ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಮಗು ಗಾಳಿಯಲ್ಲಿ ಹಾರಿ ರಸ್ತೆಗೆ ಬಿದ್ದ ಭಯಾನಕ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಪುಣೆ: ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಮಗು ಗಾಳಿಯಲ್ಲಿ ಹಾರಿ ರಸ್ತೆಗೆ ಬಿದ್ದ ಭಯಾನಕ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಬೈಕ್ ಸವಾರ ತಿರುವು ತೆಗೆದುಕೊಳ್ಳುವ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಹಾಗೂ ಮಗು ಮೇಲೆ ಹಾರಿ ರಸ್ತೆಗೆ ಬಿದ್ದಿದ್ದಾರೆ. ಈ ಅವಘಡದ ವಿಡಿಯೋ ಘಟನಾ ಸ್ಥಳದ ಸಮೀಪದ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಬೆಚ್ಚಿ ಬೀಳಿಸುವಂತಿದೆ.
ಬೆಲ್ಹೆ ಜೆಜುರಿ ಹೆದ್ದಾರಿಯಲ್ಲಿ (Belhe-Jejuri highway) ಜುನ್ನರ್ ಪ್ರದೇಶದ ಟಿ ಪಾಯಿಂಟ್ ಬಳಿ ಈ ಘಟನೆ ನಡೆದಿದೆ. ಪಕ್ಕದ ರಸ್ತೆಯಿಂದ ಬಂದ ಬೈಕ್ ಸವಾರ ಮುಂದೆ ಬರುತ್ತಿದ್ದ ಕಾರನ್ನು ಗಮನಿಸದೇ ತಿರುವು ಪಡೆಯಲು ಮುಂದಾಗಿದ್ದಾನೆ. ಈ ವೇಳೆ ವೇಗವಾಗಿ ಬರುತ್ತಿದ್ದ ಬಿಳಿ ಬಣ್ಣದ ವ್ಯಾಗನಾರ್ ಕಾರು ಈತನ ಬೈಕ್‌ಗೆ ಡಿಕ್ಕಿಯಾಗಿ ಈ ಅನಾಹುತ ಸಂಭವಿಸಿದೆ. ಅದೃಷ್ಟವಶಾತ್ ಈ ಅನಾಹುತದಲ್ಲಿ ಬೈಕ್‌ನಿಂದ ಕೆಳಗೆ ಬಿದ್ದ ತಾಯಿ ಮಗು ಪವಾಡಸದೃಶವಾಗಿ ಪಾರಾಗಿದ್ದಾರೆ. ಅಪಘಾತವಾದ ಕೂಡಲೇ ಕಾರು ನಿಲ್ಲಿಸಿದ ಚಾಲಕ ಕೆಳಗಿಳಿದು ಬಂದು ಬೈಕ್‌ನಿಂದ ಬಿದ್ದವರ ಕ್ಷೇಮ ವಿಚಾರಿಸಿದ್ದಾರೆ.
ಇತ್ತೀಚೆಗೆ ಈ ರಸ್ತೆ ದುರಸ್ತಿಗೊಂಡಿದ್ದು, ಇದಾದ ಬಳಿಕ ಇಲ್ಲಿ ಅಪಘಾತಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಸೋಲಾಪುರದ ಬಳಿ ನಡೆದ ಇದೇ ರೀತಿಯ ಅಪಘಾತವೊಂದರಲ್ಲಿ ಕಾರೊಂದು ತೀರ್ಥಯಾತ್ರೆ ಹೊರಟವರಿಗೆ ಡಿಕ್ಕಿ ಹೊಡೆದ ಪರಿಣಾಮ 7 ಜನ ಸಾವಿಗೀಡಾಗಿದ್ದರು.
ರಸ್ತೆ ದಾಟುವಾಗ ಮಹಿಳೆ ಮೇಲೆ ಹರಿದ ಬಸ್: ಅಪಘಾತದ ಭಯಾನಕ ವಿಡಿಯೋ ವೈರಲ್
ಸುಮಾರು 32 ಜನ ತೀರ್ಥಯಾತ್ರಿಗಳು (pilgrims) ಪಾದಯಾತ್ರೆ ಮೂಲಕ ಕೊಲ್ಹಾಪುರದ (Kolhapur) ಜಿಲ್ಲೆಯ ಜತ್ತರ್ವಾಡಿ (Jatharwadi) ಗ್ರಾಮದಿಂದ ಪಂಡರಪುರಕ್ಕೆ ಹೊರಟಿದ್ದರು. ಕೊಲ್ಹಾಪುರದಿಂದ ಹೊರಟು ಮೂರು ದಿನ ಕಳೆದು ಸಂಗೋಲಾ ತಲುಪುವ ವೇಳೆ ವೇಗವಾಗಿ ಬಂದ ಸ್ಪೋರ್ಟ್ಸ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅನಾಹುತ ಸಂಭವಿಸಿತ್ತು.
Rambha Car Accident ನಟಿ ರಂಭಾ ಕಾರು ಅಪಘಾತ; ಮಗಳು ಆಸ್ಪತ್ರೆಯಲ್ಲಿ ಸೀರಿಯಸ್
ದಿನಗಳ ಹಿಂದೆಯಷ್ಟೇ ದೆಹಲಿಯ (Delhi) ಕರೋಲ್ ಭಾಗ್ (Karol Bagh) ಬಳಿ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಬಸ್ ಡಿಕ್ಕಿ ಹೊಡೆದು ಅವರು ಸಾವನ್ನಪ್ಪಿದ್ದರು. ಈ ದೃಶ್ಯ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಟ್ರಾಫಿಕ್ ನಿಂತಿದ್ದ ಕಾರಣ ಮಹಿಳೆ ರಸ್ತೆ ದಾಟಲು ಮುಂದಾಗಿದ್ದು, ಈ ವೇಳೆ ನಿಂತಿದ್ದ ಬಸ್ ಮುಂದಕ್ಕೆ ಚಲಿಸಿದ ಪರಿಣಾಮ ಮಹಿಳೆ ಬಸ್ ಕೆಳಗೆ ಸಿಲುಕಿ ಸಾವನ್ನಪ್ಪಿದ್ದರು.