Asianet Suvarna News Asianet Suvarna News

ಹೃದಯಾಘಾತ: ಬೆಂಗಾಲಿ ಸಚಿವ ಸುಬ್ರತಾ ಸಾಹಾ ನಿಧನ

ಪಶ್ಚಿಮ ಬಂಗಾಳ ಸರ್ಕಾರದ ಸಚಿವ ಸುಬ್ರತಾ ಸಾಹಾ ಅವರು ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಇವರು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸರಕಾರದಲ್ಲಿ ಸಚಿವರಾಗಿದ್ದರು.

cardiac arrest west Bengal minister Subrata Saha dies at 72 akb
Author
First Published Dec 29, 2022, 4:18 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರದ ಸಚಿವ ಸುಬ್ರತಾ ಸಾಹಾ ಅವರು ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಇವರು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸರಕಾರದಲ್ಲಿ ಸಚಿವರಾಗಿದ್ದರು. ತೀವ್ರವಾದ ಎದೆನೋವಿನ ಹಿನ್ನೆಲೆಯಲ್ಲಿ ಅವರನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಎದೆನೋವಿನ ಹಿನ್ನೆಲೆಯಲ್ಲಿ ಅವರನ್ನು ಮುರ್ಷಿದಾಬಾದ್‌ನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಉಳಿಸಿಕೊಳ್ಳಲು ವೈದ್ಯರು ಎಲ್ಲಾ ಪ್ರಯತ್ನ ಮಾಡಿದ ಹೊರತಾಗಿಯೂ ಇಂದು ಮುಂಜಾನೆ 10. 40 ರ ಸುಮಾರಿಗೆ ಅವರು ಸಾವನ್ನಪ್ಪಿದ್ದಾರೆ. ಇವರು ಪತ್ನಿ ಮಗ ಹಾಗೂ ಸೊಸೆಯನ್ನು ಅಗಲಿದ್ದಾರೆ. 

ಮುರ್ಷಿದಾಬಾದ್ ಜಿಲ್ಲೆಯ (Murshidabad district) ಸಗರ್‌ದಿಘಿ (Sagardighi) ವಿಧಾನಸಭಾ ಕ್ಷೇತ್ರದಿಂದ ಅವರು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೂರು ಬಾರಿ ಗೆದ್ದು ಬಂದಿದ್ದರು. ಸತತವಾಗಿ 2011, 2016 ಹಾಗೂ 2019ರಲ್ಲಿ ಶಾಸಕರಾಗಿ ಈ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಇಡೀ ಮುರ್ಷಿದಾಬಾದ್ ಜಿಲ್ಲೆಯಿಂದ ಮೊದಲ ಬಾರಿ ಆಯ್ಕೆಯಾದ ತೃಣಮೂಲ ಕಾಂಗ್ರೆಸ್‌ನ ಶಾಸಕರು (Trinamool Congress MLA) ಇವರಾಗಿದ್ದಾರೆ. ಈ ಜಿಲ್ಲೆಯನ್ನು ಕಾಂಗ್ರೆಸ್‌ನ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು. 

ಯುಪಿಯಂತೆ ಬಂಗಾಳದಲ್ಲಿ ಬುಲ್ಡೋಜರ್‌ಗಳು ಓಡುತ್ತವೆ: ಬಿಜೆಪಿ ನಾಯಕ ಸುವೇಂದು ಅಧಿಕಾರಿ

ಸಚಿವರ ನಿಧನಕ್ಕೆ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಶೋಕ ವ್ಯಕ್ತಪಡಿಸಿದ್ದು, ಅವರು ಕುಟುಂಬ ಸದಸ್ಯರಿಗೆ ಸಮಾಧಾನ ಹೇಳಿದ್ದಾರೆ. ಸುಬ್ರತ್ ಸಾಹಾ ಅವರ ನಿಧನದಿಂದ ನನಗೆ ಬಹಳ ಬೇಸರವಾಗಿದೆ. ಸಕ್ರಿಯ ರಾಜಕೀಯ ಜೀವನದ ಜೊತೆ ಅವರು ಅನೇಕ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಅವರೊಂದಿಗೆ ನನ್ನ ವೈಯಕ್ತಿಕ ಸಂಬಂಧ ಬಹಳ ಸೌಹಾರ್ದಯುತವಾಗಿತ್ತು (cordial). ರಾಜಕೀಯ ಹಾಗೂ ಸಮಾಜಕ್ಕೆ ಅವರು ನೀಡಿರುವ ಕೊಡುಗೆಯಿಂದ ಅವರು ಸದಾಕಾಲ ನೆನಪಿನಲ್ಲಿರುತ್ತಾರೆ. ಇವರ ನಿಧನದಿಂದ ರಾಜ್ಯದ ರಾಜಕೀಯ ವಲಯವೂ ಖಾಲಿ ಖಾಲಿ ಎನಿಸಿದೆ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ಸಿಗಲಿ ಎಂದು ಸಿಎಂ (Chief Minister)  ಮಮತಾ ಬ್ಯಾನರ್ಜಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. 

ಬಿಕಿನಿ ಹಾಕಿದ್ರೂ ಸಮಸ್ಯೆ, ಹಿಜಾಬ್ ಧರಿಸಿದ್ರೂ ಸಮಸ್ಯೆ; 'ಬೇಷರಂ ರಂಗ್' ವಿವಾದಕ್ಕೆ ಟಿಎಂಸಿ ಸಂಸದೆ ನುಸ್ರುತ್

 

Follow Us:
Download App:
  • android
  • ios