪ್ರೀಂಕೋರ್ಟ್ ಮುಂದೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಯಾವ ವಾಸ್ತವಾಂಶವನ್ನು ಈ ಸರ್ಕಾರ ಇಟ್ಟಿದೆ ಎಂದು ಪ್ರಶ್ನಿಸಿದರು.
ಕಾವೇರಿ ಜಲವಿವಾದ: ಎರಡೂ ಬಂದ್‌ಗೆ ನಮ್ಮ ಬೆಂಬಲವಿಲ್ಲ- ಕರವೇ ನಾರಾಯಣಗೌಡ
ಕುಮಾರಸ್ವಾಮಿ ಅವರು ಅಮಿತ್ ಶಾ ಅವರ ಜತೆ ಮಾತಾಡಿಕೊಂಡು ಬಂದಿದ್ದಾರೆ. ಅಲ್ಲೇ ಕಾವೇರಿ ವಿಚಾರವಾಗಿ ಮಾತಾಡಬೇಕಿತ್ತು ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಅವರು ಮೊದಲೇ ಹೇಳಿದ್ದರೆ ಮಾತಾಡಿಕೊಂಡು ಬರುತ್ತಿದ್ದೆ ಎಂದು ಕಿಡಿಕಾರಿದರು.
ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಾಹಿತಿಗಳನ್ನು ಕೊಡುವುದರಲ್ಲಿ ಎಡವಿದೆ. ಅದನ್ನೆಲ್ಲ ಪ್ರಧಾನಿಗಳ ಗಮನಕ್ಕೆ ದೇವೇಗೌಡರು ತಂದಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ನಮ್ಮ ಅಧಿಕಾರಿಗಳು ಇಲ್ಲಿ ಕುಳಿತುಕೊಂಡು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗುತ್ತಾರೆ. ಆದರೆ ತಮಿಳುನಾಡಿನಿಂದ 15 ಜನ ನೇರವಾಗಿ ಬಂದು ಭಾಗಿಯಾಗುತ್ತಾರೆ. ನಮ್ಮ ಅಧಿಕಾರಿಗಳು ಒಂದು ಕಡೆ ಬ್ಯುಸಿಯಾದರೆ, ನಮ್ಮ ಆಡಳಿತಗಾರರು ಮತ್ತೊಂದೆಡೆ ಕಡೆ ಬ್ಯುಸಿಯಾಗಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರು ಬಂದ್: ಮಧ್ಯರಾತ್ರಿಯಿಂದಲೇ ನಗರದಲ್ಲಿ ಸೆಕ್ಷನ್ 144 ಜಾರಿ!