ದೆಹಲಿಯಲ್ಲಿ ನಡೆದ ಅಪಘಾತದ ಭಯಾನಕ ದೃಶ್ಯದ ವಿಡಿಯೋವೊಂದು ವೈರಲ್ ಆಗಿದೆ. ಮಹಿಳೆಯೊಬ್ಬಳು ರಸ್ತೆ ದಾಟಲು ಪ್ರಯತ್ನಿಸುವ ವೇಳೆ ಬಸ್ ಆಕೆಗೆ ಡಿಕ್ಕಿ ಹೊಡೆದು ಮುಂದೆ ಸಾಗಿದೆ. ಪರಿಣಾಮ ಮಹಿಳೆ ಬಸ್ ಕೆಳಗೆ ಬಿದ್ದಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿ: ಅಪಘಾತದ ಹಲವು ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಈಗ ದೆಹಲಿಯಲ್ಲಿ ನಡೆದ ಅಪಘಾತದ ಭಯಾನಕ ದೃಶ್ಯದ ವಿಡಿಯೋವೊಂದು ವೈರಲ್ ಆಗಿದೆ. ಮಹಿಳೆಯೊಬ್ಬಳು ರಸ್ತೆ ದಾಟಲು ಪ್ರಯತ್ನಿಸುವ ವೇಳೆ ಬಸ್ ಆಕೆಗೆ ಡಿಕ್ಕಿ ಹೊಡೆದು ಮುಂದೆ ಸಾಗಿದೆ. ಪರಿಣಾಮ ಮಹಿಳೆ ಬಸ್ ಕೆಳಗೆ ಬಿದ್ದಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿಯ (Delhi) ಕರೊಲ್ ಬಾಗ್‌ನಲ್ಲಿ(Karol Bagh) ಈ ಅನಾಹುತ ಸಂಭವಿಸಿದೆ. ವರದಿಯ ಪ್ರಕಾರ ಬಸ್ ಕೆಳಗೆ ಬಿದ್ದ ಮಹಿಳೆ ಗಂಭೀರ ಗಾಯಗಳಾಗಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಟ್ರಾಫಿಕ್ ನಿಂತಿದ್ದ ವೇಳೆ ಮಹಿಳೆ ರಸ್ತೆ ದಾಟಲು ಪ್ರಯತ್ನಿಸಿದ್ದು, ಆಕೆ ಪೂರ್ತಿ ರಸ್ತೆ ದಾಟುವ ಮೊದಲೇ ಸಿಗ್ನಲ್ ಫ್ರೀ ಆಗಿದ್ದು, ಬಸ್ ಆಕೆಗೆ ಡಿಕ್ಕಿ ಹೊಡೆದು ಮುಂದೆ ಸಾಗಿದೆ. ಮೃತ ಮಹಿಳೆಯನ್ನು ಸ್ವಪ್ನಾ ಯಾದವ್ ಎಂದು ಗುರುತಿಸಲಾಗಿದೆ. ಈ ಅಪಘಾತದ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ (CCTV camera) ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗುತ್ತಿದೆ.
ಮೃತ ಸ್ವಪ್ನಾ ಯಾದವ್ (Sapna Yadav), ಪೂರ್ವ ದೆಹಲಿಯ ಶಾಸ್ತ್ರೀ ಪಾರ್ಕ್ (Shastri Park) ನಿವಾಸಿಯಾಗಿದ್ದು, ಕಾಲ್ ಸೆಂಟರೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ರಸ್ತೆಯಲ್ಲಿ ಬಸ್ ನಿಂತಿದ್ದು, ಬಸ್‌ನ ಎಡಭಾಗದಿಂದ ಮಹಿಳೆ ರಸ್ತೆ ದಾಟುವ ಸಲುವಾಗಿ ಇತರ ವಾಹನಗಳನ್ನು ಕೂಡ ದಾಟಿಕೊಂಡು ಬಸ್‌ನ ಮುಂಭಾಗ ಬಂದು ಇನ್ನೇನು ಆ ತುದಿ ತಲುಪಬೇಕು ಎನ್ನುವಷ್ಟರಲ್ಲಿ ಬಸ್ ಚಲಿಸಲು ಆರಂಭಿಸಿದ್ದು, ಈ ಅನಾಹುತ ಸಂಭವಿಸಿದೆ.
ಫ್ಲೈ ಓವರ್‌ನಿಂದ ಕೆಳಗೆ ಬಿದ್ದು ಬೈಕ್ ಸವಾರರಿಬ್ಬರ ದುರ್ಮರಣ
ಎರಡು ದಿನಗಳ ಹಿಂದಷ್ಟೇ ಬಳ್ಳಾರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫ್ಲೈ ಓವರ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿತ್ತು. ದ್ವಿಚಕ್ರ ವಾಹನ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಫ್ಲೈ ಓವರ್‌ನಿಂದ ಹಾರಿ ಬಿದ್ದು ಮೃತಪಟ್ಟರೆ, ಸವಾರ ಗಂಭೀರವಾಗಿ ಗಾಯಗೊಂಡಿದ್ದ. ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ಅಮಿತ್ ಸಿಂಗ್(29) ಮತ್ತು ಅಮೋಲ್ ಪ್ರಮೋದ್ ಆಮ್ಟೆ(29) ಮೃತ ಹಿಂಬದಿ ಸವಾರರು. ಸವಾರ ಸೌರವ್ ದೇ(29) ಎಡಗೈ ಹಾಗೂ ತಲೆಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಶನಿವಾರ ಬೆಳಗ್ಗೆ 10.45ರ ಸುಮಾರಿಗೆ ಬಳ್ಳಾರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೈತರ ಸಂತೆ ಬಳಿ ಫ್ಲೈ ಓವರ್ ಮೇಲೆ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Dharwad; ಇದು ಕೊಲೆನಾ? ಅಹಜ ಸಾವಾ? ಅನುಮಾನಕ್ಕೆ ಎಡೆ ಮಾಡಿಕೊಟ್ಟ ಸಿಸಿಟಿವಿ ದೃಶ್ಯಗಳು!
ಮಹಾರಾಷ್ಟ್ರದ ಅಮೋಲ್ ಪ್ರಮೋದ್ ಆಮ್ಟೆ, ದೆಹಲಿಯ ಅಮಿತ್ ಸಿಂಗ್ ಹಾಗೂ ರಾಜಸ್ಥಾನದ ಸೌರವ್ ದೇ ನಗರದ ಎಚ್‌ಎಸ್‌ಆರ್ ಲೇಔಟ್‌ನ ನಿಪ್ಟ್ ಕಾಲೇಜಿನಲ್ಲಿ ಎಂಟೆಕ್ ವ್ಯಾಸಂಗ ಮಾಡುತ್ತಿದ್ದರು. ನಂದಿ ಬೆಟ್ಟಕ್ಕೆ ಜಾಲಿ ರೈಡ್ ಹೋಗುತ್ತಿರುವುದಾಗಿ ಸ್ನೇಹಿತರ ಬಳಿ ತಿಳಿಸಿ ಶನಿವಾರ ಮುಂಜಾನೆ ಮೂವರು ಒಂದೇ ದ್ವಿಚಕ್ರ ವಾಹನದಲ್ಲಿ ನಂದಿ ಬೆಟ್ಟಕ್ಕೆ ಹೋಗಿದ್ದರು. ನಂದಿ ಬೆಟ್ಟಕ್ಕೆ ತೆರಳಿ ಸುತ್ತಾಡಿಕೊಂಡು ನಗರಕ್ಕೆ ವಾಪಾಸಾಗುತ್ತಿದ್ದರು.
ಬಳ್ಳಾರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೈತರ ಸಂತೆ ಬಳಿ ಫ್ಲೈ ಓವರ್‌ನಲ್ಲಿ ಬರುವಾಗ ದ್ವಿಚಕ್ರ ವಾಹನದ ಸ್ಟ್ಯಾಂಡ್ ರಸ್ತೆ ಪಕ್ಕದ ಸಿಮೆಂಟ್ ಬ್ಲಾಕ್‌ಗೆ ತಗುಲಿದೆ. ಇದರಿಂದ ಸವಾರ ಸೌರವ್ ದೇನ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಭಸವಾಗಿ ಫ್ಲೈ ಓವರ್‌ನ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಿಂಬದಿ ಕುಳಿತಿದ್ದ ಅಮಿತ್ ಸಿಂಗ್ ಮತ್ತು ಪ್ರಮೋದ್ ಆಮ್ಟೆಫ್ಲೈ ಓವರ್‌ನಿಂದ ಹಾರಿ ಕೆಳ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಇಬ್ಬರ ತಲೆಗೆ ಗಂಭೀರ ಗಾಯವಾಗಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸೌರವ್ ದೇ ಹೆಲ್ಮೆಟ್ ಧರಿಸಿದ್ದ ಪರಿಣಾಮ ಕೈ ಹಾಗೂ ತಲೆಗೆ ಸಣ್ಣ ಪ್ರಮಾಣದ ಗಾಯವಾಗಿದೆ.
Rambha Car Accident ನಟಿ ರಂಭಾ ಕಾರು ಅಪಘಾತ; ಮಗಳು ಆಸ್ಪತ್ರೆಯಲ್ಲಿ ಸೀರಿಯಸ್