ಆರೈಕೆಗೆ ಬಿಟ್ಟಿದ್ದ ಮಹಿಳೆಯಿಂದಲೇ ಮಗುವಿನ ಮೇಲೆ ಬರ್ಬರ ಹಲ್ಲೆ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
- ಕೆಲಸದಾಕೆಯಿಂದ ಮಗುವಿನ ಮೇಲೆ ನಿರ್ದಯವಾಗಿ ಹಲ್ಲೆ
- ಮಗುವನ್ನು ನೋಡಿಕೊಳ್ಳಲು ಮಹಿಳೆಯನ್ನು ನಿಯೋಜಿಸಲಾಗಿತ್ತು
- ಗುಜರಾತ್‌ನ ಸೂರತ್‌ನಲ್ಲಿ ಘಟನೆ
ಗುಜರಾತ್(ಫೆ.5): ಮಗುವನ್ನು ನೋಡಿಕೊಳ್ಳಲೆಂದು ನಿಯೋಜಿಸಿದ್ದ ಮಹಿಳೆಯೇ ಎಂಟು ತಿಂಗಳ ಮಗುವಿನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿದ ಘಟನೆ ಗುಜರಾತ್‌ನಲ್ಲಿ ನಡೆದಿದ್ದು, ಘಟನೆಯಿಂದ ಗಂಭೀರ ಗಾಯಗೊಂಡ ಮಗುವಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಸೂರತ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ಮಧ್ಯೆ ಮಗು ಹೋರಾಡುತ್ತಿದೆ.
ಗುಜರಾತ್‌ನ (Gujarat) ಸೂರತ್ (Surat)ಜಿಲ್ಲೆಯಲ್ಲಿ ಈ ಭೀಕರ ಘಟನೆ ನಡೆದಿದೆ. ಮಗುವಿನ ಕುಟುಂಬವು ಸೂರತ್‌ನ ರಾಂದರ್ ಪಾಲನ್‌ಪುರ್ ಪಾಟಿಯಾ (Rander Palanpur Patiya)ದಲ್ಲಿ ವಾಸಿಸುತ್ತಿದೆ. ಮಗುವಿನ ಪೋಷಕರು ಇಬ್ಬರೂ ಉದ್ಯೋಗಿಗಳಾಗಿದ್ದು, ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಒಬ್ಬ ಕೇರ್‌ಟೇಕರ್ ಅನ್ನು ನೇಮಿಸಿಕೊಂಡಿದ್ದರು. ಆದರೆ, ಮಗು ಪೋಷಕರ ಅನುಪಸ್ಥಿತಿಯಲ್ಲಿ ಅಳುತ್ತಿರುವ ಬಗ್ಗೆ ನೆರೆಹೊರೆಯವರು ತಿಳಿಸಿದ ನಂತರ ದಂಪತಿಗಳು ತಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು.
ಚಡ್ಡಿಯಲ್ಲಿ ಸೂಸು ಮಾಡಿದ ಮಗುವಿಗೆ ಚಾಕುವಿನಿಂದ ಹಲ್ಲೆ
ಇದರಿಂದ ಕೇರ್‌ಟೇಕರ್ ಮಗುವನ್ನು ಅಮಾನುಷವಾಗಿ ಥಳಿಸುವ ದೃಶ್ಯ ಬಯಲಿಗೆ ಬಂದಿದ್ದು, ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ, ಮಗುವನ್ನು ನೋಡಿಕೊಳ್ಳುವಾಕೆ ಅವರು ಪದೇ ಪದೇ ಮಗುವಿನ ತಲೆಯನ್ನು ಹಾಸಿಗೆಗೆ ಹೊಡೆಯುತ್ತಿರುವುದು, ಮಗುವಿನ ಕೂದಲನ್ನು ತಿರುಚಿ ಎಳೆಯುವುದು ಯಾವುದೇ ಕರುಣೆ ಇಲ್ಲದೇ ಕ್ರೂರವಾಗಿ ವರ್ತಿಸುವುದನ್ನು ಕಾಣಬಹುದು. ಘಟನೆಯ ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯ ಪುಟ್ಟ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
3 ವರ್ಷದ ಕಂದನನ್ನು ಝೂನಲ್ಲಿ ಕರಡಿ ಇದ್ದ ಗೂಡಿಗೆ ಎಸೆದ ತಾಯಿ... ಕೃತ್ಯ ಕ್ಯಾಮರಾದಲ್ಲಿ ಸೆರೆ