Asianet Suvarna News Asianet Suvarna News

3 ವರ್ಷದ ಕಂದನನ್ನು ಝೂನಲ್ಲಿ ಕರಡಿ ಇದ್ದ ಗೂಡಿಗೆ ಎಸೆದ ತಾಯಿ... ಕೃತ್ಯ ಕ್ಯಾಮರಾದಲ್ಲಿ ಸೆರೆ

  • ತಾಯಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು
  • ಮಗುವನ್ನು ಕರಡಿ  ಇದ್ದ ಗೂಡಿಗೆ ಎಸೆದ ತಾಯಿ
  • ರಷ್ಯಾದ ತಾಷ್ಕೆಂಟ್‌ನಲ್ಲಿ ಘಟನೆ
Woman Throws Her 3-Year-Old Daughter Into Zoos Bear Pit, Charged With Attempted Murder akb
Author
Bangalore, First Published Feb 2, 2022, 4:44 PM IST | Last Updated Feb 2, 2022, 4:44 PM IST

ತಾಷ್ಕೆಂಟ್‌(ಫೆ.2): ಮೃಗಾಲಯವೊಂದಕ್ಕೆ ಬಂದ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಕಂದನನ್ನು ಎತ್ತಿ ಕರಡಿಗಳಿದ್ದಂತಹ ಸ್ಥಳಕ್ಕೆ ಎಸೆದ ಘಟನೆ ನಡೆದಿದೆ. ಉಜ್ಬೇಕಿಸ್ತಾನ್‌ನ (Uzbekistan) ತಾಷ್ಕೆಂಟ್‌ನಲ್ಲಿ(Tashkent) ಈ ಅವಘಡ ಸಂಭವಿಸಿದ್ದು ಮಹಿಳೆ ವಿರುದ್ಧ ಕೊಲೆಗೆ ಯತ್ನಿಸಿದ ಪ್ರಕರಣ ದಾಖಲಾಗಿದೆ. ಮಹಿಳೆಯನ್ನು ಪ್ರಕರಣದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

ಡೈಲಿ ಮೇಲ್‌(Daily Mail) ವರದಿ ಪ್ರಕಾರ ತಾಯಿ ಮಗುವನ್ನು ಕರಡಿಗಳಿರುವ ಪ್ರದೇಶದ ಸುತ್ತಲು ಹಾಕಿದ್ದ ಕಂಬಿಗಳ ಮೇಲಿನಿಂದ ಸುಮಾರು 16 ಅಡಿ ಕೆಳಗಿನ ಕಂದಕಕ್ಕೆ  ಎಸೆಯುವುದು ವೀಡಿಯೊದಲ್ಲಿ ಕಾಣಿಸುತ್ತಿದೆ. ಈ ವೇಳೆ ಗೂಡಿನಲ್ಲಿ ಜುಜು ಎಂಬ ಒಂದು ಕಂದು ಬಣ್ಣದ ಕರಡಿ ಇತ್ತು. ಮಗು ಕೆಳಗೆ ಬೀಳುತ್ತಿದ್ದಂತೆ ಕರಡಿ ಅದರ ಬಳಿ ಓಡಿ ಹೋಗುತ್ತದೆ. ಜೊತೆಗೆ ಸುತ್ತಲಿದ್ದವರು ಕೂಡ ಕರಡಿ ಇದ್ದ ಸ್ಥಳಕ್ಕೆ ಬಂದು ಮಗುವನ್ನು ಎತ್ತಿ ಕರೆದೊಯ್ಯುತ್ತಾರೆ. ಇತ್ತ ತಾಯಿ (Mother) ಈ ಕೃತ್ಯವೆಸಗಿದಾಗ ಅಲ್ಲಿದ್ದವರು ಅಸಹಾಯಕತೆಯಿಂದ ನೋಡುತ್ತಿದ್ದರು ಮತ್ತು ಮಹಿಳೆ ತನ್ನ ಮಗುವನ್ನು(Baby) ಕೆಳಗೆ ಎಸೆದಾಗ ತಡೆಯಲು ಯತ್ನಿಸಿದರಾದರು ಅಷ್ಟರಲ್ಲಾಗಲೇ ಮಗು ಕೆಳಗೆ ಬಿದ್ದಾಗಿತ್ತು. 

 

ಅದೃಷ್ಟವಶಾತ್, ಮೃಗಾಲಯದ (Zoo) ಸಿಬ್ಬಂದಿ ಕರಡಿಯನ್ನು ಪಂಜರದ ಒಳಭಾಗಕ್ಕೆ ಸೆಳೆಯುವಲ್ಲಿ ಯಶಸ್ವಿಯಾದರು. ಬಳಿಕಚಿಕ್ಕ ಹುಡುಗಿಯನ್ನು ರಕ್ಷಿಸಲು ಧಾವಿಸಿದರು, ಕೆಳೆಗೆ ಬಿದ್ದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಗುವನ್ನು ಎಸೆದ ತಾಯಿಯನ್ನು  ಬಂಧಿಸಲಾಗಿದೆ. ಆಕೆಯ ವಿರುದ್ಧ ಕೊಲೆಗೆ ಯತ್ನಿಸಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಅಪರಾಧ ಸಾಬೀತಾದರೆ 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. 

Parenting Challenge: ರಾಶಿಯ ಅನುಸಾರ, ತಾಯಿಯಾಗಿ ನೀವು ಹೇಗಿರಲಿದ್ದೀರಿ?

ಎಳೆಯ ಪ್ರಾಯದ ಮಹಿಳೆಯೊಬ್ಬಳು ಮಗುವನ್ನು ಕಂದು ಕರಡಿಯಿದ್ದ ಸ್ಥಳಕ್ಕೆ ಎಸೆದಳು. ಆದರೆ ಆಕೆಯ ಉದ್ದೇಶ ಏನು ಎಂಬುದು ಸಂಪೂರ್ಣವಾಗಿ ಅಸ್ಪಷ್ಟವಾಗಿದೆ ಎಂದು ಮೃಗಾಲಯದ ವಕ್ತಾರರು ತಿಳಿಸಿದ್ದಾರೆ. ಕರಡಿಯು ಒಂದು ವೇಳೆ ಬೇಟೆಯಾಡಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಯೋಚಿಸಲು ಸಹ ನಾವು ಹೆದರುತ್ತೇವೆ ಎಂದು ಮೃಗಾಲಯದ ಸಿಬ್ಬಂದಿ ಹೇಳಿದ್ದಾರೆ. 

ಬಡತನದ ಹಿನ್ನೆಲೆಯಲ್ಲಿ ಈ 30 ವರ್ಷದ ಮಹಿಳೆಯ ಪತಿ ಆಕೆಯನ್ನು ಬಿಟ್ಟು ರಷ್ಯಾದಲ್ಲಿ (Russia)  ಕೆಲಸ ಮಾಡಲು ಹೋಗಿದ್ದರಿಂದ ಆಕೆ ಖಿನ್ನತೆಗೊಳಗಾಗಿದ್ದಳು. ಅಲ್ಲದೇ ಆಕೆ   ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದು ಪ್ರಸ್ತುತ ತನ್ನ ವಯಸ್ಸಾದ ತಂದೆ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾಳೆ. 

Parenting Tips: ತಪ್ಪು ಮಾಡಿದ ಮಕ್ಕಳನ್ನು ಶಿಕ್ಷಿಸುವ ಅಮ್ಮನಿಗ್ಯಾಕೆ ದೂಷಣೆಯ ಉಡುಗೊರೆ?

ಘಟನೆಯ ವಿಡಿಯೋವನ್ನು ಇರಾನ್‌ನ ಮೊದಲ ಅಂತಾರಾಷ್ಟ್ರೀಯ ನ್ಯೂಸ್ ಏಜೆನ್ಸಿ ಆಗಿರುವ ಪ್ರೆಸ್‌ ಟಿವಿ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದೆ.  ಪ್ರೆಸ್‌ ಟಿವಿ ಇಂಗ್ಲೀಷ್‌ ಹಾಗೂ ಫ್ರೆಂಚ್‌ ಭಾಷೆಯಲ್ಲಿ ಸುದ್ದಿ ಪ್ರಸಾರ ಮಾಡುತ್ತದೆ. ಇಸ್ಲಾಮಿಕ್‌ ರಿಪಬ್ಲಿಕ್ ಆಫ್ ಇರಾನ್‌ನಿಂದ ಈ ಸುದ್ದಿ ಏಜೆನ್ಸಿ ಮಾನ್ಯತೆ ಪಡೆದಿದೆ.

Latest Videos
Follow Us:
Download App:
  • android
  • ios